Monday, July 7, 2014

ಕಂದಯ್ಯ ನಗುವಾಗ ಚಂದಿರನು ನಗುತಾನ

ಹಾಡು: ಕಂದಯ್ಯ ನಗುವಾಗ ಚಂದಿರನು ನಗುತಾನ / kandayya naguvaga chandiranu nagutaana
ಚಿತ್ರ: ಕರಿನಾಗ (1981) / karinaaga
ಸಾಹಿತ್ಯ: ಬಸವರಾಜ್ ಕೆಸ್ತೂರ್
ಸಂಗೀತ; ಶಂಕರ್ ಗಣೇಶ್
ಹಾಡಿದವರು: ಎಸ್. ಜಾನಕಿ


ಈ ಹಾಡನ್ನು ಇಲ್ಲಿ ಕೇಳಬಹುದು:  http://www.youtube.com/watch?v=NXy-cB2bkaQ


ಕಂದಯ್ಯ ನಗುವಾಗ ಚಂದಿರನು ನಗುತಾನ..
ಚೆಂದದ ಕೂಸೆಂದು ಆಸೆಯಲಿ ಬೆಸೆವಾನ..
ಒಂದೊಂದೇ ಮುತ್ತಿಂದ ಸಿಂಗಾರ ಮಾಡ್ಯಾನ...
ಒಟ್ಟಾರೆ ನಿನ ಸಂಗ ಬೇಕೆಂದು ಬೇಡ್ಯಾನ..

ಕಂದಯ್ಯ ನಗುವಾಗ ಚಂದಿರನು ನಗುತಾನ..
ಚೆಂದದ ಕೂಸೆಂದು ಆಸೆಯಲಿ ಬೆಸೆವಾನ..
ಒಂದೊಂದೇ ಮುತ್ತಿಂದ ಸಿಂಗಾರ ಮಾಡ್ಯಾನ..
ಒಟ್ಟಾರೆ ನಿನ ಸಂಗ ಬೇಕೆಂದು ಬೇಡ್ಯಾನ..

ಕಂದಯ್ಯ ನಗುವಾಗ ಚಂದಿರನು ನಗುತಾನ..
ಚೆಂದದ ಕೂಸೆಂದು ಆಸೆಯಲಿ ಬೆಸೆವಾನ..

ಅಪ್ಪ ನಕ್ಕಾಗ ಬದುಕೆಲ್ಲ ಬಂಗಾರ..
ನಿನ್ನೊಲವೇ ನನಗೊಂದು ಆಧಾರ..
ಅಪ್ಪ ನಕ್ಕಾಗ ಬದುಕೆಲ್ಲ ಬಂಗಾರ..
ನಿನ್ನೊಲವೇ ನನಗೊಂದು ಆಧಾರ..

ನಿನ್ನ ನಗೆಯಲಿ..ಇ...
ನಿನ್ನ ನಗೆಯಲಿ ನಾನಿರುವೆ ಜಾಣ..
ಇದು ನನ್ನಾಣೆ ಶಿವನಾಣೆ ಕೇಳು..
ಇದು ನನ್ನಾಣೆ ಶಿವನಾಣೆ ಕೇಳು..
ಜೊತೆ ಜೊತೆಯಾಗಿ ಆಡುವೆನು ನಾನು..
ಜೊತೆ ಜೊತೆಯಾಗಿ ಆಡುವೆನು ನಾನು..

ಕಂದಯ್ಯ ನಗುವಾಗ ಚಂದಿರನು ನಗುತಾನ..
ಚೆಂದದ ಕೂಸೆಂದು ಆಸೆಯಲಿ ಬೆಸೆವಾನ..
ಒಂದೊಂದೇ ಮುತ್ತಿಂದ ಸಿಂಗಾರ ಮಾಡ್ಯಾನ..
ಒಟ್ಟಾರೆ ನಿನ ಸಂಗ ಬೇಕೆಂದು ಬೇಡ್ಯಾನ..

ಕಂದಯ್ಯ ನಗುವಾಗ ಚಂದಿರನು ನಗುತಾನ..
ಚೆಂದದ ಕೂಸೆಂದು ಆಸೆಯಲಿ ಬೆಸೆವಾನ..

ತಾಯಿ ಕೊರಗನು ನೀಗುವೆ ನಾ ಕಂದಯ್ಯ..
ತಾಯಿಯು ನಾ ನಿನಗೆ ನನ್ನಯ್ಯ..
ತಾಯಿ ಕೊರಗನು ನೀಗುವೆ ನಾ ಕಂದಯ್ಯ..
ತಾಯಿಯು ನಾ ನಿನಗೆ ನನ್ನಯ್ಯ..

ನನ್ನ ಉಸಿರಲಿ...ಇ...ಇ....
ನನ್ನ ಉಸಿರಲಿ ನೀನಿರುವೆ ಜಾಣ..
ಇದು ನನ್ನಾಣೆ ಶಿವನಾಣೆ ಕೇಳು..
ಇದು ನನ್ನಾಣೆ ಶಿವನಾಣೆ ಕೇಳು...
ಜೊತೆ ಜೊತೆಯಾಗಿ ಆಡುವೆನು ನಾನು..
ಜೊತೆ ಜೊತೆಯಾಗಿ ಆಡುವೆನು ನಾನು..

ಕಂದಯ್ಯ ನಗುವಾಗ ಚಂದಿರನು ನಗುತಾನ..
ಚೆಂದದ ಕೂಸೆಂದು ಆಸೆಯಲಿ ಬೆಸೆವಾನ..
ಒಂದೊಂದೇ ಮುತ್ತಿಂದ ಸಿಂಗಾರ ಮಾಡ್ಯಾನ..
ಒಟ್ಟಾರೆ ನಿನ ಸಂಗ ಬೇಕೆಂದು ಬೇಡ್ಯಾನ..

ಕಂದಯ್ಯ ನಗುವಾಗ ಚಂದಿರನು ನಗುತಾನ..
ಚೆಂದದ ಕೂಸೆಂದು ಆಸೆಯಲಿ ಬೆಸೆವಾನ..

2 comments:

keen observer28 said...

Thank you very much for posting the lyricsm Vinay...thumba dhanya vadhagallu!

Manju said...

ಸುಂದರವಾದ ಗೀತೆ :)

ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ

ಹಾಡು: ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ/nagalarade alalarade tolaladide jeeva ಚಿತ್ರ: ಶ್ರುತಿ ಸೇರಿದಾಗ [1987]/shruthi seridaaga ಸಾಹಿತ್ಯ: ಚಿ || ...