Showing posts with label ಭಕ್ತ ಪ್ರಹ್ಲಾದ. Show all posts
Showing posts with label ಭಕ್ತ ಪ್ರಹ್ಲಾದ. Show all posts

Monday, October 25, 2010

ಕಮಲ ನಯನ ಕಮಲ ವದನ

ಹಾಡು: ಕಮಲ ನಯನ ಕಮಲ ವದನ/kamala nayana kamala vadana
ಚಿತ್ರ: ಭಕ್ತ ಪ್ರಹ್ಲಾದ(1983)/bhakta prahlada
ಸಾಹಿತ್ಯ: ಚಿ॥ಉದಯಶಂಕರ್
ಸಂಗೀತ: ಟಿ.ಜಿ.ಲಿಂಗಪ್ಪ
ಹಾಡಿದವರು: ಜಯಚಂದ್ರನ್

ಈ ಹಾಡನ್ನು ಇಲ್ಲಿ ನೋಡಿ: www.youtube.com/watch?v=aB4e6jnzhtA

ಕಮಲ ನಯನ ಕಮಲ ವದನ.. ಕಮಲಾ ನಯನ ಕಮಲ ವದನ..
ಕಮಲಾರಮಣ ನಾರಾಯಣ..
ಕಮಲಾರಮಣ ನಾರಾಯಣ..ಆ...
ಕಮಲ ನಯನ ಕಮಲ ವದನ

ಲೋಕದ ನಾಟಕಕೆ ನೀ ಸೂತ್ರಧಾರಿ...ಈ...
ನಿನ್ನ ಗುಣಗಾನ ಮಾಡುವ ನಾ.. ಪಾತ್ರಧಾರಿ...ಇ..
ನಾ ಬರಿಯ ವೀಣೆ.. ವೈಣಿಕನೂ ನೀನು...
ನೀ ನುಡಿಸಿದ೦ತೆ ಹಾಡುವೆನು ನಾನು... ನಾನು...

ಮುನಿಗಳ ಮನದಲಿ ಮನೆಮಾಡಿ ನಿಜ ಭಕುತರ ಹೃದಯದಿ ನಲಿದಾಡಿ..
ಮುನಿಗಳ ಮನದಲಿ ಮನೆಮಾಡಿ ನಿಜ ಭಕುತರ ಹೃದಯದಿ ನಲಿದಾಡಿ...
ಕರೆದರೆ ಬರುವ ಅಭಯವ ಕೊಡುವ.. ಕರೆದರೆ ಬರುವ ಅಭಯವ ಕೊಡುವ...
ಶ್ರೀವತ್ಸನೆ.. ಕರುಣಾಳು ತ೦ದೆ..

ಕಮಲ ನಯನ ಕಮಲ ವದನ.. ಕಮಲಾ ನಯನ ಕಮಲ ವದನಾ...ಆ...

ದುಷ್ಟರನು ಶಿಷ್ಟರನು ತ೦ದವನು ನೀನೇ.. ಅಳಿಸುವುದು ನಗಿಸುವುದು ಎಲ್ಲವೂ ನೀನೇ...ಎ..
ಭಕ್ತಿ ಕೊಡುವುದು ನೀನೇ ಮುಕ್ತಿ ಕೊಡುವುದು ನೀನೇ...
ನಿನ್ನ ಮಹಿಮೆಯ ಶಕ್ತಿ ಬಲ್ಲವನು ನೀನೆ... ನೀನೇ...ಎ...

ಗರ್ವದಿ ಮದಿಸಿದ ದಾನವರು ಮದವೇರುತ ಮೆರೆಯುತ ಗರ್ಜಿಸಲು..
ಗರ್ವದಿ ಮದಿಸಿದ ದಾನವರೂ.. ಮದವೇರುತ ಮೆರೆಯುತ ಗರ್ಜಿಸಲು..
ದುರುಳರ ಅಳಿಸಿ ಜಯವನು ಗಳಿಸಿ.. ದುರುಳರ ಅಳಿಸಿ ಜಯವನು ಗಳಿಸಿ...
ಕಾಪಾಡುವ ಕರುಣಾಳು ನೀನೇ...

ಕಮಲ ನಯನ ಕಮಲ ವದನ.. ಕಮಲಾ ನಯನ ಕಮಲ ವದನ...
ಕಮಲಾರಮಣ ನಾರಾಯಣ...
ಕಮಲಾರಮಣ ನಾರಾಯಣಾ..ಆ...
ಕಮಲ ನಯನ ಕಮಲ ವದನ...

ಹರಿಹರಿಯನ್ನುತ ನೀ ಹಾಡು

ಹಾಡುಃ ಹರಿಹರಿಯನ್ನುತ ನೀ ಹಾಡು/hari hariyannuta ni haadu
ಚಿತ್ರ: ಭಕ್ತ ಪ್ರಹ್ಲಾದ(1983)/bhakta prahlada
ಸಾಹಿತ್ಯ: ಚಿ॥ಉದಯಶಂಕರ್
ಸಂಗೀತ: ಟಿ.ಜಿ.ಲಿಂಗಪ್ಪ
ಹಾಡಿದವರು: ಎಸ್.ಪಿ.ಬಾಲಸುಬ್ರಮಣ್ಯಮ್

ಈ ಹಾಡನ್ನು ಇಲ್ಲಿ ನೋಡಿ: www.youtube.com/watch?v=1ygYIVzQ9Ts


ಶ್ರೀಹರಿ...ಈ...ಈ...ಶ್ರೀಹರಿ....ಈಈಈ...ಈ..

ಹರಿಯುವ ನದಿಯು ಹರುಷದಲಿ ತನ್ನ ಶೃತಿಯನು ಸೇರಿಸಿ ಹಾಡುತಿರೆ...
ಬೀಸುವ ಗಾಳಿಯು ಜೊತೆಯಾಗಿ ದನಿಯನು ಕೂಡಿಸಿ ಹಾಡುತಿರೆ...
ಪ್ರಕೃತಿಯೆ ನಿನ್ನೊಡನೊ೦ದಾಗಿ ಆ ಶ್ರೀಪತಿ ಧ್ಯಾನವ ಮಾಡುತಿರೆ..
ಪ್ರಕೃತಿಯೆ ನಿನ್ನೊಡನೊ೦ದಾಗಿ ಆ ಶ್ರೀಪತಿ ಧ್ಯಾನವ ಮಾಡುತಿರೆ..

ಹರಿ ಹರಿ ಎನ್ನುತ ನೀ ಹಾಡು.. ಹರಿನಾಮದ ಮಹಿಮೆಯ ನೀನೋಡು..
ಹರಿ ಹರಿ ಎನ್ನುತ ನೀ ಹಾಡು.. ಹರಿನಾಮದ ಮಹಿಮೆಯ ನೀನೋಡು
ಬಣ್ಣಿಸಲಾಗದ ಆನ೦ದ.. ನೀ ಕಾಣುವೆ ಆಗ ಓ ಕ೦ದ
ಬಣ್ಣಿಸಲಾಗದ ಆನ೦ದ.. ನೀ ಕಾಣುವೆ ಆಗ ಓ ಕ೦ದ
ಹರಿ ಹರಿ ಎನ್ನುತ ನೀ ಹಾಡು.. ಹರಿನಾಮದ ಮಹಿಮೆಯ ನೀನೋಡು..

ಪ್ರೇಮದಿ ಕರೆದರೆ ಬಾ ಎ೦ದು ಎಲ್ಲಿದ್ದರೂ ಅವನು ಆಲಿಸುವ..
ಅಮ್ಮನ ಕೂಗಿಗೆ ಓಗೊಡುವ ಹಸುಕ೦ದನ ಹಾಗೆ ಬಳಿಬರುವ...
ನಿಜ ಭಕ್ತಿಗೆ ಅವನು ಸೋಲುವನು.. ತನ್ನ ಭಕ್ತರನೇ ಕಾಪಾಡುವನು..
ಭಕ್ತಿಗೆ ಅವನು ಸೋಲುವನು.. ತನ್ನ ಭಕ್ತರನೇ ಕಾಪಾಡುವನು..

ಹರಿ ಹರಿ ಎನ್ನುತ ನೀ ಹಾಡು ಹರಿನಾಮದ ಮಹಿಮೆಯ ನೀನೋಡು..
ಬಣ್ಣಿಸಲಾಗದ ಆನ೦ದ.. ನೀ ಕಾಣುವೆ ಆಗ ಓ ಕ೦ದ..
ಬಣ್ಣಿಸಲಾಗದ ಆನ೦ದ.. ನೀ ಕಾಣುವೆ ಆಗ ಓ ಕ೦ದ..
ಹರಿ ಹರಿ ಎನ್ನುತ ನೀ ಹಾಡು ಹರಿನಾಮದ ಮಹಿಮೆಯ ನೀನೋಡು


ಹರಿನಾಮದ ಮಹಿಮೆಯಾ.. ಹ.ಹ.. ನೀನೋಡು..ಊ...

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...