Thursday, May 6, 2010

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ

ಚಿತ್ರ: ಕೆರಳಿದ ಸಿಂಹ / keralida simha
ಹಾಡು: ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ / amma ninu namagaagi savira varusha sukhavaagi
ಹಾಡಿದವರು: ಡಾ।। ರಾಜ್ ಕುಮಾರ್, ಪಿ.ಬಿ.ಶ್ರೀನಿವಾಸ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸತ್ಯಂ

ಈ ಹಾಡನ್ನ ಇಲ್ಲಿ ನೋಡಿ:  https://www.youtube.com/watch?v=lwhGFiL5EXI

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ
ಬಾಳಲೆ ಬೇಕು ಈ ಮನೆ ಬೆಳಕಾಗಿ... -||ಅಮ್ಮ ನೀನು ನಮಗಾಗಿ..||-

ಬಾಡದ ತಾವರೆ ಹೂವಿನ ಹಾಗೆ... ಎಂದಿಗೂ ಆರದ ಜ್ಯೋತಿಯ ಹಾಗೆ...
ಗೋಪುರವೇರಿದ ಕಲಶದ ಹಾಗೆ... ಆ ಧೃವ ತಾರೆಯೇ ನಾಚುವ ಹಾಗೆ...
ಜೊತೆಯಲಿ ಎಂದೆಂದೂ ನೀನಿರಬೇಕು... ಬೇರೆ ಏನು ಬೇಡೆವು ನಾವು... -||ಅಮ್ಮ ನೀನು ನಮಗಾಗಿ..||-

ಸಂಜೆಯ ಗಾಳಿಯ ತಂಪಿನ ಹಾಗೆ... ಮಲ್ಲಿಗೆ ಹೂವಿನ ಕಂಪಿನ ಹಾಗೆ...
ಜೀವವ ತುಂಬುವ ಉಸಿರಿನ ಹಾಗೆ... ನಮ್ಮನು ಸೇರಿ ಎಂದಿಗೂ ಹೀಗೆ...
ನಗುತಲಿ ಒಂದಾಗಿ ನೀನಿರಬೇಕು... ನಿನ್ನ ನೆರಳಲಿ ನಾವಿರಬೇಕು... -||ಅಮ್ಮ ನೀನು ನಮಗಾಗಿ..||-

ಸಾವಿರ ನದಿಗಳು ಸೇರಿದರೇನು.. ಸಾಗರಕೆ ಸಮನಾಗುವುದೇನು...
ಶತಕೋಟಿ ದೇವರು ಹರಸಿದರೇನು... ಅಮ್ಮನ ಹರಕೆಗೆ ಸರಿಸಾಟಿಯೇ..ಎ...ನು...
ತಾಯಿಗೆ ಆನಂದ ತಂದರೆ ಸಾಕು.. ಬೇರೆ ಪೂಜೆ ಏತಕೆ ಬೇಕು... -||ಅಮ್ಮ ನೀನು ನಮಗಾಗಿ..||-

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...