Thursday, August 11, 2011

ಬಾ ಬಾ ಬಾ ರಾಗವಾಗಿ

ಹಾಡು: ಬಾ ಬಾ ಬಾ ರಾಗವಾಗಿ / ba ba baa raagavaagi
ಚಿತ್ರ: ಆನಂದ ಭೈರವಿ (1982) / ananda bhairavi
ಸಾಹಿತ್ಯ: ಸೋರಟ್ ಅಶ್ವತ್
ಸಂಗೀತ: ರಮೇಶ್ ನಾಯ್ಡು
ಹಾಡಿದವರು: ಎಸ್ ಪಿ ಬಾಲಸುಬ್ರಮಣ್ಯಂ


ಈ ಹಾಡನ್ನು ಇಲ್ಲಿ ನೋಡಬಹುದು:  https://www.youtube.com/watch?v=ZfsXzcmxrww


ಬಾ ಬಾ ಬಾ ರಾಗವಾಗಿ
ಸೇರೆ ಎನ್ನ ನಾದವಾಗಿ..ಇ..
ನಮ್ಮಿಂದಿನ ಮಿಲನ ರಾಗ ಸಂಭ್ರಮ..
ನೀನಾಡುವ ನಾಟ್ಯ ನಾದ ಸಂಗಮ..ಅ..

ಬಾ ಬಾ ಬಾ ರಾಗವಾಗಿ
ಸೇರೆ ಎನ್ನ ನಾದವಾಗಿ

ಮರೆಯಲಾರೆ ನಾನು ಮಧುರ ನೇಹದ ನೋವನು
ಮರೆಯಲಾರೆ ನಾನು ಮಧುರ ನೇಹದ ನೋವನು
ಒಲವಿಗೇತಕೆ ಬಂಧನ..
ಬಾ ಹೃದಯದೆ ನಿನ್ನ ಅರ್ಚಿಸುವೆ..
ಈ ಹೃದಯವ ನಿನಗೆ ಅರ್ಪಿಸುವೆ..
ಕಾಲ್ಗಳ ಗೆಜ್ಜೆಯ ಝಣ ಝಣ ಝಣ ಝಣ ನುಡಿತ ಮಿಡಿತ ಕಲ್ಯಾಣಿ ರಾಗದೇ..
ಭರದಿ ಬಾರೆ ನೀ ಭೈರವಿ...ಇ..
ಭರದಿ ಬಾರೆ ನೀ ಭೈರವಿ.., ನಟ ಭೈರವಿ.. ಆನಂದ ಭೈರವಿ..

ಬಾ ಬಾ ಬಾ ರಾಗವಾಗಿ
ಸೇರೆ ಎನ್ನ ನಾದವಾಗಿ..ಇ..

ಮುರಳಿಯಾದ ನನ್ನ ಮಿಡಿಯೋ ಚೇತನ ನೀನಾಗಿ..ಇ..
ಮುರಳಿಯಾದ ನನ್ನ ಮಿಡಿಯೋ ಚೇತನ ನೀನಾಗಿ..
ನೋವಿನ ಗೀತೆಗೆ ಜೊತೆಯಾಗಿ..
ಭಗ್ನ ಹೃದಯವೇ ಒಡಲಾಗಿ..
ಅಗ್ನಿ ಜ್ವಾಲೆಯೇ ಕಣ್ಣಾಗಿ..
ಕಣ್ಣಿಗೆ ಕಾಣುತ ಕೈಗಳ ಸೇರುತ ದಿವ್ಯ ದಿಗಂತದ ಜೋತಿಯಾಗುತ...
ಸನಿಹ ಬಾರೆ ನೀ ಭೈರವಿ..
ಸನಿಹ ಬಾರೆ ನೀ ಭೈರವಿ.. ನಟ ಭೈರವಿ.. ಆನಂದ ಭೈರವಿ..ಇ..

ಬಾ ಬಾ ಬಾ ರಾಗವಾಗಿ
ಸೇರೆ ಎನ್ನ ನಾದವಾಗಿ..
ನಮ್ಮಿಂದಿನ ಮಿಲನ ರಾಗ ಸಂಭ್ರಮ
ನೀನಾಡುವ ನಾಟ್ಯ ನಾದ ಸಂಗಮ..ಅ..
ಬಾ ಬಾ ಬಾ ರಾಗವಾಗಿ
ಸೇರೆ ಎನ್ನ ನಾದವಾಗಿ .. ಇ..

ಜನ ಹೃದಯನೇತ್ರಿ ವಿಶ್ವಾಭಿವೆತ್ರಿ ಜ್ವಲನೇತ್ರಧಾರಾಗ್ನಿ ಸಪ್ತ ಕಣ್ಕಣ ಕಂರಗಾತ್ರಿ.. ಸುಗಾತ್ರಿ..
ಮದ್ದಾತ್ರ ಮುಖ ಸಮುಧ್ಭೂತ ಗಾನ ಸ್ವಾನ ಚರಣಚರಣನನ ನಾಟ್ಯವರ್ತಿ.. ಪವಿತ್ರಿ..
ದಾನನೇತ್ರತ್ವ ಭೂತಾಗ್ನಿ ಹೋಮದಲಿಂದು ಪಾಪ ಸಂಚಯವೆಲ್ಲ ಭಸ್ಮವಾಗಿ..
ಆ ಜನ್ಮ ತಪಫಲದ ಈ ಜನ್ಮ ಜಪತಪದ ಗಾಯತ್ರಿಯಾಗಿ..ಇ...

ಜಪದಿ ಬಾ ಸಂಧ್ಯದೀಪವೇ ಇದೇ ನನ್ನೈ ದೀಪಾರಾಧನೆ..
ಹೃದಯ ಪೂರ್ಣ ವಾಹನೆ.. ಉದಯ ರಾಗಾಲಾಪನೆ..ಎ..
ಭೈರವಿ.. ನಟ ಭೈರವಿ.. ಆನಂದ ಭೈರವಿ.. ಇ...

ಬಾರೆ..ಬಾರೆ...ಬಾರೆ...
ಬಾರೆ..ಬಾರೆ...ಬಾರೆ...

5 comments:

Unknown said...

ಅದ್ಬುತಗೀತೆ ಧನ್ಯವಾದಗಳು

ವಿನಯ್ ... said...

ಧನ್ಯವಾದಗಳು ... :)

Unknown said...

ಎಂತಹ ಸೊಗಸಾದ ಹಾಡು...

ವಿನಯ್ ... said...

Thank you everyone.... :)

Unknown said...

Thank you for the lyrics 😃 God bless you 😃

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...