Thursday, December 26, 2019

ಜಾಣೆಯಾಗಿರು ನನ್ನ ಮಲ್ಲಿಗೆ.. ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ

ಹಾಡು:  ಜಾಣೆಯಾಗಿರು ನನ್ನ ಮಲ್ಲಿಗೆ.. ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ / Jaaneyagiru Nanna Mallige Nee Hennagi Bandiruve Illige
ಚಿತ್ರ: ಧರ್ಮ ದಾರಿ ತಪ್ಪಿತು (1982)/Dharma Dari Tappithu
ಸಾಹಿತ್ಯ: ನರೇಂದ್ರ ಬಾಬು
ಸಂಗೀತ: ರಮೇಶ್  ನಾಯ್ಡು

ಈ ಹಾಡನ್ನು ಇಲ್ಲಿ ಕೇಳಬಹುದು: https://www.youtube.com/watch?v=8hagRAK7Hms

ಜಾಣೆಯಾಗಿರು ನನ್ನ ಮಲ್ಲಿಗೆ.. ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ...
ಜಾಣೆಯಾಗಿರು ನನ್ನ ಮಲ್ಲಿಗೆ.. ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ...

ನಮ್ಮಲ್ಲಿ ಮುನಿಸೇಕೋ ದೇವಗೆ.. ಏ...ಏ...
ಬಾಳಲ್ಲಿ ಎಲ್ಲೇ ಇದೆ ಹೆಣ್ಣಿಗೆ...
ನಮ್ಮಲ್ಲಿ ಮುನಿಸೇಕೋ ದೇವಗೆ..
ಬಾಳಲ್ಲಿ ಎಲ್ಲೇ ಇದೆ ಹೆಣ್ಣಿಗೆ... ಏ...ಏ...

ಜಾಣೆಯಾಗಿರು ನನ್ನ ಮಲ್ಲಿಗೆ.. ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ...

ಮುದ್ದಾದ ಎಲೆ ಬಂತು ಬಾಳಿಗೆ.. ಮುಳ್ಳೆಲ್ಲ ಸೇರಿಹವು ಬೇಲಿಗೆ...
ಎಲೆಯು ಮುಳ್ಳಿನ ಮೇಲೆ ಬಿದ್ದರೂ ...ಮುಳ್ಳು ಆ ಎಲೆಯಲ್ಲಿ ಬಿದ್ದರೂ...
ನಾಶ ಆ ಎಲೆಗೆ ತಾನೇ ಮಲ್ಲಿಗೆ...  ನೀ ಮೈಮರೆಯ ಬೇಡ ಆ ಮುಳ್ಳಿಗೆ ... ಏ...ಏ...

ಜಾಣೆಯಾಗಿರು ನನ್ನ ಮಲ್ಲಿಗೆ.. ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ...

ಕಾಯಾಗಿ ಇರುವಲ್ಲಿ ನೆಮ್ಮದಿ... ಹೊಂಬಣ್ಣವಾದಾಗ ಬೇಗುದಿ ... ಈ..ಈ...
ಹಣ್ಣಾದ ಬಳಿಕವೇ ತೊಂದರೆ... ಕೀಟಕ್ಕೆ ಆಹಾರವಾದರೆ ...  ಏ...ಏ...
ಮಣ್ಣಿನ ಪಾಲೇನೇ ನಾಳೆಗೆ... ಆ ಹಣ್ಣಿರದು ದೇವನ ಪೂಜೆಗೆ...  ಏ...ಏ...

ಜಾಣೆಯಾಗಿರು ನನ್ನ ಮಲ್ಲಿಗೆ.. ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ...
ನಮ್ಮಲ್ಲಿ ಮುನಿಸೇಕೋ ದೇವಗೆ.. ಏ...ಏ...
ಬಾಳಲ್ಲಿ ಎಲ್ಲೇ ಇದೆ ಹೆಣ್ಣಿಗೆ...

ಜಾಣೆಯಾಗಿರು ನನ್ನ ಮಲ್ಲಿಗೆ.. ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ...

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...