ಹಾಡು: ಯಾವ ಕಾಣಿಕೆ ನೀಡಲಿ ನಿನಗೆ / yaava kanike nidali ninage
ಚಿತ್ರ: ಮಸಣದ ಹೂವು (1984) / masanada huvu
ಸಾಹಿತ್ಯ : ಸು.ರo.ಎಕ್ಕುಂಡಿ
ಸಂಗೀತ : ವಿಜಯಭಾಸ್ಕರ್
ಹಾಡಿದವರು : ಎಸ್.ಪಿ.ಬಾಲಸುಬ್ರಹ್ಮಣ್ಯಮ್
ಈ ಹಾಡನ್ನ ಇಲ್ಲಿ ನೋಡಿ: www.youtube.com/watch?v=4C6vqYxyIMc
ಯಾವ ಕಾಣಿಕೆ.. ನೀಡಲಿ ನಿನಗೆ..
ಓ.. ಎನ್ನ ಪ್ರೇಯಸಿ..
ಯಾವ ಕಾಣಿಕೆ.. ನೀಡಲಿ ನಿನಗೆ..
ಓ.. ಎನ್ನ ಪ್ರೇಯಸಿ..
ಮಲೆನಾಡ ಕಣಿವೆಗಳ ಹಸಿರು ಬನದಿoದ
ನಿನಗಾಗಿ ಗಿಣಿಯೊಂದ.. ನಾ ತರಲಾರೆ.. -|2|-
ಸಾಗರದ ಅಲೆಗಳಲಿ ಉಯ್ಯಾಲೆ ಆಡಿರುವ..
ಸಾಗರದ ಅಲೆಗಳಲಿ ಉಯ್ಯಾಲೆ ಆಡಿರುವ.....
ಹಂಸಲಾವೆಯ.. ನಾ ತರಲಾರೆ... -||ಯಾವ ಕಾಣಿಕೆ ನೀಡಲಿ ನಿನಗೆ..||-
ಹಕ್ಕಿಗಳ ಜತೆಗೆ ಸ್ವರವೆತ್ತಿ ಪಾಡಿರುವ..
ಮoದಾನಿಲದ ವೀಣೆಯ ತರಲಾರೆ...
ಆ...ಅ.. ಹಕ್ಕಿಗಳ ಜತೆಗೆ ಸ್ವರವೆತ್ತಿ ಪಾಡಿರುವ
ಮoದಾನಿಲದ ವೀಣೆಯ ತರಲಾರೆ...
ನಂದನವನದ ಮಂದಾರ ಪುಷ್ಪವ...
ನಂದನವನದ... ಮಂದಾರ ಪುಷ್ಪವ....
ನಾ ನಿನಗೆ ತರಲಾರೆ... ಎ... -||ಯಾವ ಕಾಣಿಕೆ ನೀಡಲಿ ನಿನಗೆ..||-
ಹಲವು ಅರಸಿಯರ ಹೊತ್ತು ಮೆರೆಸಿರುವ..
ಮುತ್ತಿನ ಪಲ್ಲಕ್ಕಿಯ ನಾ ತರಲಾರೆ...
ಹಲವು ಅರಸಿಯರ ಹೊತ್ತು ಮೆರೆಸಿರುವ
ಮುತ್ತಿನ ಪಲ್ಲಕ್ಕಿಯ ನಾ ತರಲಾರೆ...
ಮಣ್ಣಿನಲಿ.. ನೀರಿನಲಿ.. ಬದುಕನೇ ಇಟ್ಟಿರುವ...
ಮಣ್ಣಿನಲಿ.. ನೀರಿನಲಿ.. ಬದುಕನೇ ಇಟ್ಟಿರುವ...
ಸೂರ್ಯಚಂದ್ರರ.. ನಾ ತರಲಾರೆ... -||ಯಾವ ಕಾಣಿಕೆ ನೀಡಲಿ ನಿನಗೆ..||-
2 comments:
💕😍
❤️💕
Post a Comment