Monday, February 14, 2011

ನನ್ನ ಚಿನ್ನ ಎಂಥ ಚೆನ್ನ

ಹಾಡು: ನನ್ನ ಚಿನ್ನ ಎಂಥ ಚೆನ್ನ/nanna chinna enta channa
ಚಿತ್ರ: ದೇವರೆಲ್ಲಿದ್ದಾನೆ (೧೯೮೫)/devarelliddaane
ಸಾಹಿತ್ಯ: ಚಿ ಉದಯಶಂಕರ್
ಸಂಗೀತ: ಎಸ್. ಪಿ ಬಾಲಸುಬ್ರಮಣ್ಯಮ್
ಹಾಡಿದವರು: ಪಿ. ಸುಶೀಲ, ವಾಣಿ ಜಯರಾಮ್

ಈ ಹಾಡನ್ನು ಇಲ್ಲಿ ನೋಡಿ: www.youtube.com/watch?v=l7T3cTYeG2g


ವಾಣಿ: ನನ್ನ ಚಿನ್ನ ಎಂಥ ಚೆನ್ನ ಈ ಬಾಲಗೋಪಾಲ.. ನನ್ನ ಈ ಮುದ್ದು ಗೋಪಾಲ..
ಬಾಳಲ್ಲಿ ಹಾಡಾಗಿ, ಅನಂದ ಕಡಲಾಗಿ, ಬಂದನು ಈ ಬಾಲ..

ಸುಶೀಲ: ಅಹಾ ನಕ್ಕರೆ ಸಕ್ಕರೆಯಂತೆ, ಇವ ಅತ್ತರೆ ಜೋಗುಳದಂತೆ..
ಹೂವಾಗಿ, ಹಣ್ಣಾಗಿ, ಹೊನ್ನಾಗಿ, ಕಣ್ಣಾಗಿ.. ಬಂದ ಸಿಹಿ ಜೇನಾಗಿ..


ವಾಣಿ: ನನ್ನ ಚಿನ್ನ ಎಂಥ ಚೆನ್ನ ಈ ಬಾಲಗೋಪಾಲ.. ನನ್ನ ಈ ಮುದ್ದು ಗೋಪಾಲ..ಆ..
ಸುಶೀಲ: ಬಾಳಲ್ಲಿ ಹಾಡಾಗಿ, ಅನಂದ ಕಡಲಾಗಿ, ಬಂದನು ಈ ಬಾಲ..


ಸುಶೀಲ: ಹೆತ್ತ ತಾಯಿ ಯಾರೋ.. ಗೊತ್ತೇ ಗೋಪಾಲ..
ವಾಣಿ: ಸಾಕಿದ ತಾಯಿ ಯಾರೋ.. ಹೇಳೋ ಶ್ರೀಲೋಲ

ವಾಣಿ: ಹೆತ್ತ ತಾಯಿ ನಾನೇ ಹೇಳೋ ಗೋಪಾಲ..
ಮುದ್ದಾಗಿ ಒಮ್ಮೆ ಅಮ್ಮ ಅಮ್ಮ ಅನ್ನೋ ಶ್ರೀಲೋಲ

ಸುಶೀಲ: ನಿನ್ನನ್ನೆ ನೋಡೋದು ನಿನ್ನ ಮಾತನ್ನೆ ಕೇಳೋದು ತುಂಟ ಗೋಪಾಲಾ..

ವಾಣಿ: ನನ್ನ ಚಿನ್ನ ಎಂಥ ಚೆನ್ನ ಈ ಬಾಲಗೋಪಾಲ.. ನನ್ನ ಈ ಮುದ್ದು ಗೋಪಾಲ..ಆ..
ಸುಶೀಲ: ಬಾಳಲ್ಲಿ ಹಾಡಾಗಿ, ಅನಂದ ಕಡಲಾಗಿ, ಬಂದನು ಈ ಬಾಲ..

ವಾಣಿ: ಚಂದ ಮಾಮ ಬೇಕೆ ಹೇಳೋ ಆಡೋಕೆ...
ಕಾಮನ ಬಿಲ್ಲು ಬೇಕೇ ನಿನ್ನ ಅಟಕ್ಕೆ..

ಸುಶೀಲ: ನನ್ನ ಕಂದ ಹಾಗೇ ಏನು ಕೇಳೋಲ್ಲಾ..
ಅಮ್ಮನೆ ಸಾಕು ಏಂದು ಬೇರೆ ಬೇಕಿಲ್ಲ..

ವಾಣಿ: ಈ ಕಣ್ಣೂ ನೋಡು ನಿನ್ನಂತೆ.. ಪುಟ್ಟ ಈ ಕೆನ್ನೆ ನಿನ್ನಂತೆ.. ನಿನ್ನ ಕಂದಂಗೆ..

ಸುಶೀಲ: ನನ್ನ ಚಿನ್ನ ಎಂಥ ಚೆನ್ನ ಈ ಬಾಲಗೋಪಾಲ.. ನನ್ನ ಈ ಮುದ್ದು ಗೋಪಾಲ..ಆ..
ಬಾಳಲ್ಲಿ ಹಾಡಾಗಿ, ಅನಂದ ಕಡಲಾಗಿ, ಬಂದನು ಈ ಬಾಲ..

ವಾಣಿ: ಅಹಾ ನಕ್ಕರೆ ಸಕ್ಕರೆಯಂತೆ, ಇವ ಅತ್ತರೆ ಜೋಗುಳದಂತೆ..
ಹೂವಾಗಿ, ಹಣ್ಣಾಗಿ, ಹೊನ್ನಾಗಿ, ಕಣ್ಣಾಗಿ.. ಬಂದ ಸಿಹಿ ಜೇನಾಗಿ..ಈ..

ಸುಶೀಲ: ನನ್ನ ಚಿನ್ನ ಎಂಥ ಚೆನ್ನ ಈ ಬಾಲಗೋಪಾಲ..ಆ..

ವಾಣಿ: ನನ್ನ ಈ ಮುದ್ದು ಗೋಪಾಲ..ಆ..

ಸುಶೀಲ: ಬಾಳಲ್ಲಿ ಹಾಡಾಗಿ, ಅನಂದ ಕಡಲಾಗಿ

ವಾಣಿ: ಬಂದನು ಈ ಬಾಲ..

ಇಬ್ಬರು: ಲ..ಲ..ಲ..ಲಲ...ಲಲ..ಲ ಲಲಲಾ..

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...