Tuesday, January 11, 2011

ಈ ಭಾವಗೀತೆ ನಿನಗಾಗಿ ಹಾಡಿದೆ

ಹಾಡು: ಈ ಭಾವಗೀತೆ ನಿನಗಾಗಿ ಹಾಡಿದೆ/e bhavageete ninagaagi haadide
ಚಿತ್ರ :ಒಂದೇ ಗುರಿ(೧೯೮೩)/onde guri
ಸಾಹಿತ್ಯ :ಚಿ.ಉದಯಶಂಕರ್
ಸಂಗೀತ:ರಾಜನ್-ನಾಗೇಂದ್ರ
ಹಾಡಿದವರು:ಎಸ್.ಪಿ.ಬಾಲಸುಬ್ರಹ್ಮಣ್ಯಮ್

ಈ ಹಾಡನ್ನು ಇಲ್ಲಿ ನೋಡಿ: https://www.youtube.com/watch?v=pJTtlr6vje0

ಈ ಭಾವಗೀ...ತೆ.. ನಿನಗಾಗಿ ಹಾಡಿದೆ...
ಅನುರಾಗ ನನ್ನನೂ... ಕವಿಯಾಗಿ ಮಾಡಿದೆ...ಎ...
ಈ ಭಾವಗೀ...ತೆ.. ನಿನಗಾಗಿ ಹಾಡಿದೆ...

ಬಳ್ಳಿಯಲಿ ಹೂವು ತುಂಬಿ.., ಮರಗಳಲಿ ಜೀವ ತುಂಬಿ...ಇ...
ಎಲ್ಲೆಲ್ಲಿ ನೋಡಿದರಲ್ಲಿ ಹೊಸ ಹಸಿರು ತುಂಬಿದೆ...
ಹಾಡುತಿರೆ ದುಂಬಿಗಳೆಲ್ಲ..., ಹಾರುತಿರೆ ಹಕ್ಕಿಗಳೆಲ್ಲಾ...
ತೋಳಿಂದ ನನ್ನನು ಬಳಸಿ.. ನೀ ಸನಿಹ ನಿಂತಿರೇ...
ನಿನ್ನ ಅಂದ ಕಂಡು.. ಸಂತೋಷಗೊಂಡು.. ಹೊಸ ಭಾವ ಮುಡಲೂ...ಊ..ಉ..

ಈ ಭಾವಗೀ...ತೆ.. ನಿನಗಾಗಿ ಹಾಡಿದೆ...
ಅನುರಾಗ ನನ್ನನೂ... ಕವಿಯಾಗಿ ಮಾಡಿದೆ...ಎ...
ಈ ಭಾವಗೀ...ತೆ..ಎ..ಎ ನಿನಗಾಗಿ ಹಾಡಿದೆ...

ಕಣ್ಣಿನಲಿ ರೂಪ ತುಂಬಿ.. ಮನಸಿನಲಿ ಪ್ರೇಮ ತುಂಬಿ...
ನನ್ನೆದೆಯ ವೀಣೆಯ ಮೀಟಿ..ಈ.. ಹೊಸ ನಾದ ತುಂಬಿದೆ..ಎ...
ಆಸೆಗಳ ಕಣ್ಣಿನಲ್ಲಿ.. ಮೋಹವನು ತುಂಬಿ ತುಂಬಿ..
ನೂರಾರು ಕನಸುಗಳನ್ನು..ಉ.. ಬಾಳಲ್ಲಿ ತುಂಬಿದೆ...
ಇಂದೇಕೆ ಹೀಗ.. ನೀ ಮೌನವಾದೆ... ಕಾರಣ ಹೇಳದೇ...ಎ...

ಈ ಭಾವಗೀ...ತೆ.. ನಿನಗಾಗಿ ಹಾಡಿದೆ...
ಅನುರಾಗ ನನ್ನನೂ... ಕವಿಯಾಗಿ ಮಾಡಿದೆ...ಎ...
ಈ ಭಾವಗೀ...ತೆ..ಎ..ಎ ನಿನಗಾಗಿ ಹಾಡಿದೆ...ಎ...
ನಿನಗಾಗಿ ಹಾಡಿದೆ...ಎ...

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...