Friday, March 1, 2019

ದೇವಾ ಮಹಾದೇವ

ಹಾಡು: ದೇವಾ ಮಹಾದೇವ/deva mahadeva
ಚಿತ್ರ: ಶಿವ ಮೆಚ್ಚಿದ ಕಣ್ಣಪ್ಪ  (1988)/shiva mechchida kannappa
ಸಾಹಿತ್ಯ: ಚಿ|ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ

ಈ ಹಾಡನ್ನು ಇಲ್ಲಿ ನೋಡಬಹುದು: https://www.youtube.com/watch?v=W5iajoMJ95o

ದೇವಾ ಮಹಾದೇವ...
ದೇವಾ ಮಹಾದೇವ...
ನೀನೇ ನನ್ನ ಜೀವಾ.. ಬಿಡಲಾರೆ ಪಾದವಾ....
ದೇವಾ ಮಹಾದೇವ...

ಎಲ್ಲಿದ್ದೆ ನಾನು, ಹೇಗಿದ್ದೆ ನಾನು...
ಎಲ್ಲಿದ್ದೆ ನಾನು, ಹೇಗಿದ್ದೆ ನಾನು...
ನಂಬಲು ನಿನ್ನ ಏನಾದೆ ನಾನು....

ಕಣ್ಣಲಿ ನೀನು.. ಮನಸಲಿ ನೀನು...
ಕಣ್ಣಲಿ ನೀನು.. ಮನಸಲಿ ನೀನು...
ಹೀಗಿರುವಾಗ ಏನಾದರೇನು....

ಸುಡಲಿ ದೇಹವಾ.. ಉರಿವ ಬೆಂಕಿಯು...
ನಿನ್ನ ಬೇರೆಯಲಿ ನನ್ನ ಜೀವವು...

ದೇವಾ ಮಹಾದೇವ...

ಕೈಲಾಸವಂತೆ.. ಭೂಲೋಕವಂತೆ...
ಕೈಲಾಸವಂತೆ.. ಭೂಲೋಕವಂತೆ ...
ವಾಹನ ನಿನಗೆ ಈ ನಂದಿಯಂತೆ...

ಶಿವರಾತ್ರಿಯಂತೆ.. ನವರಾತ್ರಿಯಂತೆ ..
ಶಿವರಾತ್ರಿಯಂತೆ.. ನವರಾತ್ರಿಯಂತೆ ..
ಏತಕೆ ಬೇಕು ಹಾಗೆಲ್ಲ ಚಿಂತೆ...

ನಿನ್ನ ನೋಡಿದ.. ನೋಡಿ ಹಾಡಿದ ಎಲ್ಲ ರಾತ್ರಿ ಶಿವರಾತ್ರಿಯೇ...
ಆಡೋ ಮಾತು ಶಿವ ಮಂತ್ರದಂತೆಯೇ ಬೇರೆ ಏನನು ಅರಿಯೆ ತಂದೆಯೇ...
ಅಪ್ಪ ಅಮ್ಮ ನನಗಿಲ್ಲ.. ನಿನ್ನ ಬಿಟ್ಟು ಬೇರಿಲ್ಲ...

ಜಟಾಧರ.. ಗಂಗಾಧರ..
ಸುರೇಶ.. ಗಿರೀಶ.. ಮಹೇಶ...

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...