Thursday, October 7, 2010

ಆ ರತಿಯೇ ಧರೆಗಿಳಿದಂತೆ

ಹಾಡು: ಆ ರತಿಯೇ ಧರೆಗಿಳಿದಂತೆ / a ratiye dharegilidamte
ಚಿತ್ರ: ಧೃವ ತಾರೆ / dhruva thaare (1985)
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಉಪೇಂದ್ರಕುಮಾರ್
ಹಾಡಿದವರು : ಡಾ. ರಾಜ್ ಕುಮಾರ್, ಬೆಂಗಳೂರು ಲತಾ

ಈ ಹಾಡನ್ನು ಇಲ್ಲಿ ನೋಡಿ: www.youtube.com/watch?v=pl9hbNGZq64


[ಲತಾ] ಆ...

[ಡಾ. ರಾಜ್] ಆ ರತಿಯೇ..ಎ.. ಧರೆಗಿಳಿದಂತೆ..
ಆ ಮದನ..ಆ.. ನಗುತಿರುವಂತೆ..
ಕಲ್ಲು ಮುಳ್ಳೆಲ್ಲ.. ಬಳ್ಳಿ ಮೊಗ್ಗೆಲ್ಲ.. ಹೂಬಾಣವಾಯಿತೋ.. ಎನಿಸುತಿದೆ...

[ಡಾ. ರಾಜ್] ಆ ರತಿಯೇ..ಎ.. ಧರೆಗಿಳಿದಂತೆ..
ಆ ಮದನ..ಆ.. ನಗುತಿರುವಂತೆ..
ಕಲ್ಲು ಮುಳ್ಳೆಲ್ಲ.. ಬಳ್ಳಿ ಮೊಗ್ಗೆಲ್ಲ.. ಹೂಬಾಣವಾಯಿತೋ..ಓ.. ಎನಿಸುತಿದೆ...

[ಲತಾ] ಆ...

[ಡಾ. ರಾಜ್] ಮಾಮರ ತೂಗುತಾ.. ಚಾಮರ ಹಾಕುತಾ..
ಪರಿಮಳ ಎಲ್ಲೆಡೆ ಚೆಲ್ಲುತಿರೆ..ಎ...
ಗಗನದ ಅಂಚಲಿ ರಂಗನು ಚೆಲ್ಲುತ..
ಸಂಧ್ಯೆಯು ನಾಟ್ಯವ ಆಡುತಿರೆ..ಎ..
ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ..
ಕೋಗಿಲೆಯೂ ನಲಿಯುತಿದೆ..

[ಲತಾ] ಲಾ..ಲ..ಲ... [ಅಹ..ಹ.ಹ..ಹ..] ಲ..ಲ..ಲ..ಲಾ...

[ಡಾ. ರಾಜ್] ಆ ರತಿಯೇ..ಎ.. ಧರೆಗಿಳಿದಂತೆ..
ಆ ಮದನ..ಆ.. ನಗುತಿರುವಂತೆ..
ಕಲ್ಲು ಮುಳ್ಳೆಲ್ಲ.. ಬಳ್ಳಿ ಮೊಗ್ಗೆಲ್ಲ.. ಹೂಬಾಣವಾಯಿತೋ..ಓ.. ಎನಿಸುತಿದೆ...

[ಲತಾ] ಆ...ಅ...ಆ...ಅ..ಅ..ಆ...

[ಡಾ. ರಾಜ್] ಪ್ರೇಮದ ಭಾವಕೆ.. ಪ್ರೀತಿಯ ರಾಗಕೆ.. ಮೌನವೆ ಗೀತೆಯ ಹಾಡುತಿರೆ..ಎ..
ಸರಸದ ಸ್ನೇಹಕೆ.. ಒಲವಿನ ಕಾಣಿಕೆ.. ನೀಡಲು ಅಧರವು..ಅರಳುತಿರೆ..ಎ..
ಎಂದಿಗು ಹೀಗೆ ಬಾಳುವಾಸೆ ತುಂಬಿ ಬಂದು..ಪ್ರೇಮಿಗಳು ನಲಿಯುತಿರೆ..

[ಡಾ. ರಾಜ್] ಪ್ರೇಮಿಗಳು ನಲಿಯುತಿರೆ..

[ಡಾ. ರಾಜ್] ಆ ರತಿಯೇ..ಎ.. ಧರೆಗಿಳಿದಂತೆ..
ಆ ಮದನ..ಆ.. ನಗುತಿರುವಂತೆ..
ಕಲ್ಲು ಮುಳ್ಳೆಲ್ಲ.. ಬಳ್ಳಿ ಮೊಗ್ಗೆಲ್ಲ.. ಹೂಬಾಣವಾಯಿತೋ..ಓ.. ಎನಿಸುತಿದೆ...

ಹೂಬಾಣವಾಯಿತೋ..ಓ.. ಎನಿಸುತಿದೆ... [ಆ..] ಹೂಬಾಣವಾಯಿತೋ..ಓ.. ಎನಿಸುತಿದೆ... [ಆ..]

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...