Tuesday, January 23, 2018

ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ

ಹಾಡು: ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ/nagalarade alalarade tolaladide jeeva
ಚಿತ್ರ: ಶ್ರುತಿ ಸೇರಿದಾಗ [1987]/shruthi seridaaga
ಸಾಹಿತ್ಯ: ಚಿ || ಉದಯಶಂಕರ್
ಸಂಗೀತ: ಟಿ.ಜಿ ಲಿಂಗಪ್ಪ

ಈ ಹಾಡನ್ನು ಇಲ್ಲಿ ನೋಡಬಹುದು:  https://www.youtube.com/watch?v=QAlmp-5EMdk

ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ...
ಬರಿ ಮಾತಲಿ ಹೇಳಲಾಗದೆ, ಮನದಾಳದ ನೋವಾ...

ದಿನಕೊಂದು ಬಣ್ಣ, ಕ್ಷಣಕೊಂದು ಬಣ್ಣ, ಏನೇನೊ ವೇಷ, ಮಾತಲ್ಲಿ ಮೋಸ...
ದಿನಕೊಂದು ಬಣ್ಣ, ಕ್ಷಣಕೊಂದು ಬಣ್ಣ, ಏನೇನೊ ವೇಷ, ಮಾತಲ್ಲಿ ಮೋಸ...
ಆ ಮಾತನೆಲ್ಲ ನಿಜವೆಂದು ನಂಬಿ..
ಆ ಮಾತನೆಲ್ಲ ನಿಜವೆಂದು ನಂಬಿ... ಮನದಾಸೆಯೇ..
ಮಣ್ಣಾಯಿತೆ...
ಮನದಾಸೆಯೆ ಮಣ್ಣಾಯಿತೆ ಮನ ನೆಮ್ಮದಿ ದೂರಯಿತೇ...
ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ...
ಬರಿ ಮಾತಲಿ ಹೇಳಲಾಗದೆ, ಮನದಾಳದ ನೋವಾ...

ನಿಜವಾದ ಪ್ರೇಮ, ನಿಜವಾದ ಸ್ನೇಹ‌, ಅನುರಾಗವೇನೊ ಬಲ್ಲೋರು ಇಲ್ಲ...
ನಿಜವಾದ ಪ್ರೇಮ, ನಿಜವಾದ ಸ್ನೇಹ‌, ಅನುರಾಗವೇನೊ ಬಲ್ಲೋರು ಇಲ್ಲ....
ಬಾಳಲ್ಲಿ ನಟನೆ ಹೀಗೇಕೊ ಕಾಣೆ.. ಏ..
ಬಾಳಲ್ಲಿ  ನಟನೆ ಹೀಗೇಕೊ ಕಾಣೆ..
ಬದುಕಲ್ಲಿಯೆ.. ಏ....
ಹುಡುಗಾಟವೇ...
ಬದುಕಲ್ಲಿಯೆ, ಹುಡುಗಾಟವೆ, ಈ ಆಟಕೆ ಕೊನೆಯಿಲ್ಲವೇ...

ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ...
ಬರಿ ಮಾತಲಿ ಹೇಳಲಾಗದೆ, ಮನದಾಳದ ನೋವಾ...

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...