Saturday, June 4, 2011

ಶೃತಿ ಸೇರಿದೆ ಹಿತವಾಗಿದೆ

ಹಾಡು: ಶೃತಿ ಸೇರಿದೆ ಹಿತವಾಗಿದೆ / shruti seride hitavagide
ಚಿತ್ರ: ಶೃತಿ ಸೇರಿದಾಗ (1987) / shruti seridaga
ಸಾಹಿತ್ಯ: ಚಿ||ಉದಯಶಂಕರ್
ಸಂಗೀತ: ಟಿ.ಜಿ.ಲಿಂಗಪ್ಪ
ಹಾಡಿದವರು: ಡಾ||ರಾಜ್ ಮತ್ತು ಎಸ್.ಜಾನಕಿ


ಈ ಹಾಡನ್ನು ಇಲ್ಲಿ ನೋಡಬಹುದು: www.youtube.com/watch?v=NhUUzexH4oo

ಜಾನಕಿ: ಆ...ಆ....ಆ ಆ...
ರಾಜ್: ಆ...ಆ....ಆ ಆ...
ಜಾನಕಿ: ಆ...ಆ....ಆ ಆ...
ರಾಜ್: ಆ...ಆ....ಆ ಆ...

ಜಾನಕಿ: ಶೃತಿ ಸೇರಿದೆ..ಹಿತವಾಗಿದೆ..ಮಾತೆಲ್ಲವು ಇಂಪಾಗಿದೆ...ಎ...
ರಾಜ್: ಶೃತಿ ಸೇರಿದೆ..ಹಿತವಾಗಿದೆ..ಮಾತೆಲ್ಲವು ಇಂಪಾಗಿದೆ...ಎ...
ಜಾನಕಿ: ಶೃತಿ ಸೇರಿದೆ..
ರಾಜ್: ಹಿತವಾಗಿದೆ..

ರಾಜ್: ಹೊಸ ರಾಗದ ಲತೆಯಲ್ಲಿ ಹೊಸ ಪಲ್ಲವಿ ಹೂವಾಗಿದೆ..
[ಆಲಾಪ]
ರಾಜ್: ಹೊಸ ರಾಗದ ಲತೆಯಲ್ಲಿ ಹೊಸ ಪಲ್ಲವಿ ಹೂವಾಗಿದೆ..
ಹೊಸ ಆಸೆಯ ಕಂಪಿಂದ ಹೊಸ ಪ್ರೇಮವು ಸವಿಯಾಗಿದೆ
ಹೊಸ ಆಸೆಯ ಕಂಪಿಂದ ಹೊಸ ಪ್ರೇಮವು ಸವಿಯಾಗಿದೆ

ಜಾನಕಿ: ಹೊಸ ನೋಟವು ಕಣ್ತುಂಬಿ ಹೊಸ ರೀತಿಯು ತಂಪಾಗಿದೆ
[ರಾಜ್/ಜಾನಕಿ]: ಆ...ಆ....ಆ ಆ...
ಜಾನಕಿ: ಹೊಸ ನೋಟವು ಕಣ್ತುಂಬಿ ಹೊಸ ರೀತಿಯು ತಂಪಾಗಿದೆ
ಬದುಕೆಲ್ಲ ಹಸಿರಾಗಿ ಒಲವೊಂದೇ ಉಸಿರಾಗಿ..
ರಾಜ್: ಶೃತಿ ಸೇರಿದೆ..ಹಿತವಾಗಿದೆ..ಮಾತೆಲ್ಲವು ಇಂಪಾಗಿದೆ..
ಜಾನಕಿ: ಆ..ಆ...ಶೃತಿ ಸೇರಿದೆ..ಹಿತವಾಗಿದೆ..

ಜಾನಕಿ: ಮಳೆಗಾಲವು ಬಂದಾಗಿದೆ ನೆಲವೆಲ್ಲ ಹಸಿರಾಗಿದೆ..
ಮಳೆಗಾಲವು ಬಂದಾಗಿದೆ ನೆಲವೆಲ್ಲ ಹಸಿರಾಗಿದೆ...
ಚಳಿಗಾಲವ ಕಂಡಾಗಿದೆ ಮಂಜಿನ ತೆರೆ ಹಾಸಿದೆ..
ಚಳಿಗಾಲವ ಕಂಡಾಗಿದೆ ಮಂಜಿನ ತೆರೆ ಹಾಸಿದೆ..

ರಾಜ್: ಋತುಚಕ್ರವು ಉರುಳಿರಲು ಬಾಳೆಂಬುವ ಬಳ್ಳಿಯಲಿ..
[ರಾಜ್/ಜಾನಕಿ]: ಆ...ಆ....ಆ ಆ...
ರಾಜ್: ಋತುಚಕ್ರವು ಉರುಳಿರಲು ಬಾಳೆಂಬುವ ಬಳ್ಳಿಯಲಿ..
ಹೊಸದೊಂದು ಮೊಗ್ಗಾಗಿ ಸಂಸಾರದ ಬೆಳಕಾಗಿ...

ಜಾನಕಿ: ಶೃತಿ ಸೇರಿದೆ..
ರಾಜ್: ಓ... ಹಿತವಾಗಿದೆ..
ಇಬ್ಬರು: ಮಾತೆಲ್ಲವು ಇಂಪಾಗಿದೆ...ಎ...ಎ...
ಶೃತಿ ಸೇರಿದೆ... ಹಿತವಾಗಿದೆ..ಎ...

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...