Showing posts with label ಪ್ರೇಮಾನುಬಂಧ. Show all posts
Showing posts with label ಪ್ರೇಮಾನುಬಂಧ. Show all posts

Monday, February 16, 2015

ಕರೆದಾಗ ನೀನು ಬರಬಾರದೇನು

ಹಾಡು: ಕರೆದಾಗ ನೀನು ಬರಬಾರದೇನು / karedaaga neenu barabaradenu
ಚಿತ್ರ: ಪ್ರೇಮಾನುಬಂಧ / premaanubandha (1981)
ಸಾಹಿತ್ಯ: ಚಿ | ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ಎಸ್. ಜಾನಕಿ



ಈ ಹಾಡನ್ನು ಇಲ್ಲಿ ನೋಡಬಹುದು:  https://www.youtube.com/watch?v=-Toyouah19c




ಕರೆದಾಗ ನೀನು.. ಬರಬಾರದೇನು....
ಕರೆದಾಗ ನೀನು.. ಬರಬಾರದೇನು....
ನನ್ನ ದೈವ ನೀನು.. ನಿನ್ನ ದಾಸಿ ನಾನು..
ನನ್ನ ದೈವ ನೀನು.. ನಿನ್ನ ದಾಸಿ ನಾನು..
ಕರೆದಾಗ ನೀನು ಬರಬಾರದೇನು....

ಯಾರ ಪುಣ್ಯವೋ ಕಾಣೆ.. ಯಾರ ಪೂಜೆಯೋ ಕಾಣೆ..
ಯಾರ ಪುಣ್ಯವೋ ಕಾಣೆ.. ಯಾರ ಪೂಜೆಯೋ ಕಾಣೆ..
ಕರೆಯದೆ ಬಂದೇ.. ಮನೆಯಲೆ ನಿಂತೆ...ಎ....ಎ...

ಅ....ಅ......ಅ....
ಅ....ಅ......ಅ....

ಮನಸಿನಲಿ ಆಸೆ ತಂದೆ.. ಕಂಗಳಲಿ ಬೆಳಕ ತಂದೆ...
ಚಲುವನೇ ನಿನಗೆ ಮರುಳಾಗಿ ಹೋದೆ...
ಅರಿಯೆಯಾ ನನ್ನ.. ಬಯಕೆಯ ಚೆನ್ನ...
ಅರಿಯೆಯಾ ನನ್ನ.. ಬಯಕೆಯ ಚೆನ್ನ...
ವೇದನೆ ನಾ ತಾಳೆನು... ಸ್ವಾಮೀ...

ಕರೆದಾಗ ನೀನು.. ಬರಬಾರದೇನು....
ಕರೆದಾಗ ನೀನು.. ಬರಬಾರದೇನು....
ನನ್ನ ದೈವ ನೀನು.. ನಿನ್ನ ದಾಸಿ ನಾನು..
ನನ್ನ ದೈವ ನೀನು.. ನಿನ್ನ ದಾಸಿ ನಾನು..
ಕರೆದಾಗ ನೀನು ಬರಬಾರದೇನು....

ನಿನ್ನ ಪೂಜೆಗೆಂದು ಬಂದ ಹೂವ ಮರೆವುದೇನು ಚಂದ...
ನಿನ್ನ ಪೂಜೆಗೆಂದು ಬಂದ ಹೂವ ಮರೆವುದೇನು ಚಂದ...
ಸ್ವೀಕರಿಸೆನ್ನನು ಪ್ರೇಮದಿಂದ ನೀನು...

ಎಂದು ಹೀಗೆ ಮೌನವೇನು..ನನ್ನ ಮೇಲೆ ಕೋಪವೇನು...
ಗೋಪಾಲ ನಿನ್ನನು ಬಿಡಲಾರೆ ನಾನು...

ಸನಿಹಕೆ ಬಾರೋ..ನಗುಮುಖ ತೋರೋ...
ಸನಿಹಕೆ ಬಾರೋ..ನಗುಮುಖ ತೋರೋ...
ಬೇಡುವೆ ನಾ ನಿನ್ನನು..ಸ್ವಾಮೀ...

ಕರೆದಾಗ ನೀನು.. ಬರಬಾರದೇನು....
ಕರೆದಾಗ ನೀನು.. ಬರಬಾರದೇನು....
ನನ್ನ ದೈವ ನೀನು.. ನಿನ್ನ ದಾಸಿ ನಾನು..
ನನ್ನ ದೈವ ನೀನು.. ನಿನ್ನ ದಾಸಿ ನಾನು..
ಕರೆದಾಗ ನೀನು ಬರಬಾರದೇನು....

Sunday, August 4, 2013

ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ

ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye
ಚಿತ್ರ : ಪ್ರೇಮಾನುಬಂಧ / premanubhanda
ಸಾಹಿತ್ಯ : ಚಿ।ಉದಯ್ ಶಂಕರ್
ಸಂಗೀತ : ರಾಜನ್ ನಾಗೇಂದ್ರ
ಹಾಡಿದವರು : ಎಸ್ . ಜಾನಕಿ

ಈ ಹಾಡನ್ನು ಇಲ್ಲಿ ನೋಡಬಹುದು: http://www.youtube.com/watch?v=rvE702G45rM

 ಅ...ಽಅ...ಽ....
 ಅ...ಽಅ...ಽ....
 ಅ...ಽಅ...ಽ....

ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ
ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..ಎ...ಎ...
ಸೇವೆಯ  ಸ್ವೀಕರಿಸು ಬಾ.ಽ... ಭಾಗ್ಯಲಕ್ಷ್ಮಿಯೇ..ಎ..
ಸೇವೆಯ  ಸ್ವೀಕರಿಸು ಬಾ.... ಭಾಗ್ಯಲಕ್ಷ್ಮಿಯೇ..
ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..ಎ...ಎ...

ಹೊಸಲಿನ ಪೂಜೆ ಮಾಡಿದೆಯಮ್ಮ..
ಹಸಿರು ತೋರಣ.ಽ.. ಕಟ್ಟಿದೆಯಮ್ಮ..

ಅ..ಽ...ಽ....
ಅ...ಽ..ಽ....

ತುಪ್ಪದ ದೀಪ ಬೆಳಗಿದೆಯಮ್ಮ
ಮಲ್ಲಿಗೆ ಮಾಲೆ ಕಾದಿದೆಯಮ್ಮ
ಕಮಲಾಕ್ಷಿ ಕಮಲಮುಖಿ ಕಮಲೋದ್ಭವೇ ಬಾರೆ..

ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..ಎ...ಎ...

ನೀನು ಬರುವಾಗ ಹೊನ್ನಕಾಲ್ಗೆಜ್ಜೆ ನಾದ ನಾ ಕೇಳುವಂತೆ..ಎ...ಎ...
ನಿನ್ನ ನಗೆಯಿಂದ ನನ್ನ ಭಯವೆಲ್ಲಾ ಓಡಿ ಮರೆಯಾಗುವಂತೆ..ಎ...ಎ...
ಮನೆಯು ಬೆಳಕಾಗಿ, ಮನವು ಬೆಳಕಾಗಿ, ಬಾಳು ಬೆಳಕಾಗುವಂತೆ..ಎ...ಎ...
ದಯಮಾಡಿಸು..ಉ... ನಾರಾಯಣನ ಹೃದಯೇಶ್ವರಿಯೇ..ಎ...

ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..ಎ...ಎ...

ನಿನ್ನ ಮನೆಯಿಂದ ನಿನ್ನ ಗುಡಿಯಿಂದ ಬಂದು ಸ್ಥಿರವಾಗಿ ನೆಲೆಸು..ಉ...
ಬಂದ ಕ್ಷಣದಿಂದ ತಂದ ಸುಖ-ಶಾಂತಿ ನಮ್ಮ ಬದುಕಲ್ಲಿ ಬೆರೆಸು..ಉ..ಉ...
ನಿತ್ಯ ಹರಿಪೂಜೆ ನಿತ್ಯ ಗುರುಸೇವೆ ಇಲ್ಲಿ ನಡೆವಂತೆ ಹರಸು..ಉ..ಉ...
ದಯೆ ತೋರಿಸು ಶರಣೆನ್ನುವೆ ಸೌಭಾಗ್ಯದ ನಿಧಿಯೇ..

ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..ಎ...ಎ...
ಸೇವೆಯ  ಸ್ವೀಕರಿಸು ಬಾ.ಽ... ಭಾಗ್ಯಲಕ್ಷ್ಮಿಯೇ..ಎ..
 ಸೇವೆಯ  ಸ್ವೀಕರಿಸು ಬಾ.... ಭಾಗ್ಯಲಕ್ಷ್ಮಿಯೇ..
ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..ಎ...ಎ...

Wednesday, June 2, 2010

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ

ಚಿತ್ರ : ಪ್ರೇಮಾನುಬಂಧ / premaanubhanda
ಹಾಡು: ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ / beladingalondu hennaagi bandante kande
ಸಾಹಿತ್ಯ : ಚಿ.ಉದಯಶಂಕರ್
ಹಾಡಿದವರು : ಎಸ್.ಪಿ.ಬಾಲಸುಬ್ರಮಣ್ಯಂ
ಸಂಗೀತ : ರಾಜನ್ - ನಾಗೇಂದ್ರ


ಈ ಹಾಡನ್ನ ಇಲ್ಲಿ ನೋಡಿ: www.youtube.com/watch?v=0EcfdeoGdzM


ಬೆಳದಿಂಗಳೊಂದು... ಹೆಣ್ಣಾಗಿ ಬಂದಂತೆ ಕಂಡೆ..
..........
ಬೆಳದಿಂಗಳೊಂದು... ಹೆಣ್ಣಾಗಿ ಬಂದಂತೆ ಕಂಡೆ..
ಕಂಡು ನಿಂತೆ... ನಿಂತು ಸೋತೆ...ಏ... ಸೋತು ಕವಿಯಾ...ಗಿ.. ಕವಿತೆ ಹಾಡಿದೆ...


ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ..
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ..
ಕಂಡು ನಿಂತೆ... ನಿಂತು ಸೋತೆ.. ಸೋತು ಕವಿಯಾ...ಗಿ.. ಕವಿತೆ ಹಾಡಿದೆ... ಏ..
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ..ಎ...


ಹೊಸದಾಗಿ ಮೊಗ್ಗೊಂದು ಹೂವಾಗಿ..ಇ.., ಆ ಹೂವೇ ಈ ಹೆಣ್ಣ ಮೊಗವಾಗಿ...ಇ...
ಸುಳಿದಾಡೋ ಮಿಂಚೊಂದು ಕಣ್ಣಾಗಿ.., ಗಿಳಿಮಾತು ಅವಳಾಡೊ ಮಾತಾಗಿ..
ತಂಗಾಳಿಗೆ ಓಲಾಡುವಾ..ಅ..ಹಾ.. ತಂಗಾಳಿಗೆ ಓಲಾಡುವಾ...
ಲತೆಯೊಂದು ನಡುವಾಯಿತೇನೊ..ಓ..
ನವಿಲೊಂದು ಕುಣಿದಂತೆ ನಡೆವಾಗ ಸಂತೋಷಗೊಂಡೆ -||ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ..||-


ಹಗಲಲ್ಲಿ ಕಣ್ಮುಂದೆ ನೀನಿರುವೆ.., ಇರುಳಲ್ಲಿ ಕನಸಲ್ಲಿ ನೀ ಬರುವೆ..ಏ...
ಜೊತೆಯಾಗಿ ಇರುವಾಸೆ ತಂದಿರುವೆ.., ನನಗೆಂದು ಹೊಸ ಬಾಳು ನೀ ತರುವೆ..ಏ...
ಬಂಗಾರಿಯೇ...ಸಿಂಗಾರಿಯೇ..ಅ..
ಬಂಗಾರಿಯೇ..ಸಿಂಗಾರಿಯೇ...
ನನ್ನೊಮ್ಮೆ ನೀ ನೋಡು ಚೆಲುವೆ..ಏ..
ಓಲವಿಂದ ಬಂದೀಗ ನನ್ನನ್ನು ನೀ ಸೇರು ಹೂವೇ... -||ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ..||-

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...