Showing posts with label ಆನಂದ ಭೈರವಿ. Show all posts
Showing posts with label ಆನಂದ ಭೈರವಿ. Show all posts

Wednesday, July 16, 2014

ಮಲಗಿರುವೆಯಾ ರಂಗನಾಥ

ಹಾಡು: ಮಲಗಿರುವೆಯಾ ರಂಗನಾಥ / malagiruveya ranganatha
ಚಿತ್ರ: ಆನಂದ ಭೈರವಿ (1984) / ananda bhairavi
ಸಾಹಿತ್ಯ: ಸೋರಟ್ ಅಶ್ವಥ್
ಸಂಗೀತ: ರಮೇಶ್ ನಾಯ್ಡು
ಹಾಡಿದವರು: ಎಸ್. ಜಾನಕಿ ಮತ್ತು ಎಸ್. ಪಿ. ಬಾಲಸುಬ್ರಮಣ್ಯಂ

ಈ ಹಾಡನ್ನು ಇಲ್ಲಿ ಕೇಳಬಹುದು:  https://www.youtube.com/watch?v=R1RPH1vRQH8


[ರಾಗ ಲಾಪನೆ]

ಮಲಗಿರುವೆಯಾ ರಂಗನಾಥ...ಆ...ಆ...
ನೀನು ಮಲಗಿರುವೆಯಾ ರಂಗನಾಥ...ಆ...ಆ...
ಮಲಗಿರುವ ನಿನ ನೋಡೆ ನಯನ ಸಾಲದು ನೂರು..
ಮಲಗಿರುವ ನಿನ ನೋಡೆ ನಯನ ಸಾಲದು ನೂರು..
ಮಲಗಿರುವೆಯಾ ರಂಗನಾಥ...ಆ...ಆ...

[ರಾಗ ಲಾಪನೆ]

ಸಿರಿಮನವಾ ಮಿಡಿದು ಪ್ರಣಯ ರಾಗವ ತುಂಬೋ...
ಸಿರಿಮನವಾ ಮಿಡಿದು ಪ್ರಣಯ ರಾಗವ ತುಂಬೋ...
ಕಿರು ನಗೆ ಸಿರಿ ಮಲ್ಲೆ ನೀನಯ್ಯ ರಂಗಯ್ಯ...
ಕಿರು ನಗೆ ಸಿರಿ ಮಲ್ಲೆ ನೀನಯ್ಯ ರಂಗಯ್ಯ...
ಮಲಗಿರುವೆಯಾ ರಂಗನಾಥ...ಆ...ಆ...

[ರಾಗ ಲಾಪನೆ]

ಸಿಹಿಜೀನ ಚಂದುಟಿ ಸೆಳೆಯುವ ಕುಡಿನೋಟ...
ಸಿಹಿಜೀನ ಚಂದುಟಿ ಸೆಳೆಯುವ ಕುಡಿನೋಟ...
ನಗೆಬಾಣ ಎಸೆದಂತೆ ನೀನಯ್ಯ ರಂಗಯ್ಯ...
ನಗೆಬಾಣ ಎಸೆದಂತೆ ನೀನಯ್ಯ ರಂಗಯ್ಯ...

ಮಲಗಿರುವೆಯಾ ರಂಗನಾಥ...ಆ...ಆ...

[ರಾಗ ಲಾಪನೆ]

ಅಮ್ಮ..ಅಮ್ಮಮ್ಮ...
ಅಮ್ಮ..ಅಮ್ಮಮ್ಮ...
ಬಂಗಾರ ಹೊಳಪು ರಂಗಾದ ಉಡುಪು ಸಿಂಗಾರವಾಗಿ ಧರಿಸಿ..
ಬಂಗಾರ ಹೊಳಪು ರಂಗಾದ ಉಡುಪು ಸಿಂಗಾರವಾಗಿ ಧರಿಸಿ..
ಕೊರಳಲ್ಲಿ ತುಳಸಿ ಸರವನ್ನೇ ಇರಿಸಿ ಮಣಿಹಾರದಿಂದ ಮೆರಿಸಿ...
ಕೊರಳಲ್ಲಿ ತುಳಸಿ ಸರವನ್ನೇ ಇರಿಸಿ ಮಣಿಹಾರದಿಂದ ಮೆರಿಸಿ...
ವಿಸ್ತಾರ ಹಣೆಗೆ ಕಸ್ತೂರಿ ಬೊಟ್ಟು ಚಿತ್ತಾರದಂತೆ ಇಟ್ಟು..
ವಿಸ್ತಾರ ಹಣೆಗೆ ಕಸ್ತೂರಿ ಬೊಟ್ಟು ಚಿತ್ತಾರದಂತೆ ಇಟ್ಟು..
*** ನಮನ, ಚೆಲುವಾದ ವಾದನ, ನೆಲೆಯಾಗಿ ಮಲಗಿ ಮೆಟ್ಟು..
*** ನಮನ, ಚೆಲುವಾದ ವಾದನ, ನೆಲೆಯಾಗಿ ಮಲಗಿ ಮೆಟ್ಟು..
ಹಾವಿನ ಮಂಚದಿ ಹಾಯಾಗಿ ಮಲಗಿರುವ ನಿನಗೆ ಶರಣಾಗಿ..
ಹಾವಿನ ಮಂಚದಿ ಹಾಯಾಗಿ ಮಲಗಿರುವ ನಿನಗೆ ಶರಣಾಗಿ..
ಮೂರ್ಲೋಕವು ತಾ ನೋಡುತ ಸಂತೋಷದೆ ಕೊಂಡಡಿದೆ..
ಮೂರ್ಲೋಕವು ತಾ ನೋಡುತ ಸಂತೋಷದೆ ಕೊಂಡಡಿದೆ..

ಶ್ರೀರಂಗ ಮಂದಿರ ನವ ಸುಂದರ ಪರಾ...
ಶ್ರೀರಂಗ ಮಂದಿರ ನವ ಸುಂದರ ಪರಾ...
ಶ್ರೀರಂಗ ಮಂದಿರ ನವ ಸುಂದರ ಪರಾ...

ಮಲಗಿರುವೆಯಾ ರಂಗನಾಥ...ಆ...ಆ...
ನೀನು ಮಲಗಿರುವೆಯಾ ರಂಗನಾಥ...ಆ...ಆ...
ಮಲಗಿರುವ ನಿನ ನೋಡೆ ನಯನ ಸಾಲದು ನೂರು..
ಮಲಗಿರುವ ನಿನ ನೋಡೆ ನಯನ ಸಾಲದು ನೂರು..

ಮಲಗಿರುವೆಯಾ ರಂಗನಾಥ...ಆ...ಆ...

Thursday, August 11, 2011

ಬಾ ಬಾ ಬಾ ರಾಗವಾಗಿ

ಹಾಡು: ಬಾ ಬಾ ಬಾ ರಾಗವಾಗಿ / ba ba baa raagavaagi
ಚಿತ್ರ: ಆನಂದ ಭೈರವಿ (1982) / ananda bhairavi
ಸಾಹಿತ್ಯ: ಸೋರಟ್ ಅಶ್ವತ್
ಸಂಗೀತ: ರಮೇಶ್ ನಾಯ್ಡು
ಹಾಡಿದವರು: ಎಸ್ ಪಿ ಬಾಲಸುಬ್ರಮಣ್ಯಂ


ಈ ಹಾಡನ್ನು ಇಲ್ಲಿ ನೋಡಬಹುದು:  https://www.youtube.com/watch?v=ZfsXzcmxrww


ಬಾ ಬಾ ಬಾ ರಾಗವಾಗಿ
ಸೇರೆ ಎನ್ನ ನಾದವಾಗಿ..ಇ..
ನಮ್ಮಿಂದಿನ ಮಿಲನ ರಾಗ ಸಂಭ್ರಮ..
ನೀನಾಡುವ ನಾಟ್ಯ ನಾದ ಸಂಗಮ..ಅ..

ಬಾ ಬಾ ಬಾ ರಾಗವಾಗಿ
ಸೇರೆ ಎನ್ನ ನಾದವಾಗಿ

ಮರೆಯಲಾರೆ ನಾನು ಮಧುರ ನೇಹದ ನೋವನು
ಮರೆಯಲಾರೆ ನಾನು ಮಧುರ ನೇಹದ ನೋವನು
ಒಲವಿಗೇತಕೆ ಬಂಧನ..
ಬಾ ಹೃದಯದೆ ನಿನ್ನ ಅರ್ಚಿಸುವೆ..
ಈ ಹೃದಯವ ನಿನಗೆ ಅರ್ಪಿಸುವೆ..
ಕಾಲ್ಗಳ ಗೆಜ್ಜೆಯ ಝಣ ಝಣ ಝಣ ಝಣ ನುಡಿತ ಮಿಡಿತ ಕಲ್ಯಾಣಿ ರಾಗದೇ..
ಭರದಿ ಬಾರೆ ನೀ ಭೈರವಿ...ಇ..
ಭರದಿ ಬಾರೆ ನೀ ಭೈರವಿ.., ನಟ ಭೈರವಿ.. ಆನಂದ ಭೈರವಿ..

ಬಾ ಬಾ ಬಾ ರಾಗವಾಗಿ
ಸೇರೆ ಎನ್ನ ನಾದವಾಗಿ..ಇ..

ಮುರಳಿಯಾದ ನನ್ನ ಮಿಡಿಯೋ ಚೇತನ ನೀನಾಗಿ..ಇ..
ಮುರಳಿಯಾದ ನನ್ನ ಮಿಡಿಯೋ ಚೇತನ ನೀನಾಗಿ..
ನೋವಿನ ಗೀತೆಗೆ ಜೊತೆಯಾಗಿ..
ಭಗ್ನ ಹೃದಯವೇ ಒಡಲಾಗಿ..
ಅಗ್ನಿ ಜ್ವಾಲೆಯೇ ಕಣ್ಣಾಗಿ..
ಕಣ್ಣಿಗೆ ಕಾಣುತ ಕೈಗಳ ಸೇರುತ ದಿವ್ಯ ದಿಗಂತದ ಜೋತಿಯಾಗುತ...
ಸನಿಹ ಬಾರೆ ನೀ ಭೈರವಿ..
ಸನಿಹ ಬಾರೆ ನೀ ಭೈರವಿ.. ನಟ ಭೈರವಿ.. ಆನಂದ ಭೈರವಿ..ಇ..

ಬಾ ಬಾ ಬಾ ರಾಗವಾಗಿ
ಸೇರೆ ಎನ್ನ ನಾದವಾಗಿ..
ನಮ್ಮಿಂದಿನ ಮಿಲನ ರಾಗ ಸಂಭ್ರಮ
ನೀನಾಡುವ ನಾಟ್ಯ ನಾದ ಸಂಗಮ..ಅ..
ಬಾ ಬಾ ಬಾ ರಾಗವಾಗಿ
ಸೇರೆ ಎನ್ನ ನಾದವಾಗಿ .. ಇ..

ಜನ ಹೃದಯನೇತ್ರಿ ವಿಶ್ವಾಭಿವೆತ್ರಿ ಜ್ವಲನೇತ್ರಧಾರಾಗ್ನಿ ಸಪ್ತ ಕಣ್ಕಣ ಕಂರಗಾತ್ರಿ.. ಸುಗಾತ್ರಿ..
ಮದ್ದಾತ್ರ ಮುಖ ಸಮುಧ್ಭೂತ ಗಾನ ಸ್ವಾನ ಚರಣಚರಣನನ ನಾಟ್ಯವರ್ತಿ.. ಪವಿತ್ರಿ..
ದಾನನೇತ್ರತ್ವ ಭೂತಾಗ್ನಿ ಹೋಮದಲಿಂದು ಪಾಪ ಸಂಚಯವೆಲ್ಲ ಭಸ್ಮವಾಗಿ..
ಆ ಜನ್ಮ ತಪಫಲದ ಈ ಜನ್ಮ ಜಪತಪದ ಗಾಯತ್ರಿಯಾಗಿ..ಇ...

ಜಪದಿ ಬಾ ಸಂಧ್ಯದೀಪವೇ ಇದೇ ನನ್ನೈ ದೀಪಾರಾಧನೆ..
ಹೃದಯ ಪೂರ್ಣ ವಾಹನೆ.. ಉದಯ ರಾಗಾಲಾಪನೆ..ಎ..
ಭೈರವಿ.. ನಟ ಭೈರವಿ.. ಆನಂದ ಭೈರವಿ.. ಇ...

ಬಾರೆ..ಬಾರೆ...ಬಾರೆ...
ಬಾರೆ..ಬಾರೆ...ಬಾರೆ...

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...