Wednesday, October 6, 2010

ನಿನ್ನ ಕಂಡ ನನ್ನ ಕಣ್ಣು ಎಂದೆಂದೂ ಬೇರೇನು ನೋಡದು

ಹಾಡು: ನಿನ್ನ ಕಂಡ ನನ್ನ ಕಣ್ಣು ಎಂದೆಂದೂ ಬೇರೇನು ನೋಡದು / ninna kanda nanna kannu endendu
ಚಿತ್ರ: ಪ್ರೀತಿ ಮಾಡು ತಮಾಷೆ ನೋಡು (1979) / preeti maadu tamashe nodu
ಸಂಗೀತ: ರಾಜನ್ ನಾಗೇಂದ್ರ
ಸಾಹಿತ್ಯ: ಚಿ॥ ಉದಯಶಂಕರ್
ಹಾಡಿದವರು: ಎಸ್.ಪಿ.ಬಿ ಮತ್ತು ಎಸ್. ಜಾನಕಿ


ಈ ಹಾಡನ್ನ ಇಲ್ಲಿ ನೋಡಿ: www.youtube.com/watch?v=zGUdpOZh7eY


[ಎಸ್.ಪಿ.] ನಿನ್ನ ಕಂಡ ನನ್ನ ಕಣ್ಣು ಎಂದೆಂದೂ.. ಬೇರೇನು ನೋಡದು...
[ಜಾನಕಿ] ಮುತ್ತಂಥ ಮಾತಂದೆ ಆನಂದ ನೀ ತಂದೆ
[ಜಾನಕಿ] ನಿನ್ನ ಕಂಡ ನನ್ನ ಕಣ್ಣು ಎಂದೆಂದೂ.. ಬೇರೇನು ನೋಡದು...
[ಎಸ್.ಪಿ.] ಮುತ್ತಂಥ ಮಾತಂದೆ ಆನಂದ ನೀ ತಂದೆ
[ಎಸ್.ಪಿ./ಜಾನಕಿ] ಲಾಲ..ಲಾಲ..ಆಹಾಹಾ..


[ಎಸ್.ಪಿ.] ನಿನ್ನ ಒಲವಲಿ.. ಒಲವಿನ ಬಾನಲಿ...
ಹೊಸ ಕಾಂತಿಯಿಂದ ರವಿಯಂತೆ ಬೆಳಗಿ.. ಸುಖ ಹೊಂದಿದೆ..
[ಜಾನಕಿ] ನಿನ್ನ ಒಲವಲಿ.. ಒಲವಿನ ಕಡಲಲಿ...
ಅಲೆಯಂತೆ ಕುಣಿದೆ.. ಹಾಯಾಗಿ ನಲಿದೆ... ಸುಖ ಹೊಂದೆದೆ...
[ಎಸ್.ಪಿ.] ಹೊಸ ಹೂ ಅಂದ.. ನಿನ್ನ ಮೈಯಂದ.. ಚಿನ್ನ.. ನನ್ನ ಕುಣಿಸಿದೆ... [ಅಹ...ಅಹ...]
[ಎಸ್.ಪಿ.] ಹೊಸ ಹೂ ಅಂದ [ಆ...] ನಿನ್ನ ಮೈಯಂದ [ಆ..] ಚಿನ್ನ ನನ್ನ ಕುಣಿಸಿದೆ...


[ಎಸ್.ಪಿ.] ನಿನ್ನ ಕಂಡ ನನ್ನ ಕಣ್ಣು ಎಂದೆಂದೂ.. ಬೇರೇನು ನೋಡದು...
[ಜಾನಕಿ] ಮುತ್ತಂಥ ಮಾತಂದೆ..ಎ.. ಆನಂದ.. ನೀ ತಂದೆ...


[ಜಾನಕಿ] ನಿನ್ನ ಗೆಳೆತನ.. ಸೆಳೆಯಲು ನನ್ನ ಮನ..
ನೂರಾಸೆ ಕೆರಳಿ.. ಹೂವಂತೆ ಅರಳಿ.. ನಿನ್ನ ಸೇರಿತೇ...ಎ..
[ಎಸ್.ಪಿ.] ನಿನ್ನ ಗೆಳೆತನ.. ಪಡೆಯಲು ಹೊಸತನ...
ಬಾನಾಡಿಯಾಗಿ ಹಾರಾಡುವಾಸೆ.. ಇಂದು ಮೂಡಿತೇ..ಎ...
[ಜಾನಕಿ] ನಿನ್ನ ನಾ ಬೆರೆತೆ.. ನನ್ನೇ ನಾ ಮರೆತೆ... ತನು..ಮನ ತಣಿಯಿತೇ.. [ಅಹ..ಹ.ಹ..]
[ಜಾನಕಿ] ನಿನ್ನ ನಾ ಬೆರೆತೆ.. [ಆ...] ನನ್ನೇ ನಾ ಮರೆತೆ... [ಆ...] ತನು..ಮನ ತಣಿಯಿತೇ..


[ಎಸ್.ಪಿ.] ನಿನ್ನ ಕಂಡ ನನ್ನ ಕಣ್ಣು ಎಂದೆಂದೂ.. ಬೇರೇನು ನೋಡದು...
[ಜಾನಕಿ] ಮುತ್ತಂಥ ಮಾತಂದೆ ಆನಂದ ನೀ ತಂದೆ
[ಜಾನಕಿ] ನಿನ್ನ ಕಂಡ ನನ್ನ ಕಣ್ಣು ಎಂದೆಂದೂ.. ಬೇರೇನು ನೋಡದು...
[ಎಸ್.ಪಿ.] ಮುತ್ತಂಥ ಮಾತಂದೆ.. ಆನಂದ ನೀ ತಂದೆ..


[ಎಸ್.ಪಿ./ಜಾನಕಿ] ಲಾಲ ಅಹ..ಹ... ಆ... ಲಾಲಲ... ಅಹ..ಹ... ಲ..ಲ.ಲಾ...

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...