Saturday, August 8, 2020

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande
ಚಿತ್ರ: ಹೇಮಾವತಿ / Hemavathi [1977]
ಗಾಯಕರು: ಪಿ.ಬಿ. ಶ್ರೀನಿವಾಸ್  
ಸಾಹಿತ್ಯ: ಚಿ|ಉದಯಶಂಕರ್
ಸಂಗೀತ: ಎಲ್. ವೈದ್ಯನಾಥನ್ 

[ಈ ಹಾಡು ರಾಮ ಜನ್ಮ ಭೂಮಿ ಮಂದಿರ ಶಿಲಾನ್ಯಾಸ ಪೂಜಾ ದಿನದ ಪ್ರಯುಕ್ತ ಸಮರ್ಪಣೆ -  5 Aug 2020]

ಈ ಹಾಡನ್ನು ಇಲ್ಲಿ ನೋಡಿರಿ: https://www.youtube.com/watch?v=RXw47rWOeXQ

 

ರಾಮಾ..ಆ...ಆ...
ರಾಮಾ..ಆ...ಆ...
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ.. ಏ..
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ.. ಏ..
ಶಬರಿಯ ಏಂಜಿಲಾ ಪ್ರೇಮದಿ ತಿಂದೆ...
ಪ್ರೀತಿ ತೋರಿದೆ, ನೀತಿ ಹೇಳಿದೆ, ಗೀತೆ ಹಾಡಿದೆ ನೀನು...
ಶ್ರೀ ರಾಮಾ..ಆ...

ನೊರೆಂಟು ರೂಪದಿ ನೀ ಬಂದರೇನು..
ನಿನ್ನನ್ನು ಅರಿತವರ ನಾ ಕಾಣೆನು...
ನೊರೆಂಟು ರೂಪದಿ ನೀ ಬಂದರೇನು..
ನಿನ್ನನ್ನು ಅರಿತವರ ನಾ ಕಾಣೆನು...

ರಾಮಾ..ಆ...
ರಾಮಾ..ಆ...ಆ..

ನೂರಾರು ಜಾತಿಯ ಹೂವಾದರೇನು..ಉ...
ನೂರಾರು ಜಾತಿಯ ಹೂವಾದರೇನು..ಉ...
ಇದೆ ತಾನೇ ಒಡಲಲ್ಲಿ ತುಂಬಿದ ಜೇನು...
ಜಗಕೆಲ್ಲ ತಂದೆಯು ನೀನಲ್ಲವೇನು..
ಎಲ್ಲ ಜೀವಿಗಳಲ್ಲೂ ನೀ ಇಲ್ಲವೇನು ..

ಪ್ರೇಮಕೆ ನೀ ಒಲಿವೇ... ಸ್ನೇಹಕೆ ನೀ ನಲಿವೆ..
ನಿನ್ನ ಬಲ್ಲವರು ತನ್ನೆ ಅರಿಯುವರು ಎಲ್ಲ ಗೆಲ್ಲುವನು ಕೊನೆಗೆ..
ಶ್ರೀ ರಾಮಾ..ಆ...

ನೊರೆಂಟು ರೂಪದಿ ನೀ ಬಂದರೇನು..
ನಿನ್ನನ್ನು ಅರಿತವರ ನಾ ಕಾಣೆನು...

ಚಳಿಯಲ್ಲಿ ನೀರಲ್ಲಿ ಮುಳುಗಾಡದೇನು..ಉ...
ಚಳಿಯಲ್ಲಿ ನೀರಲ್ಲಿ ಮುಳುಗಾಡದೇನು..ಉ...
ಶ್ರೀಗಂಧ ವಿಭೂತಿ ನಾಮಗಳೇನು..
ದಿನವೆಲ್ಲ ಬಾಯಲ್ಲಿ ಹರಿನಾಮವೇನು ..
ಕಡೆಗೊಮ್ಮೆ ಕೈ ಮುಗಿವ ನಾಟಕವೇನು...

ಹರಿಕಥೆಯ ಪ್ರೇಮ, ಜಪತಪದ ನೇಮ..
ಬೇಧಭಾವವನು ಕೋಪತಾಪವನು ರೋಷಾದ್ವೇಷವನು ಬಿಡರು..
ಶ್ರೀ ರಾಮಾ..ಆ...

ನೊರೆಂಟು ರೂಪದಿ ನೀ ಬಂದರೇನು..
ನಿನ್ನನ್ನು ಅರಿತವರ ನಾ ಕಾಣೆನು...

ರಾಮ..ರಾಮ್.. ಜಯಜಯ ರಾಮ್..
ಜಾನಕಿರಾಮ್, ದಶರಥರಾಮ್...
ರಾಮಾ..ಆ...
ರಾಮಾ..ಆ...

Monday, February 17, 2020

ಹೇಳೇ ಗೆಳತಿ ಪ್ರಿಯ ಮಾಧವ ಬಾರನೆ

ಹೇಳೇ ಗೆಳತಿ ಪ್ರಿಯ ಮಾಧವ ಬಾರನೆ/hele gelathi priya madhava baarane
ಚಿತ್ರ: ಕೆಸರಿನ ಕಮಲ/kesarina kamala (1973)
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಎಸ್.ಜಾನಕಿ.

ಈ ಹಾಡನ್ನು ಇಲ್ಲಿ ನೋಡಬಹುದು: https://m.youtube.com/watch?v=aA7gw9a51u0


ಆಆಆ... ಆಆಆ.... ಆಆಆ...


ಹೇಳೇ ಗೆಳತಿ ಪ್ರಿಯ ಮಾಧವ ಬಾರನೇ ಇಂದೂ
ತಂದೆ ಹೂಮಾಲೆ ನಾ ದೇವಗೆ ಅರ್ಪಿಸಲೆಂದೂ...

ಹೇಳೇ ಗೆಳತಿ ಪ್ರಿಯ ಮಾಧವ ಬಾರನೇ ಇಂದೂ
ತಂದೆ ಹೂಮಾಲೆ ನಾ ದೇವಗೆ ಅರ್ಪಿಸಲೆಂದೂ...

ಹೇಳೇ ಗೆಳತೀ

ರಾಧೆಯು ನೀಡಿದ ಒಲವಿನ ಹೂವೂ
ರುಕ್ಮಿಣಿ ಸಲ್ಲಿಸಿದ ಸೇವೆಯ ಹೂವೂ
ರಾಧೆಯು ನೀಡಿದ ಒಲವಿನ ಹೂವೂ
ರುಕ್ಮಿಣಿ ಸಲ್ಲಿಸಿದಾ ಸೇವೆಯ ಹೂವೂ
ಮೀರಾ ಕಾಣಿಕೆ ಭಕ್ತಿಯ ಹೂವೂ,
ಮೀರಾ ಕಾಣಿಕೆ ಭಕ್ತಿಯ ಹೂವೂ,
ಈ ಹೃದಯದ ತೋಟದ ಕಿರುನಗೆ ಹೂವೂ


ತಂದೆ ಹೂಮಾಲೆ ನಾ ದೇವಗೆ ಅರ್ಪಿಸಲೆಂದೂ...


ಹೇಳೇ ಗೆಳತಿ ಪ್ರಿಯ ಮಾಧವ ಬಾರನೇ ಇಂದೂ....

ಹೇಳೇ ಗೆಳತೀ...


ಸ್ನೇಹದ ಕರಗಳು ಬೆಳೆಸಿದ ಹೂವೂ
ಪ್ರೀತಿ ಪರಾಗ ತುಂಬಿದ ಹೂವೂ
ಸ್ನೇಹದ ಕರಗಳು ಬೆಳೆಸಿದ ಹೂವೂ
ಪ್ರೀತಿ ಪರಾಗ ತುಂಬಿದ ಹೂವೂ
ಮಳೆಯಲು ಬಿಸಿಲಲೂ ಬಾಡದ ಹೂವೂ,
ಮಳೆಯಲು ಬಿಸಿಲಲೂ ಬಾಡದ ಹೂವೂ,
ಸೇವೆಯ ಭಾಗ್ಯಕೆ ಕಾದಿಹ ಹೂವೂ
ಸೇವೆಯ ಭಾಗ್ಯಕೆ ಕಾದಿಹ ಹೂವೂ


ತಂದೆ ಹೂಮಾಲೆ ನಾ ದೇವಗೆ ಅರ್ಪಿಸಲೆಂದೂ...
ಹೇಳೇ ಗೆಳತಿ ಪ್ರಿಯ ಮಾಧವ ಬಾರನೇ ಇಂದೂ....


ಹೇಳೇ ಎ ಗೆಳತಿ.... ಈ.....

Thursday, December 26, 2019

ಜಾಣೆಯಾಗಿರು ನನ್ನ ಮಲ್ಲಿಗೆ.. ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ

ಹಾಡು:  ಜಾಣೆಯಾಗಿರು ನನ್ನ ಮಲ್ಲಿಗೆ.. ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ / Jaaneyagiru Nanna Mallige Nee Hennagi Bandiruve Illige
ಚಿತ್ರ: ಧರ್ಮ ದಾರಿ ತಪ್ಪಿತು (1982)/Dharma Dari Tappithu
ಸಾಹಿತ್ಯ: ನರೇಂದ್ರ ಬಾಬು
ಸಂಗೀತ: ರಮೇಶ್  ನಾಯ್ಡು

ಈ ಹಾಡನ್ನು ಇಲ್ಲಿ ಕೇಳಬಹುದು: https://www.youtube.com/watch?v=8hagRAK7Hms

ಜಾಣೆಯಾಗಿರು ನನ್ನ ಮಲ್ಲಿಗೆ.. ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ...
ಜಾಣೆಯಾಗಿರು ನನ್ನ ಮಲ್ಲಿಗೆ.. ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ...

ನಮ್ಮಲ್ಲಿ ಮುನಿಸೇಕೋ ದೇವಗೆ.. ಏ...ಏ...
ಬಾಳಲ್ಲಿ ಎಲ್ಲೇ ಇದೆ ಹೆಣ್ಣಿಗೆ...
ನಮ್ಮಲ್ಲಿ ಮುನಿಸೇಕೋ ದೇವಗೆ..
ಬಾಳಲ್ಲಿ ಎಲ್ಲೇ ಇದೆ ಹೆಣ್ಣಿಗೆ... ಏ...ಏ...

ಜಾಣೆಯಾಗಿರು ನನ್ನ ಮಲ್ಲಿಗೆ.. ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ...

ಮುದ್ದಾದ ಎಲೆ ಬಂತು ಬಾಳಿಗೆ.. ಮುಳ್ಳೆಲ್ಲ ಸೇರಿಹವು ಬೇಲಿಗೆ...
ಎಲೆಯು ಮುಳ್ಳಿನ ಮೇಲೆ ಬಿದ್ದರೂ ...ಮುಳ್ಳು ಆ ಎಲೆಯಲ್ಲಿ ಬಿದ್ದರೂ...
ನಾಶ ಆ ಎಲೆಗೆ ತಾನೇ ಮಲ್ಲಿಗೆ...  ನೀ ಮೈಮರೆಯ ಬೇಡ ಆ ಮುಳ್ಳಿಗೆ ... ಏ...ಏ...

ಜಾಣೆಯಾಗಿರು ನನ್ನ ಮಲ್ಲಿಗೆ.. ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ...

ಕಾಯಾಗಿ ಇರುವಲ್ಲಿ ನೆಮ್ಮದಿ... ಹೊಂಬಣ್ಣವಾದಾಗ ಬೇಗುದಿ ... ಈ..ಈ...
ಹಣ್ಣಾದ ಬಳಿಕವೇ ತೊಂದರೆ... ಕೀಟಕ್ಕೆ ಆಹಾರವಾದರೆ ...  ಏ...ಏ...
ಮಣ್ಣಿನ ಪಾಲೇನೇ ನಾಳೆಗೆ... ಆ ಹಣ್ಣಿರದು ದೇವನ ಪೂಜೆಗೆ...  ಏ...ಏ...

ಜಾಣೆಯಾಗಿರು ನನ್ನ ಮಲ್ಲಿಗೆ.. ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ...
ನಮ್ಮಲ್ಲಿ ಮುನಿಸೇಕೋ ದೇವಗೆ.. ಏ...ಏ...
ಬಾಳಲ್ಲಿ ಎಲ್ಲೇ ಇದೆ ಹೆಣ್ಣಿಗೆ...

ಜಾಣೆಯಾಗಿರು ನನ್ನ ಮಲ್ಲಿಗೆ.. ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ...

Friday, March 1, 2019

ದೇವಾ ಮಹಾದೇವ

ಹಾಡು: ದೇವಾ ಮಹಾದೇವ/deva mahadeva
ಚಿತ್ರ: ಶಿವ ಮೆಚ್ಚಿದ ಕಣ್ಣಪ್ಪ  (1988)/shiva mechchida kannappa
ಸಾಹಿತ್ಯ: ಚಿ|ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ

ಈ ಹಾಡನ್ನು ಇಲ್ಲಿ ನೋಡಬಹುದು: https://www.youtube.com/watch?v=W5iajoMJ95o

ದೇವಾ ಮಹಾದೇವ...
ದೇವಾ ಮಹಾದೇವ...
ನೀನೇ ನನ್ನ ಜೀವಾ.. ಬಿಡಲಾರೆ ಪಾದವಾ....
ದೇವಾ ಮಹಾದೇವ...

ಎಲ್ಲಿದ್ದೆ ನಾನು, ಹೇಗಿದ್ದೆ ನಾನು...
ಎಲ್ಲಿದ್ದೆ ನಾನು, ಹೇಗಿದ್ದೆ ನಾನು...
ನಂಬಲು ನಿನ್ನ ಏನಾದೆ ನಾನು....

ಕಣ್ಣಲಿ ನೀನು.. ಮನಸಲಿ ನೀನು...
ಕಣ್ಣಲಿ ನೀನು.. ಮನಸಲಿ ನೀನು...
ಹೀಗಿರುವಾಗ ಏನಾದರೇನು....

ಸುಡಲಿ ದೇಹವಾ.. ಉರಿವ ಬೆಂಕಿಯು...
ನಿನ್ನ ಬೇರೆಯಲಿ ನನ್ನ ಜೀವವು...

ದೇವಾ ಮಹಾದೇವ...

ಕೈಲಾಸವಂತೆ.. ಭೂಲೋಕವಂತೆ...
ಕೈಲಾಸವಂತೆ.. ಭೂಲೋಕವಂತೆ ...
ವಾಹನ ನಿನಗೆ ಈ ನಂದಿಯಂತೆ...

ಶಿವರಾತ್ರಿಯಂತೆ.. ನವರಾತ್ರಿಯಂತೆ ..
ಶಿವರಾತ್ರಿಯಂತೆ.. ನವರಾತ್ರಿಯಂತೆ ..
ಏತಕೆ ಬೇಕು ಹಾಗೆಲ್ಲ ಚಿಂತೆ...

ನಿನ್ನ ನೋಡಿದ.. ನೋಡಿ ಹಾಡಿದ ಎಲ್ಲ ರಾತ್ರಿ ಶಿವರಾತ್ರಿಯೇ...
ಆಡೋ ಮಾತು ಶಿವ ಮಂತ್ರದಂತೆಯೇ ಬೇರೆ ಏನನು ಅರಿಯೆ ತಂದೆಯೇ...
ಅಪ್ಪ ಅಮ್ಮ ನನಗಿಲ್ಲ.. ನಿನ್ನ ಬಿಟ್ಟು ಬೇರಿಲ್ಲ...

ಜಟಾಧರ.. ಗಂಗಾಧರ..
ಸುರೇಶ.. ಗಿರೀಶ.. ಮಹೇಶ...

Tuesday, January 23, 2018

ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ

ಹಾಡು: ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ/nagalarade alalarade tolaladide jeeva
ಚಿತ್ರ: ಶ್ರುತಿ ಸೇರಿದಾಗ [1987]/shruthi seridaaga
ಸಾಹಿತ್ಯ: ಚಿ || ಉದಯಶಂಕರ್
ಸಂಗೀತ: ಟಿ.ಜಿ ಲಿಂಗಪ್ಪ

ಈ ಹಾಡನ್ನು ಇಲ್ಲಿ ನೋಡಬಹುದು:  https://www.youtube.com/watch?v=QAlmp-5EMdk

ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ...
ಬರಿ ಮಾತಲಿ ಹೇಳಲಾಗದೆ, ಮನದಾಳದ ನೋವಾ...

ದಿನಕೊಂದು ಬಣ್ಣ, ಕ್ಷಣಕೊಂದು ಬಣ್ಣ, ಏನೇನೊ ವೇಷ, ಮಾತಲ್ಲಿ ಮೋಸ...
ದಿನಕೊಂದು ಬಣ್ಣ, ಕ್ಷಣಕೊಂದು ಬಣ್ಣ, ಏನೇನೊ ವೇಷ, ಮಾತಲ್ಲಿ ಮೋಸ...
ಆ ಮಾತನೆಲ್ಲ ನಿಜವೆಂದು ನಂಬಿ..
ಆ ಮಾತನೆಲ್ಲ ನಿಜವೆಂದು ನಂಬಿ... ಮನದಾಸೆಯೇ..
ಮಣ್ಣಾಯಿತೆ...
ಮನದಾಸೆಯೆ ಮಣ್ಣಾಯಿತೆ ಮನ ನೆಮ್ಮದಿ ದೂರಯಿತೇ...
ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ...
ಬರಿ ಮಾತಲಿ ಹೇಳಲಾಗದೆ, ಮನದಾಳದ ನೋವಾ...

ನಿಜವಾದ ಪ್ರೇಮ, ನಿಜವಾದ ಸ್ನೇಹ‌, ಅನುರಾಗವೇನೊ ಬಲ್ಲೋರು ಇಲ್ಲ...
ನಿಜವಾದ ಪ್ರೇಮ, ನಿಜವಾದ ಸ್ನೇಹ‌, ಅನುರಾಗವೇನೊ ಬಲ್ಲೋರು ಇಲ್ಲ....
ಬಾಳಲ್ಲಿ ನಟನೆ ಹೀಗೇಕೊ ಕಾಣೆ.. ಏ..
ಬಾಳಲ್ಲಿ  ನಟನೆ ಹೀಗೇಕೊ ಕಾಣೆ..
ಬದುಕಲ್ಲಿಯೆ.. ಏ....
ಹುಡುಗಾಟವೇ...
ಬದುಕಲ್ಲಿಯೆ, ಹುಡುಗಾಟವೆ, ಈ ಆಟಕೆ ಕೊನೆಯಿಲ್ಲವೇ...

ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ...
ಬರಿ ಮಾತಲಿ ಹೇಳಲಾಗದೆ, ಮನದಾಳದ ನೋವಾ...

Wednesday, June 21, 2017

ಮಿನುಗುವ ತಾರೆಯ ಸಡಗರ ನೋಡು

ಹಾಡು: ಮಿನುಗುವ ತಾರೆಯ ಸಡಗರ ನೋಡು / minuguva taareya sadagara nodu
ಚಿತ್ರ: ಜನ್ಮ ಜನ್ಮದ ಅನುಬಂಧ /Janma Janmada Anubandha (1980)
ಸಂಗೀತ; ಇಳಯರಾಜಾ
ಸಾಹಿತ್ಯ; ಚಿ | ಉದಯಶಂಕರ್
ಹಾಡಿದವರು: ಸುಲೋಚನಾ


ಈ ಹಾಡನ್ನು ಇಲ್ಲಿ ಕೇಳಬಹುದು:   https://www.youtube.com/watch?v=g_QPoNd0g2U

ನ ನ ನ ನ... ನ ನ ನ ನ...
ನ ನ... ಹೇ ಹೇ ಹೇ
ನ ನ... ಹೇ ಹೇ ಹೇ
ನ ನ

ಮಿನುಗುವ ತಾರೆಯ ಸಡಗರ ನೋಡು...
ಮಿನುಗುವ ತಾರೆಯ ಸಡಗರ ನೋಡು...
ನಗುತಾ ಬಂದಾ, ಶಶಿಯು ತಂದ..ಬೆಳಕನು ಕಾಣೆ ನೀ ಏನು.. ನ ನ ನಾ..
ಮಿನುಗುವ ತಾರೆಯ...ಆ...

ತೇಲುವ ಮುಗಿಲಿನ ಮರೆಯಲಿ ಚಂದ್ರಾ...ಆ...
ಮೋಡವಾ ಸುರಿಸುತ ಇಣುಕುತಾ ಬಂದಾ...ಆ..
ಹಾಲಿನಂಥ ಬೆಳಕ ತಂದು ಚೆಲ್ಲುತ್ತಿರುವ ನೆಲದಲಿ..
ಬೆಳ್ಳಿ ಬಣ್ಣ ತುಂಬುತ್ತಿರುವ ಮಲ್ಲಿಗೆಯ ಮೊಗ್ಗಲಿ..
ಗಾಳಿಯು ಹಾಸಿದೆ.. ತಂಪಿನ ಹಾಸಿಗೆ..ಎ..
ತಾಯಿಯ ಲಾಲಿ ಹಾಡು ನಿನ್ನ ತೂಗಿದೆ..

ಮಿನುಗುವ ತಾರೆಯ ಸಡಗರ ನೋಡು....
ಮಿನುಗುವ ತಾರೆಯ...ಆ...

ಪ್ರೀತಿಯ ಅಲೆಯಲಿ ನಲಿಯುವ ರಾಗ..ಆ..
ಮಮತೆಯೇ ಕುಣಿಯುತ ನಡೆಯಲಿ ಈಗ...ಆ..
ಪ್ರೇಮದಿಂದ ನಿನ್ನ ಹರಸಿ ಮಗುವೇ ದಿನವೂ ಹಾಡುವೆ..
ದೇವನಲ್ಲಿ ಎಂದು ನಾನು ನಿನ್ನ ಕ್ಷೇಮ ಕೋರುವೆ..
ಭೀತಿಯು ಸೋಕದೆ, ನೋವನು ಕಾಣದೆ...
ನೆಮ್ಮದಿ ಇಂದ ಎಂದು ನೀನು ಬಾಳುವೆ..

ಮಿನುಗುವ ತಾರೆಯ ಸಡಗರ ನೋಡು...
ನಗುತಾ ಬಂದಾ, ಶಶಿಯು ತಂದ..ಬೆಳಕನು ಕಾಣೆ ನೀ ಏನು.. ನ ನ ನಾ..
ಮಿನುಗುವ ತಾರೆಯ ಸಡಗರ ನೋಡು...

Monday, February 16, 2015

ಕರೆದಾಗ ನೀನು ಬರಬಾರದೇನು

ಹಾಡು: ಕರೆದಾಗ ನೀನು ಬರಬಾರದೇನು / karedaaga neenu barabaradenu
ಚಿತ್ರ: ಪ್ರೇಮಾನುಬಂಧ / premaanubandha (1981)
ಸಾಹಿತ್ಯ: ಚಿ | ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ಎಸ್. ಜಾನಕಿ



ಈ ಹಾಡನ್ನು ಇಲ್ಲಿ ನೋಡಬಹುದು:  https://www.youtube.com/watch?v=-Toyouah19c




ಕರೆದಾಗ ನೀನು.. ಬರಬಾರದೇನು....
ಕರೆದಾಗ ನೀನು.. ಬರಬಾರದೇನು....
ನನ್ನ ದೈವ ನೀನು.. ನಿನ್ನ ದಾಸಿ ನಾನು..
ನನ್ನ ದೈವ ನೀನು.. ನಿನ್ನ ದಾಸಿ ನಾನು..
ಕರೆದಾಗ ನೀನು ಬರಬಾರದೇನು....

ಯಾರ ಪುಣ್ಯವೋ ಕಾಣೆ.. ಯಾರ ಪೂಜೆಯೋ ಕಾಣೆ..
ಯಾರ ಪುಣ್ಯವೋ ಕಾಣೆ.. ಯಾರ ಪೂಜೆಯೋ ಕಾಣೆ..
ಕರೆಯದೆ ಬಂದೇ.. ಮನೆಯಲೆ ನಿಂತೆ...ಎ....ಎ...

ಅ....ಅ......ಅ....
ಅ....ಅ......ಅ....

ಮನಸಿನಲಿ ಆಸೆ ತಂದೆ.. ಕಂಗಳಲಿ ಬೆಳಕ ತಂದೆ...
ಚಲುವನೇ ನಿನಗೆ ಮರುಳಾಗಿ ಹೋದೆ...
ಅರಿಯೆಯಾ ನನ್ನ.. ಬಯಕೆಯ ಚೆನ್ನ...
ಅರಿಯೆಯಾ ನನ್ನ.. ಬಯಕೆಯ ಚೆನ್ನ...
ವೇದನೆ ನಾ ತಾಳೆನು... ಸ್ವಾಮೀ...

ಕರೆದಾಗ ನೀನು.. ಬರಬಾರದೇನು....
ಕರೆದಾಗ ನೀನು.. ಬರಬಾರದೇನು....
ನನ್ನ ದೈವ ನೀನು.. ನಿನ್ನ ದಾಸಿ ನಾನು..
ನನ್ನ ದೈವ ನೀನು.. ನಿನ್ನ ದಾಸಿ ನಾನು..
ಕರೆದಾಗ ನೀನು ಬರಬಾರದೇನು....

ನಿನ್ನ ಪೂಜೆಗೆಂದು ಬಂದ ಹೂವ ಮರೆವುದೇನು ಚಂದ...
ನಿನ್ನ ಪೂಜೆಗೆಂದು ಬಂದ ಹೂವ ಮರೆವುದೇನು ಚಂದ...
ಸ್ವೀಕರಿಸೆನ್ನನು ಪ್ರೇಮದಿಂದ ನೀನು...

ಎಂದು ಹೀಗೆ ಮೌನವೇನು..ನನ್ನ ಮೇಲೆ ಕೋಪವೇನು...
ಗೋಪಾಲ ನಿನ್ನನು ಬಿಡಲಾರೆ ನಾನು...

ಸನಿಹಕೆ ಬಾರೋ..ನಗುಮುಖ ತೋರೋ...
ಸನಿಹಕೆ ಬಾರೋ..ನಗುಮುಖ ತೋರೋ...
ಬೇಡುವೆ ನಾ ನಿನ್ನನು..ಸ್ವಾಮೀ...

ಕರೆದಾಗ ನೀನು.. ಬರಬಾರದೇನು....
ಕರೆದಾಗ ನೀನು.. ಬರಬಾರದೇನು....
ನನ್ನ ದೈವ ನೀನು.. ನಿನ್ನ ದಾಸಿ ನಾನು..
ನನ್ನ ದೈವ ನೀನು.. ನಿನ್ನ ದಾಸಿ ನಾನು..
ಕರೆದಾಗ ನೀನು ಬರಬಾರದೇನು....

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...