Showing posts with label ದೇವರಕಣ್ಣು. Show all posts
Showing posts with label ದೇವರಕಣ್ಣು. Show all posts

Tuesday, January 31, 2012

ನಿನ್ನ ನೀನು ಮರೆತರೇನು ಸುಖವಿದೆ

ಹಾಡು: ನಿನ್ನ ನೀನು ಮರೆತರೇನು ಸುಖವಿದೆ / ninna neenu maretarenu sukhavide
ಚಿತ್ರ: ದೇವರಕಣ್ಣು (1975)/ devara kannu
ಸಾಹಿತ್ಯ: ಚಿ | ಉದಯಶಂಕರ್
ಸಂಗೀತ: ಟಿ.ಜಿ. ಲಿಂಗಪ್ಪ
ಹಾಡಿದವರು : ಎಸ್.ಪಿ ಬಾಲಸುಬ್ರಮಣ್ಯಂ

ಈ ಹಾಡನ್ನು ಇಲ್ಲಿ ನೋಡಬಹುದು: http://www.youtube.com/watch?v=ED3dmSLlTFc

ಅ....ಅ.....
ಆ...ಅ...ಅ...
ಅ....ಅ.....ಅ......ಅ...

ನಿನ್ನ ನೀನು ಮರೆತರೇನು ಸುಖವಿದೆ..ಎ...
ತನ್ನತನವ ತೊರೆದರೇನು ಸೊಗಸಿದೆ..ಎ...ಎ..
ನಿನ್ನ ನೀನು ಮರೆತರೇನು ಸುಖವಿದೆ…ಎ....ಎ....
ತನ್ನತನವ ತೊರೆದರೇನು ಸೊಗಸಿದೆ....ಎ...
ನಿನ್ನ ನೀನು ಮರೆತರೇನು ಸುಖವಿದೆ…ಎ....ಎ....

ಹಾಡುವುದನು ಕೋಗಿಲೆಯು...ಉ....ಉ.....ಉ...
ಹಾಡುವುದನು ಕೋಗಿಲೆಯು ಮರೆಯುವುದೇ...
ಹಾರುವುದನು ಬಾನಾಡಿ ತೊರೆಯುವುದೇ...
ಮೀನು ಈಜದಿರುವುದೇ, ದುಂಬಿ ಹೂವ ಮರೆವುದೇ..
ಮೀನು ಈಜದಿರುವುದೇ, ದುಂಬಿ ಹೂವ ಮರೆವುದೇ...
ಮುಗಿಲ ಕಂಡ ನವಿಲು ನಲಿಯದೇ...ಎ...ಎ...ಎ...

ಅ...ಅ...ಅ....ಅ.....

ನಿನ್ನ ನೀನು ಮರೆತರೇನು ಸುಖವಿದೆ..ಎ...ಎ...

ಗಾಳಿ ತನ್ನ ಚಲನೆಯನ್ನು ಮರೆಯುವುದೇ...
ಬೆಳ್ಳಿಮೋಡ ತೇಲದೇ ನಿಲ್ಲುವುದೇ...
ತಾರೆ ಮಿನುಗದಿರುವುದೇ, ಮಿಂಚು ಹೊಳೆಯದಿರುವುದೇ...
ತಾರೆ ಮಿನುಗದಿರುವುದೇ, ಮಿಂಚು ಹೊಳೆಯದಿರುವುದೇ...
ನದಿಯು ಕಡಲ ಸ್ನೇಹ ಮರೆವುದೇ....ಎ...ಎ...ಎ...

[ರಾಗಲಾಪನೆ..]

ನಿನ್ನ ನೀನು ಮರೆತರೇನು ಸುಖವಿದೆ..ಎ...ಎ...
ತನ್ನತನವ ತೊರೆದರೇನು ಸೊಗಸಿದೆ..ಎ...
ನಿನ್ನ ನೀನು ಮರೆತರೇನು ಸುಖವಿದೆ…ಎ....ಎ....

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...