Showing posts with label ಹೊಂಬಿಸಿಲು. Show all posts
Showing posts with label ಹೊಂಬಿಸಿಲು. Show all posts

Wednesday, April 28, 2010

ಹೂವಿಂದ ಹೂವಿಗೆ ಹಾರುವ ದುಂಬಿ

ಚಿತ್ರ: ಹೊಂಬಿಸಿಲು (೧೯೭೮) / Hombisilu
ಹಾಡು: ಹೂವಿಂದ ಹೂವಿಗೆ ಹಾರುವ ದುಂಬಿ / huvinda huvige haaruva dumbi
ಗಾಯನ: ಎಸ್.ಜಾನಕಿ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಗೀತಪ್ರಿಯ

ಈ ಹಾಡನ್ನು ಇಲ್ಲಿ ನೋಡಬಹುದು: https://www.youtube.com/watch?v=-eLYrlQRcbk

ಹೂವಿಂದ ಹೂವಿಗೆ ಹಾರುವ ದುಂಬಿ..
ಏನನು ಹಾಡುತಿಹೆ.. ನೀ.. ಏನನು ಹಾಡುತಿಹೆ || -2-

ಹೂವಿನ ಕೋಮಲ ಭಾವನೆ ಕೆಣಕಿ..
ಏತಕೆ ಕಾಡುತಿಹೇ.. ನೀ ... ||

ಹೂವಿಂದ ಹೂವಿಗೆ ಹಾರುವ ದುಂಬಿ..
ಏನನು ಹಾಡುತಿಹೆ.. ನೀ.. ಏನನು ಹಾಡುತಿಹೆ ||

ಆ..ಆ....ಆ...


ಆಸೆಯ ತುಂಬಿ ಹೂವರಳಿರಲು..
ಹೂವನು ಕಂಡು ನೀ ಕೆರಳಿರಲು...
ಹೂವಿನ ಅಂದ ನಿನಗೇ ಚಂದ..
ಮಧು ಮಕರಂದ ನಿನಗಾನಂದ...
ಒಲಿಸುವ ರಾಗವ ನೀ ಉಲಿಉಲಿದು..
ಒಲಿಸುವ ರಾಗವ.. ನೀ ಉಲಿಉಲಿದು...
ಏನನು ಬಯಸುತಿಹೆ ನೀ...ಇ...

ಹೂವಿಂದ ಹೂವಿಗೆ ಹಾರುವ ದುಂಬಿ..
ಏನನು ಹಾಡುತಿಹೆ.. ನೀ.. ಏನನು ಹಾಡುತಿಹೆ ||
ಹೂವಿಂದ ಹೂವಿಗೆ ಹಾರುವ ದುಂಬಿ..ಇ...

ದುಂಬಿಯೇ ನಿನಗೆ ಮಿಲನಕೆ ಸಂಭ್ರಮ..
ಹೂವಿಗೆ ಬೇಕು ಪ್ರೇಮ ಸಮಾಗಮ...
ಹೂವಿಗೂ.. ದುಂಬಿಗೂ.. ಇರುವಾ ಬಂಧಹ..
ಸಮರಸವಿದ್ದರೆ ಸವಿರಾಗಬಂಧ...
ಈ ಅನುರಾಗವ ಅರಿಯದೆ ಇಂದು..
ಈ ಅನುರಾಗವ ಅರಿಯದೆ ಇಂದು...
ಏನನು ಬೇಡುತಿಹೆ ನೀ..ಇ...

ಹೂವಿಂದ ಹೂವಿಗೆ ಹಾರುವ ದುಂಬಿ..
ಏನನು ಹಾಡುತಿಹೆ.. ನೀ.. ಏನನು ಹಾಡುತಿಹೆ ||

ಹೂವಿನ ಕೋಮಲ ಭಾವನೆ ಕೆಣಕಿ..
ಏತಕೆ ಕಾಡುತಿಹೇ ನೀ ..ಇ...||

ಹೂವಿಂದ ಹೂವಿಗೆ ಹಾರುವ ದುಂಬಿ..ಇ...

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...