Showing posts with label ಗಾಳಿ ಮಾತು. Show all posts
Showing posts with label ಗಾಳಿ ಮಾತು. Show all posts

Friday, May 7, 2010

ಒಮ್ಮೆ ನಿನ್ನನ್ನು ಕಣ್ ತುಂಬಾ

ಚಿತ್ರ: ಗಾಳಿ ಮಾತು / gaali maatu
ಹಾಡು: ಒಮ್ಮೆ ನಿನ್ನನ್ನು ಕಣ್ ತುಂಬಾ.. / omme ninnannu kan tumba
ಸಾಹಿತ್ಯ: ಚಿ ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ಎಸ್.ಜಾನಕಿ

ಈ ಹಾಡನ್ನ ಇಲ್ಲಿ ನೋಡಿ: www.youtube.com/watch?v=yE5gyDLpOjw

ಒಮ್ಮೆ ನಿನ್ನನ್ನು ಕಣ್ ತುಂಬಾ ಕಾಣುವಾಸೆ ಎಲ್ಲಿರುವೆ..
ಒಮ್ಮೆ ನಿನ್ನನ್ನು ಕಣ್ ತುಂಬಾ ಕಾಣುವಾಸೆ ಎಲ್ಲಿರುವೆ...
ಭುವಿಯಲ್ಲೋ..ಬಾನಲ್ಲೋ...ಇನ್ನೆಲ್ಲೋ..ಒ..ನಾ ಕಾಣೇ.. -||ಒಮ್ಮೆ ನಿನ್ನನ್ನು ಕಣ್ ತುಂಬಾ..||-

ಅರಳಿರುವ ಹೂವಿನಲ್ಲಿ ನಿನ್ನ ನೋಟವಾ...ಆ..ಆ...ಆ...
ಹರಿಯುತಿಹ ನೀರಿನಲ್ಲಿ ನಿನ್ನ ಓಟವಾ....ಆ..ಆ...
ಇಂಪಾದ ಗಾನದಲ್ಲಿ.. ನಿನ್ನ ಮೊಗದ ಭಾವವಾ..ಅ...
ಮಳೆ ಬಿಲ್ಲ ಬಣ್ಣದಲ್ಲಿ ನಿನ್ನ ಅಂದವಾ...ಆ..ಆ...ಆ...
ನವಿಲಾಡೋ ನಾಟ್ಯದಲ್ಲಿ ನಿನ್ನ ಚಂದವಾ...ಅ...
ತಂಪಾದ ಗಾಳಿಯಲ್ಲಿ ನೀನಾಡೋ ಆಟವಾ..
ದಿನವೆಲ್ಲಾ ನಾ ಕಂಡೆ... ನಾ ಕಂಡು ಬೆರೆಗಾದೆ... -||ಒಮ್ಮೆ ನಿನ್ನನ್ನು ಕಣ್ ತುಂಬಾ..||-

ಮಿನುಗುತಿಹ ತಾರೆಯೆಲ್ಲಾ.. ನಿನ್ನ ಕಂಗಳೋ..ಒ..ಓ..
ನಗುತಿರಲು ಭೂಮಿಗೆಲ್ಲಾ ಬೆಳದಿಂಗಳೋ....ಒ...ಓ..
ಆ ಬೆಳ್ಳೀ ಮೋಡವೆಲ್ಲಾ ನೀ ಬರೆದ ಬೊಂಬೆಗಳೋ...
ಮೂಡಣದ ಅಂಚಿನಿಂದ ನಿನ್ನ ಪಯಣವೋ..ಒ..ಓ..
ಮುಂಜಾನೆ ಕಾಣೋ ಕೆಂಪು ಚಂದುಟಿಯ ಬಣ್ಣವೋ..ಒ..ಓ..
ಆಗಸದ ನೀಲಿಯೆಲ್ಲಾ ನೀ ನಡೆವ ಹಾದಿಯೋ..
ನಿನ್ನಂತೆ ಯಾರಿಲ್ಲಾ...ಅ... ನಿನ್ನಲ್ಲೇ ಮನಸೆಲ್ಲಾ... -||ಒಮ್ಮೆ ನಿನ್ನನ್ನು ಕಣ್ ತುಂಬಾ..||-

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...