Showing posts with label ಮೋಡದ ಮರೆಯಲಿ. Show all posts
Showing posts with label ಮೋಡದ ಮರೆಯಲಿ. Show all posts

Friday, March 4, 2011

ಮನದಲ್ಲಿ ಆಸೆಯೇ ಬೇರೆ ಬದುಕಲ್ಲಿ ನಡೆವುದೇ ಬೇರೆ

ಹಾಡು: ಮನದಲ್ಲಿ ಆಸೆಯೇ ಬೇರೆ ಬದುಕಲ್ಲಿ ನಡೆವುದೇ ಬೇರೆ / manadalli aseye bere badukalli neduvude bere
ಚಿತ್ರ: ಮೋಡದ ಮರೆಯಲಿ (1991) / modada mareyali
ಹಾಡಿದವರು: ಡಾ || ರಾಜಕುಮಾರ್
ಸಾಹಿತ್ಯ: ಚಿ || ಉದಯಶಂಕರ್
ಸಂಗೀತ: ರಾಜನ್ - ನಾಗೇಂದ್ರ

ಈ ಹಾಡನ್ನು ಇಲ್ಲಿ ನೋಡಬಹುದು: www.youtube.com/watch?v=9_GmRBdehPQ

ಮನದಲ್ಲಿ ಆಸೆಯೇ ಬೇರೆ.. ಬದುಕಲ್ಲಿ ನಡೆವುದೇ ಬೇರೆ...
ವಿಧಿ ಬರೆವ ಕವಿತೆ ಬೇರೆ.. ಆ ಕವಿತೆಯ ರಾಗ ಬೇರೆ...
ನೀ ನಡೆವ ಹಾದಿ ಬೇರೆ.. ಮುಂದೇನು ಕಾಣಲಾರೆ..

ಮನದಲ್ಲಿ ಆಸೆಯೇ ಬೇರೆ.. ಬದುಕಲ್ಲಿ ನಡೆವುದೇ ಬೇರೆ...

ಹೆತ್ತೋಳ ಪ್ರೀತಿ ಕಂಡೆ.. ನಿನ್ನ ತಂದೆ ದೇವರೆಂದೇ...
ಆನಂದದಲ್ಲೇ ನೀ ತೇಲಿ ಹೋದೆ...
ಮಳೆಬಿಲ್ಲ ಅಂದವನ್ನು ಕಣ್ತುಂಬಾ ನೋಡುವಾಗ.. ಮಿಂಚೊಂದು ಬಂದು ಕಣ್ಣು ಕುಕ್ಕಿದಂತೆ...
ಬಾಳೆಲ್ಲ ಇರುಳಾಯ್ತೆ ಕಣ್ಣೀರೆ ಗತಿಯಾಯ್ತೆ.. ಎ..

ಮನದಲ್ಲಿ ಆಸೆಯೇ ಬೇರೆ.. ಬದುಕಲ್ಲಿ ನಡೆವುದೇ ಬೇರೆ...

ಒಣ ಹುಲ್ಲ ರಾಶಿ ಮೇಲೆ ಕಿಡಿಯೊಂದು ಹಾರಿದಾಗ..
ಸುಳಿಗಾಳಿ ಬೀಸಿ ಜ್ವಾಲೆ ಮೂಡಿದಂತೆ...
ನಸುಗೋಪ ಕಾಣಿಸಿಕೊಂಡು ಕಡುರೋಷವಾಯ್ತೇ..
ಅಪರಾಧಿಯಾಗಿ ನೋಡುವಂತೆ ಮಾಡಿತೆ...
ನಿನ್ನೋರೇ ನಿನ್ನಿಂದ ದೂರಾಗಿ ನಿಂತಾಯ್ತೆ..ಎ...

ಮನದಲ್ಲಿ ಆಸೆಯೇ ಬೇರೆ.. ಬದುಕಲ್ಲಿ ನಡೆವುದೇ ಬೇರೆ...
ವಿಧಿ ಬರೆವ ಕವಿತೆ ಬೇರೆ.. ಆ ಕವಿತೆಯ ರಾಗ ಬೇರೆ...
ನೀ ನಡೆವ ಹಾದಿ ಬೇರೆ.. ಮುಂದೇನು ಕಾಣಲಾರೆ..

ಮನದಲ್ಲಿ ಆಸೆಯೇ ಬೇರೆ.. ಬದುಕಲ್ಲಿ ನಡೆವುದೇ ಬೇರೆ...

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...