Thursday, May 6, 2010

ಓ ಗುಣವಂತ

ಚಿತ್ರ: ಮಸಣದ ಹೂವು (1984) / masanada huvu
ಹಾಡು: ಓ ಗುಣವಂತ / o gunavanta
ಸಾಹಿತ್ಯ : ವಿಜಯನಾರಸಿಂಹ
ಸಂಗೀತ : ವಿಜಯಭಾಸ್ಕರ್
ಹಾಡಿದವರು : ಎಸ್.ಜಾನಕಿ

ಈ ಹಾಡನ್ನ ಇಲ್ಲಿ ನೋಡಿ: www.youtube.com/watch?v=JQRf6mPC6FU

ಓ ಗುಣವಂತ.. ಓ.. ಗುಣವಂತ...
ನಿನ್ನಾ.. ಆ... ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲಾ...ಆ...ಆ...
ಪದಗಳೇ ಸಿಗುತ್ತಿಲ್ಲ...
ಓ ಗುಣವಂತ.. ಓ.. ಗುಣವಂತ...
ನಿನ್ನಾ.. ಆ... ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲಾ...ಆ...ಆ...
ಪದಗಳೇ ಸಿಗುತ್ತಿಲ್ಲ...

ದಾರಿದೀಪ ತೋರುತಾ.. ತೋರುತಾ..
ಕರುಣೆ ಕಿರಣ ಬೀರುತಾ.. ಬೀರುತಾ..
ಬಂದೆ ನೀನು.. ಓ.. ಸ್ನೇಹಿತ.. ಸ್ನೇಹಿತ..
ನನ್ನ ಬಾಳು.. ಬೆಳಗಿದೆ.. ಬೆಳಗಿದೆ.. -||ಓ ಗುಣವಂತ.. ಓ.. ಗುಣವಂತ...||-


ಹೃದಯ ನಿನಗೆ ಸೋತಿದೆ.. ಸೋತಿದೆ..
ನುಡಿಗೆ ನಾಲಿಗೆ ನಾಚಿದೆ.. ನಾಚಿದೆ..
ಬಗೆಬಗೆ ಭಾವ ಮೂಡಿದೆ.. ಮೂಡಿದೆ..
ಮನವು ನಿನ್ನೇ ಹೊಗಳಿದೆ.. ಹೊಗಳಿದೆ.. -||ಓ ಗುಣವಂತ.. ಓ.. ಗುಣವಂತ...||-

ಪ್ರೇಮದಾಸೆ ತೋರಲಾರೆ.. ತೋರಲಾರೆ..
ಪ್ರಣಯ ಲೀಲೆ ಆಡಲಾರೆ.. ಆಡಲಾರೆ..
ಭಾಷೆಯ ಮೀರಿದೆ.. ಓ.. ಭಾವನೆ.. ಕಾಮನೆ..
ಆಸೆಯ ಮೀರಿದೆ ಮೋಹದ ಪ್ರೇರಣೆ... -||ಓ ಗುಣವಂತ.. ಓ.. ಗುಣವಂತ...||-
ಪದಗಳೇ ಸಿಗುತ್ತಿಲ್ಲ... ಆ...ಅ....ಪದಗಳೇ ಸಿಗುತ್ತಿಲ್ಲ.....

No comments:

ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ

ಹಾಡು: ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ/nagalarade alalarade tolaladide jeeva ಚಿತ್ರ: ಶ್ರುತಿ ಸೇರಿದಾಗ [1987]/shruthi seridaaga ಸಾಹಿತ್ಯ: ಚಿ || ...