Friday, May 27, 2011

ಅಂತರಂಗದ ಹೂ ಬನಕೆ

ಹಾಡು: ಅಂತರಂಗದ ಹೂ ಬನಕೆ /antarangada hoo banake
ಚಿತ್ರ: ಏಳು ಸುತ್ತಿನ ಕೋಟೆ (1987) / elu suttina kote
ಸಾಹಿತ್ಯ: ದೊಡ್ಡ ರಂಗೇಗೌಡ
ಸಂಗೀತ: ಎಲ್. ವೈದ್ಯನಾಥನ್
ಹಾಡಿದವರು: ಎಸ. ಪಿ. ಬಾಲಸುಬ್ರಮಣ್ಯಂ


ಈ ಹಾಡನ್ನು ಇಲ್ಲಿ ಕೇಳಬಹುದು:  http://mio.to/album/107-kannada_compilation/22706-Ambarish_Golden_Hits__Vol_1/#/album/107-kannada_compilation/22706-Ambarish_Golden_Hits__Vol_1/

(Antarangada Hoo Banake (Yelu Suttihna Kote) ಹಾಡನ್ನು ಕ್ಲಿಕ್ ಮಾಡಿ...)


(ಅ...ಆಆ...ಆ...)

ಅಂತರಂಗದ ಹೂ ಬನಕೆ...ಎ...
ಒಲುಮೆ ಗಾಳಿ ಬೀಸಿ, ಹರುಷ ತೂಗಿ ತೊನೆದು, ಮಧುರ ಭಾವ ಮೂಡಿತು..ಉ..
ಅರಿವಿನ ಈಟಿಯು ಹಗಲಿರುಳು ನಾಟುತ.. ಪ್ರೀತಿಯ ಹೃದಯ ಗಾಯವಾಯಿತು.. ಗಾಯವಾಯಿತು...

ಅಂತರಂಗದ ಹೂ ಬನಕೆ...ಎ...

ಮನದೊಳಗೆ ಚಿಂತೆ.. ದಿನದಿನವು ಕುದಿದು..ಉ..
ಉರಿವ ಕುಲುಮೆಯಾಯಿತು.. ತನುವು..ಉ...
ಪ್ರೀತಿ ಬಿಟ್ಟು ಬಿಡದೆ.. ಭೀತಿ ಕಾಡಿ ಕಾಡಿ...
ಅಗ್ನಿಕುಂಡವಾಯಿತು ಒಡಲಾಳವು..ಒಡಲಾಳವು...

ಅಂತರಂಗದ ಹೂ ಬನಕೆ...ಎ...ಎ...

ನೂರನೋವ ನಡುವೆ.. ನಲಿವ ಗತ್ತು ಪಡೆದು..ಉ..
ಹೊಸತು ದಿಕ್ಕು ಕಾಣಹೋಗಿ ಬವಣೆ...ಎ...
ಮುತ್ತಿನಿಂತ ಭಯವಾ.. ಮೆಟ್ಟಿ ತುಳಿದು ನೆಡೆದು..
ಸುಗಮ ಹಾದಿ ಸಾಗದಾಗಿ ತೊಳಲಾಟವು...ತೊಳಲಾಟವು...

ಅಂತರಂಗದ ಹೂ ಬನಕೆ...ಎ...ಎ...

ಬದುಕಬಯಲಿನೊಳಗೆ ಒಂಟಿಯಾಗಿ ನಾನು..
ಪ್ರೀತಿಹಕ್ಕಿ ಬದಿಗೆ ಬಂದು ತುಮುಲಾ..ಅ...
ವಾಸ್ತವ ಜಗವ.. ಮರೆಯುತ ಸಾಗಿ...
ಜೊತೆಗಾತಿ ಸನಿಹ.. ಮಿಡುಕಾಟವು... ಮಿಡುಕಾಟವು...

ಅಂತರಂಗದ ಹೂ ಬನಕೆ...ಎ...ಎ...
ಒಲುಮೆ ಗಾಳಿ ಬೀಸಿ, ಹರುಷ ತೂಗಿ ತೊನೆದು, ಮಧುರ ಭಾವ ಮೂಡಿತು..ಉ..ಉ..

(ಅ...ಆಆ...ಆ...)
(ಅ...ಆಆ...ಆ...ಆ..)

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...