Tuesday, January 10, 2012

ಚೆಲುವಾಂತ ಚೆನ್ನಿಗನೇ ನಲಿದಾಡು ಬಾ

ಹಾಡು: ಚೆಲುವಾಂತ ಚೆನ್ನಿಗನೇ ನಲಿದಾಡು ಬಾ / cheluvaanta chenigane naalidaadu baa
ಚಿತ್ರ: ಅಮರ ಶಿಲ್ಪಿ ಜಕಣಚಾರಿ (1964) / amara shilpi jakanachari
ಸಾಹಿತ್ಯ: ಚಿ || ಸದಾಶಿವಯ್ಯ
ಸಂಗೀತ: ಎಸ. ರಾಜೇಶ್ವರ ರಾವ್
ಹಾಡಿದವರು: ಪಿ. ಶುಶೀಲಾ

ಈ ಹಾಡನ್ನು ಇಲ್ಲಿ ಕೇಳಬಹುದು: https://www.youtube.com/watch?v=Pkj41rlz5cg

ಚೆಲುವಾಂತ ಚೆನ್ನಿಗನೇ ನಲಿದಾಡು ಬಾ..
ಈ ಶೃಂಗಾರ ಶಿಲೆಯೊಡನೆ ಕುಣಿದಾಡು ಬಾರಾ ..ಅ..
ಚೆಲುವಾಂತ ಚೆನ್ನಿಗನೇ ನಲಿದಾಡು ಬಾ..

ಚೆಲುವಾಂತ ಚೆನ್ನಿಗನೇ ನಲಿದಾಡು ಬಾ..
ಈ ಶೃಂಗಾರ ಶಿಲೆಯೊಡನೆ ಕುಣಿದಾಡು ಬಾರಾ ..ಅ..
ಚೆಲುವಾಂತ ಚೆನ್ನಿಗನೇ ನಲಿದಾಡು ಬಾ..

ತಾಳ ಮೇಳದೊಳು ಕಲೆಯುವ ಬಾ..ರ...ಅ..
ಆ...ಅ...ಅ...ಅ...ಆ..ಅ..
ತಾಳ ಮೇಳದೊಳು ಕಲೆಯುವ ಬಾರ..
ಗಾಳಿ ಗಂಧದೊಳು ಸೇರುವ ಬಾರಾ..
ಭಾವ ಭಂಗಿಯೊಳು ಬೆರೆಯುವ ಬಾರಾ..
ಭಾವ ಭಂಗಿಯೊಳು ಬೆರೆಯುವ ಬಾರಾ..
ಪ್ರೇಮಾನಂದವ ನೀ ತಾರ...ಆ..ಅ..

ಚೆಲುವಾಂತ ಚೆನ್ನಿಗನೇ ನಲಿದಾಡು ಬಾ..

ನೀಲಿ ಗಗನದಿ ತೇಲಿ ಹುಡುಕಿದೆ..
ನೀಲಿ ಗಗನದಿ ತೇಲಿ ಹುಡುಕಿದೆ..
ಕಾಮನ ಬಿಲ್ಲನು ಏರಿ ನೋಡಿದೆ...
ಚಂದ್ರ ತಾರೆಗಳ ಸೇರಿ ಹೇಳಿದೆ..
ಎಲ್ಲ್ ಅಡಗಿರುವೆ ಬಳಿ ಬಾರಾ..ಅ..

ಚೆಲುವಾಂತ ಚೆನ್ನಿಗನೇ ನಲಿದಾಡು ಬಾ..

ಕಾರು ಮೋಡವು ಕೂಡುತ ಬರಲು..
ಕಾರು ಮೋಡವು ಕೂಡುತ ಬರಲು..
ಘಲಿ ಘಲಿ ಕುಣಿವ ನೀಲಿ ನವಿಲೊಳು..

ನಿನ್ನಲಿ ಪರಿವಶಳಾದೆ ಈ..ಗ..
ದಯವ ತೋರು ನೀ ಬೇಗನೆ ಬಾರಾ..ಅ..

ಚೆಲುವಾಂತ ಚೆನ್ನಿಗನೇ ನಲಿದಾಡು ಬಾ..
ಈ ಶೃಂಗಾರ ಶಿಲೆಯೊಡನೆ ಕುಣಿದಾಡು ಬಾರಾ ..ಅ..
ಚೆಲುವಾಂತ ಚೆನ್ನಿಗನೇ ನಲಿದಾಡು ಬಾ..

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...