Monday, February 14, 2011

ನಗುವ ಹೂವು ನೀನು

ಹಾಡು: ನಗುವ ಹೂವು ನೀನು/naguva hovu neenu
ಚಿತ್ರ: ಮೌನ ಗೀತೆ (೧೯೮೬)/ maunageete
ಸಾಹಿತ್ಯ: ಗೀತಪ್ರಿಯ
ಸಂಗೀತ: ಎಮ್. ರಂಗರಾವ್
ಹಾಡಿದವರು: ಎಸ್. ಜಾನಕಿ


ಈ ಹಾಡನ್ನು ಇಲ್ಲಿ ನೋಡಿ: www.youtube.com/watch?v=8NssuVyRX_o


ಆಆ...ಅ..ಆ...ಅ..ಆ....


ನಗುವ ಹೂವು ನೀನು ಅದರ ನೋವು ನಾನು...

ನಗುವ ಹೂವು ನೀನು ಅದರ ನೋವು ನಾನು...

ಹೊರಗೆ ಹಾಡದಂತ.. ಒಳಗೆ ಕಾಡುವಂತ..

ಕವಲು ಒಡೆದ ಪ್ರೀತಿಯಾ...ಆ..ಆ..

ಮೌನ ಗೀತೆ ನಾನು..


ಯಾವ ಜನ್ಮದ ಬಂಧವೋ.. ಇದು ಎಂತಹ ಸಂಬಂಧವೋ..

ಎಂದೋ ಮಾಡಿದ ಸಾಲವ.. ಇಂದು ಪಡೆಯಲು ಬಂದೆಯೋ...

ಯಾವ ಜನ್ಮದ ಬಂಧವೋ.. ಇದು ಎಂತಹ ಸಂಬಂಧವೋ..

ಎಂದೋ ಮಾಡಿದ ಸಾಲವ.. ಇಂದು ಪಡೆಯಲು ಬಂದೆಯೋ...

ನೀನು ಮಮತೆಯ ಮಾಲೆಯೊ, ನನ್ನ ಸುಡುವ ಸಾಲೆಯೋ...

ನೀನು ಮಮತೆಯ ಮಾಲೆಯೊ, ನನ್ನ ಸುಡುವ ಸಾಲೆಯೋ...

ನನಗೆ ದೇವನು ನೀಡಿದ.. ಕುಡಿಯು ನೇನಿರೆ ಎಲ್ಲಿಯೋ..

ನಗುವ ಹೂವು ನೀನು ಅದರ ನೋವು ನಾನು...


ಯಾರ ಯೋಗವು ಯಾರಿಗೋ, ಯಾರ ಭಾಗ್ಯವು ಯಾರಿಗೋ..

ಯಾರು ಇಲ್ಲಿ ಯಾರಿಗೋ, ಯಾರ ಭಾರವು ಯಾರಿಗೋ...ಒ..

ಯಾರ ಯೋಗವು ಯಾರಿಗೋ, ಯಾರ ಭಾಗ್ಯವು ಯಾರಿಗೋ..

ಯಾರು ಇಲ್ಲಿ ಯಾರಿಗೋ, ಯಾರ ಭಾರವು ಯಾರಿಗೋ...ಒ..

ಯಾವ ಮನಸಿನ ಆಸೆಯೋ, ಯಾವ ಅಸೆಯ ಕಾಶವೋ..

ಯಾವ ಮನಸಿನ ಆಸೆಯೋ, ಯಾವ ಅಸೆಯ ಕಾಶವೋ..

ದೂರ ಎಲ್ಲಿಗೋ ಕರೆಯುವ.. ನನ್ನ ಕರುಳಿನ ಸೆಳೆತವೊ...


ನಗುವ ಹೂವು ನೀನು ಅದರ ನೋವು ನಾನು...

ಹೊರಗೆ ಹಾಡದಂತ.. ಒಳಗೆ ಕಾಡುವಂತ..

ಕವಲು ಒಡೆದ ಪ್ರೀತಿಯಾ...ಆ..ಆ..

ಮೌನ ಗೀತೆ ನಾನು... ಮೌನ ಗೀತೆ ನಾನು... ಮೌನ ಗೀತೆ ನಾ..ನು...

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...