Showing posts with label ಅವಳ ಹೆಜ್ಜೆ. Show all posts
Showing posts with label ಅವಳ ಹೆಜ್ಜೆ. Show all posts

Monday, October 25, 2010

ದೇವರ ಆಟ ಬಲ್ಲವರಾರು

ಹಾಡು: ದೇವರ ಆಟ ಬಲ್ಲವರಾರು / devara aata ballavaraaru
ಚಿತ್ರ: ಅವಳ ಹೆಜ್ಜೆ (1981)/ avala hejje
ಸಾಹಿತ್ಯ: ಚಿ॥ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ಎಸ್. ಜಾನಕಿ

ಈ ಹಾಡನ್ನು ಇಲ್ಲಿ ನೋಡಿ: https://www.youtube.com/watch?v=7XEvQasETY4

ಆ..ಹ....ಆ.....ಅ..

ದೇವರ ಆಟ ಬಲ್ಲವರಾರು.. ಆತನ ಎದಿರು ನಿಲ್ಲುವರಾರು..
ಕೇಳದೆ ಸುಖವ ತರುವ.. ಹೇಳದೆ ದುಃಖವ ಕೊಡುವ..
ತನ್ನ ಮನದಂತೆ ಕುಣಿಸಿ ಆಡುವ..

ದೇವರ ಆಟ ಬಲ್ಲವರಾರು.. ಆತನ ಎದಿರು ನಿಲ್ಲುವರಾರು..

ಹೊಸ ಹೊಸ ರಾಗ ಅನುದಿನ ಮೂಡಿ.. ವಿಧ ವಿಧ ಭಾವ ಜೊತೆಯಲಿ ಕೂಡಿ...
ಸಂತಸ ಒಮ್ಮೆ.. ವೇದನೆಯೊಮ್ಮೆ.. ನೋವಲಿ ಹೃದಯ ಹಿಂಡುವುದೊಮ್ಮೆ...
ಬಾಳಿನ ಈ ಹಾಡಿನ ರೀತಿ.. ಬಾಳಿನ ಈ ಹಾಡಿನ ರೀತಿ..ಈ..
ಯಾರು ಇಂದು ಬಲ್ಲವರು..

ದೇವರ ಆಟ ಬಲ್ಲವರಾರು.. ಆತನ ಎದಿರು ನಿಲ್ಲುವರಾರು..
ಕೇಳದೆ ಸುಖವ ತರುವ.. ಹೇಳದೆ ದುಃಖವ ಕೊಡುವ..
ತನ್ನ ಮನದಂತೆ ಕುಣಿಸಿ ಆಡುವ..

ಕಾನನ ಬರಲಿ ಕೊರಕಲೆ ಇರಲಿ..ಈ.. ಓಡುವ ನದಿಯು ಸಾಗುವ ಹಾಗೆ..
ಹೂಬನವಿರಲಿ.. ಮರುಭೂಮಿ ಬರಲಿ.. ನಿಲ್ಲದೆ ಗಾಳಿ ಬೀಸುವ ಹಾಗೆ...ಏ..
ನಿಲ್ಲದ ಈ ಪಯಣದ ಗುರಿಯ.. ನಿಲ್ಲದ ಈ ಪಯಣದ ಗುರಿಯಾ...
ಯಾರು.. ಇಂದು.. ಕಂಡವರು..


ದೇವರ ಆಟ ಬಲ್ಲವರಾರು.. ಆತನ ಎದಿರು ನಿಲ್ಲುವರಾರು..
ಕೇಳದೆ ಸುಖವ ತರುವ.. ಹೇಳದೆ ದುಃಖವ ಕೊಡುವ..
ತನ್ನ ಮನದಂತೆ ಕುಣಿಸಿ ಆಡುವ..

ದೇವರ ಆಟ ಬಲ್ಲವರಾರು.. ಆತನ ಎದಿರು...ಊ.. ನಿಲ್ಲುವರಾರು..ಊ...

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...