Thursday, May 6, 2010

ಏನೆಂದೂ ನಾ ಹೇಳಲಿ ಮಾನವನಾಸೆಗೆ ಕೊನೆಯೆಲ್ಲಿ

ಚಿತ್ರ : ಗಿರಿಕನ್ಯೆ / girikanye (1977)
ಹಾಡು: ಏನೆಂದೂ ನಾ ಹೇಳಲಿ ಮಾನವನಾಸೆಗೆ ಕೊನೆಯೆಲ್ಲಿ / enendu na helali manavanasege koneyelli
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಹಾಡಿದವರು : ಡಾ.ರಾಜಕುಮಾರ್

ಈ ಹಾಡನ್ನ ಇಲ್ಲಿ ನೋಡಿ: www.youtube.com/watch?v=IbcIANb73Yg


ಆ........ಆ.........ಆಹ.....ಹ....

ಏನೆಂದೂ ನಾ ಹೇಳಲಿ......ಆ....
ಮಾನವನಾಸೆಗೆ ಕೊನೆಯೆಲ್ಲಿ....
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ...
ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ...
ಯಾರನ್ನೂ ಪ್ರೀತಿಸನು ಮನದಲ್ಲಿ...
ಏನೊಂದೂ ಬಾಳಿಸನು ಜಗದಲ್ಲಿ...
ಓ...ಯಾರನ್ನೂ ಪ್ರೀತಿಸನು ಮನದಲ್ಲಿ..
ಏನೊಂದೂ ಬಾಳಿಸನು ಜಗದಲ್ಲಿ... -||ಏನೆಂದೂ ನಾ ಹೇಳಲಿ...||-

ಜೇನುಗಳೆಲ್ಲಾ... ಅಲೆಯುತ ಹಾರಿ..
ಕಾಡೆಲ್ಲಾ..ಕಾಡೆಲ್ಲಾ..ಕಾಡೆಲ್ಲಾ...
ಹನಿಹನಿ ಜೇನು ಸೇರಿಸಲೇನು..
ಬೇಕು ಎಂದಾಗ ತನದೆನ್ನುವ...


ಕೆಸರಿನ ಹೂವು.. ವಿಷದ ಹಾವು..
ಭಯವಿಲ್ಲ.. ಭಯವಿಲ್ಲ.. ಭಯವಿಲ್ಲಾ...
ಚೆಲುವಿನದೆಲ್ಲಾ.. ರುಚಿಸುವುದೆಲ್ಲ...
ಕಂಡು ಬಂದಾಗ ಬೇಕೆನ್ನುವಾ... -||ಏನೆಂದೂ ನಾ ಹೇಳಲಿ...||-


[female singer chorus: ಓ...ಹೋ...ಹೋ...ಹೋ..ಹೋ.. ಆ..ಹ..ಹ..ಆಹಹಹಾ...]

ಪ್ರಾಣಿಗಳೇನು.. ಗಿಡಮರವೇನು...
ಬಿಡಲಾರ.. ಬಿಡಲಾರ.. ಬಿಡಲಾರ..
ಬಳಸುವನೆಲ್ಲಾ.. ಉಳಿಸುವುದಿಲ್ಲ...
ತನ್ನ ಹಿತಕಾಗಿ ಹೋರಾಡುವ...


ನುಡಿಯುವುದೊಂದು.. ನಡೆಯುವುದೊಂದು..
ಎಂದೆಂದು.. ಎಂದೆಂದು.. ಎಂದೆಂದೂ..
ಪಡೆಯುವುದೊಂದು.. ಕೊಡುವುದುವೊoದು..
ಸ್ವಾರ್ಥಿ ತಾನಾಗಿ ಮೆರೆದಾಡುವ... -||ಏನೆಂದೂ ನಾ ಹೇಳಲಿ...||-


ಏನೆಂದೂ ನಾ ಹೇಳಲಿ..ಆ...ಮಾನವನಾಸೆಗೆ ಕೊನೆಯೆಲ್ಲಿ...

ಕೊನೆಯೆಲ್ಲಿ...ಕೊನೆಯೆಲ್ಲಿ....ಕೊನೆಯೆಲ್ಲಿ......

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...