ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande
ಚಿತ್ರ: ಹೇಮಾವತಿ / Hemavathi [1977]
ಗಾಯಕರು: ಪಿ.ಬಿ. ಶ್ರೀನಿವಾಸ್
ಸಾಹಿತ್ಯ: ಚಿ|ಉದಯಶಂಕರ್
ಸಂಗೀತ: ಎಲ್. ವೈದ್ಯನಾಥನ್
[ಈ ಹಾಡು ರಾಮ ಜನ್ಮ ಭೂಮಿ ಮಂದಿರ ಶಿಲಾನ್ಯಾಸ ಪೂಜಾ ದಿನದ ಪ್ರಯುಕ್ತ ಸಮರ್ಪಣೆ - 5 Aug 2020]
ಈ ಹಾಡನ್ನು ಇಲ್ಲಿ ನೋಡಿರಿ: https://www.youtube.com/watch?v=RXw47rWOeXQ
ರಾಮಾ..ಆ...ಆ...
ರಾಮಾ..ಆ...ಆ...
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ.. ಏ..
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ.. ಏ..
ಶಬರಿಯ ಏಂಜಿಲಾ ಪ್ರೇಮದಿ ತಿಂದೆ...
ಪ್ರೀತಿ ತೋರಿದೆ, ನೀತಿ ಹೇಳಿದೆ, ಗೀತೆ ಹಾಡಿದೆ ನೀನು...
ಶ್ರೀ ರಾಮಾ..ಆ...
ನೊರೆಂಟು ರೂಪದಿ ನೀ ಬಂದರೇನು..
ನಿನ್ನನ್ನು ಅರಿತವರ ನಾ ಕಾಣೆನು...
ನೊರೆಂಟು ರೂಪದಿ ನೀ ಬಂದರೇನು..
ನಿನ್ನನ್ನು ಅರಿತವರ ನಾ ಕಾಣೆನು...
ರಾಮಾ..ಆ...
ರಾಮಾ..ಆ...ಆ..
ನೂರಾರು ಜಾತಿಯ ಹೂವಾದರೇನು..ಉ...
ನೂರಾರು ಜಾತಿಯ ಹೂವಾದರೇನು..ಉ...
ಇದೆ ತಾನೇ ಒಡಲಲ್ಲಿ ತುಂಬಿದ ಜೇನು...
ಜಗಕೆಲ್ಲ ತಂದೆಯು ನೀನಲ್ಲವೇನು..
ಎಲ್ಲ ಜೀವಿಗಳಲ್ಲೂ ನೀ ಇಲ್ಲವೇನು ..
ಪ್ರೇಮಕೆ ನೀ ಒಲಿವೇ... ಸ್ನೇಹಕೆ ನೀ ನಲಿವೆ..
ನಿನ್ನ ಬಲ್ಲವರು ತನ್ನೆ ಅರಿಯುವರು ಎಲ್ಲ ಗೆಲ್ಲುವನು ಕೊನೆಗೆ..
ಶ್ರೀ ರಾಮಾ..ಆ...
ನೊರೆಂಟು ರೂಪದಿ ನೀ ಬಂದರೇನು..
ನಿನ್ನನ್ನು ಅರಿತವರ ನಾ ಕಾಣೆನು...
ಚಳಿಯಲ್ಲಿ ನೀರಲ್ಲಿ ಮುಳುಗಾಡದೇನು..ಉ...
ಚಳಿಯಲ್ಲಿ ನೀರಲ್ಲಿ ಮುಳುಗಾಡದೇನು..ಉ...
ಶ್ರೀಗಂಧ ವಿಭೂತಿ ನಾಮಗಳೇನು..
ದಿನವೆಲ್ಲ ಬಾಯಲ್ಲಿ ಹರಿನಾಮವೇನು ..
ಕಡೆಗೊಮ್ಮೆ ಕೈ ಮುಗಿವ ನಾಟಕವೇನು...
ಹರಿಕಥೆಯ ಪ್ರೇಮ, ಜಪತಪದ ನೇಮ..
ಬೇಧಭಾವವನು ಕೋಪತಾಪವನು ರೋಷಾದ್ವೇಷವನು ಬಿಡರು..
ಶ್ರೀ ರಾಮಾ..ಆ...
ನೊರೆಂಟು ರೂಪದಿ ನೀ ಬಂದರೇನು..
ನಿನ್ನನ್ನು ಅರಿತವರ ನಾ ಕಾಣೆನು...
ರಾಮ..ರಾಮ್.. ಜಯಜಯ ರಾಮ್..
ಜಾನಕಿರಾಮ್, ದಶರಥರಾಮ್...
ರಾಮಾ..ಆ...
ರಾಮಾ..ಆ...
No comments:
Post a Comment