Friday, June 27, 2014

ಗೋಕುಲದಿಂದ ಮಥುರೆಗೆ ಕೃಷ್ಣನು ಬಂದ

ಹಾಡು: ಗೋಕುಲದಿಂದ ಮಥುರೆಗೆ ಕೃಷ್ಣನು ಬಂದ / gokuladinda mathurege krishnanu banda
ಚಿತ್ರ: ಈ ಬಂಧ ಅನುಬಂಧ (1987) / e banda anubhanda
ಸಾಹಿತ್ಯ: ಗೀತಪ್ರಿಯ
ಸಂಗೀತ: ರಮೇಶ್ ನಾಯ್ಡು
ಹಾಡಿದವರು: ಎಸ. ಜಾನಕಿ


ಈ ಹಾಡನ್ನು ಇಲ್ಲಿ ಕೇಳಬಹುದು: https://www.youtube.com/watch?v=28Ntz_QEnaA

ಆ...ಅ.....ಅ....
ಆ...ಅ.....ಅ....

ಗೋಕುಲದಿಂದ ಮಥುರೆಗೆ ಕೃಷ್ಣನು ಬಂದ.. ಅ..
ಗೋಕುಲದಿಂದ ಮಥುರೆಗೆ ಕೃಷ್ಣನು ಬಂದ...

ದೇವಕಿಗೆ ಹೊಸದೊಂದು ಸಂತೋಷ ತಂದ...ಅ...ಅ...
ದೇವಕಿಗೆ ಹೊಸದೊಂದು ಸಂತೋಷ ತಂದ...ಅ...ಅ...

ಗೋಕುಲದಿಂದ ಮಥುರೆಗೆ ಕೃಷ್ಣನು ಬಂದ.. ಅ..

ಮರಳು ಕಾಡಲಿ ಹೂಬನ ಅರಳಿತು...ಉ..
ಮರಳು ಕಾಡಲಿ ಹೂಬನ ಅರಳಿತು...
ಅವನ ನಗೆಜೇನಿನಿಂದ ...ಅ...

ಅ...ಅ....ಅ.....

ಮೌನದ ವೀಣೆಯು ರಾಗವ ಮಿಡಿಯಿತು...
ಮೌನದ ವೀಣೆಯು ರಾಗವ ಮಿಡಿಯಿತು...
ಅವನ ಸವಿಮಾತಿನಿಂದ..ಅ...
ತುಂಬಿತು ಭಾವವು, ನಲಿಯಿತು ಜೀವವು...
ಏನೋ ಆನಂದದಿಂದ..ಅ...ಅ...

ಗೋಕುಲದಿಂದ ಮಥುರೆಗೆ ಕೃಷ್ಣನು ಬಂದ...
ದೇವಕಿಗೆ ಹೊಸದೊಂದು ಸಂತೋಷ ತಂದ...ಅ...ಅ...
ಗೋಕುಲದಿಂದ ಮಥುರೆಗೆ ಕೃಷ್ಣನು ಬಂದ...

ತೋರಿಸಲಾಗದೆ ಎದೆಯಲಿ ಉಳಿದಾ...ಅ..
ತೋರಿಸಲಾಗದೆ ಎದೆಯಲಿ ಉಳಿದ ಮಮತೆ ಹೊಳೆಹೊಮ್ಮಿ ಬಂತು...

ಅ...ಅ...ಅ....ಅ.....

ಅರಿಯದೆ ತನ್ನನು ಕಂಗಳು ತುಂಬಿ..
ಅರಿಯದೆ ತನ್ನನು ಕಂಗಳು ತುಂಬಿ ಕಂಬನಿ ಹನಿ ಚಿಮ್ಮಿ ಬಂತು...
ಪ್ರೀತಿಯ ಸುರಿಸಿ, ಕಂದನ ಹರಿಸಿ... ತಾಯ್ಮೆಯು ಮೈತೋರಿ ಬಂತು...ಉ..ಉ...

ಗೋಕುಲದಿಂದ ಮಥುರೆಗೆ ಕೃಷ್ಣನು ಬಂದ...ಅ..ಅ..
ಗೋಕುಲದಿಂದ ಮಥುರೆಗೆ ಕೃಷ್ಣನು ಬಂದ...ಅ..
ದೇವಕಿಗೆ ಹೊಸದೊಂದು ಸಂತೋಷ ತಂದ...ಅ...ಅ...
ದೇವಕಿಗೆ ಹೊಸದೊಂದು ಸಂತೋಷ ತಂದ...ಅ...ಅ...

ಗೋಕುಲದಿಂದ ಮಥುರೆಗೆ ಕೃಷ್ಣನು ಬಂದ...ಅ..ಅ..

No comments:

ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ

ಹಾಡು: ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ/nagalarade alalarade tolaladide jeeva ಚಿತ್ರ: ಶ್ರುತಿ ಸೇರಿದಾಗ [1987]/shruthi seridaaga ಸಾಹಿತ್ಯ: ಚಿ || ...