Monday, January 30, 2012

ಊರು ಹೇಗೆಂದು ಊರ ಜನರು ಹೇಗೆಂದು

ಹಾಡು: ಊರು ಹೇಗೆಂದು ಊರ ಜನರು ಹೇಗೆಂದು / ooru hegendu oora janaru hegendu
ಚಿತ್ರ: ಕರುಣಾಮಯಿ (1987)/ karunamayi
ಸಾಹಿತ್ಯ: ಚಿ | ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಹಾಡಿದವರು: ಎಸ.ಪಿ ಬಾಲಸುಬ್ರಮಣ್ಯಂ

ಈ ಹಾಡನ್ನು ಇಲ್ಲಿ ನೋಡಬಹುದು: http://www.youtube.com/watch?v=EfzGlxveTzk

ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
ಅ..ಹಾ..ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ..
ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ..
ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
ತಿಳಿದೇ ನನ್ನ ಅಕ್ಕಯ..ಅ..

ಮಾವಿನ ವಾಟೆಯಿಂದ ಮಾವಿನ ಮರ ಹುಟ್ಟೋ ಕಾಲವು ಇಂದು ಹೋಯಿತು..
ಅ..ಮಾವಿನ ವಾಟೆಯಿಂದ ಮಾವಿನ ಮರ ಹುಟ್ಟೋ ಕಾಲವು ಇಂದು ಹೋಯಿತು..
ಮಾವಿನ ಹಣ್ಣಿನಲ್ಲಿ ಬೇವಿನ ಕಹಿ ತುಂಬಿ ಕೊಲ್ಲುವ ಕಾಲ ಬಂದಿತು..
ಮಾವಿನ ಹಣ್ಣಿನಲ್ಲಿ.. ಬೇವಿನ ಕಹಿ ತುಂಬಿ.. ಕೊಲ್ಲುವ ಕಾಲ ಬಂದಿತು..
ಇಂತ ಕಲಿಗಾಲದಾಗ.. ಇಂತ ಜನ ಬಾಳುವಾಗ..
ಓ..ಹೋ..ಹೋ..ಇಂತ ಕಲಿಗಾಲದಾಗ.. ಇಂತ ಜನ ಬಾಳುವಾಗ..
ಮಳೆ ಹೇಗೆ ಭೂಮಿಗೆ ಬಂದಿತು..
ಋತುವೆಲ್ಲ ಹಿಂದೆ ಮುಂದೆ ಆಯಿತು..

ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
ಈ..ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ..
ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ..
ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
ತಿಳಿದೇ ನನ್ನ ಅಕ್ಕಯ..ಅ..

ಹೆಂಡಿರ ಕಂಡ ಕಣ್ಣು ಬೇರೇನೂ ಕಾಣೋದಿಲ್ಲ ಹೆಂಡಿರೆ ಅವರ ದೇವರು..
ಅ..ಹ..ಹ..ಹೆಂಡಿರ ಕಂಡ ಕಣ್ಣು ಬೇರೇನೂ ಕಾಣೋದಿಲ್ಲ ಹೆಂಡಿರೆ ಅವರ ದೇವರು..
ಸಾಕಿದ ಅಪ್ಪ ಅಮ್ಮ ಇನ್ನೇಕೆ ಬೇಕು ತಮ್ಮ ಯಾರನ್ನು ಅವರು ಕಾಣರು..
ಸಾಕಿದ ಅಪ್ಪ ಅಮ್ಮ ಇನ್ನೇಕೆ ಬೇಕು ತಮ್ಮ ಯಾರನ್ನು ಅವರು ಕಾಣರು..
ಹತ್ತು ಅವತಾರವೇನು..ಹ..ಹ..ಹಾ.. ನೂರು ಅವತಾರವೇನು..
ಹತ್ತು ಅವತಾರವೇನು, ನೂರು ಅವತಾರವೇನು..
ಸಂಸಾರ ಉದ್ದಾರವಾದಿತೇ, ಈ ಸ್ವಾರ್ಥ ನಾಶವಾದಿತೇ..ಎ...

ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
ಈ..ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ..
ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ..
ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
ತಿಳಿದೇ ನನ್ನ ಅಕ್ಕಯ..ಅ..

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...