Wednesday, September 22, 2010

ನಿನ್ನ ಕಂಡು ಬೆರಗಾದೆನೇ..

ಹಾಡು: ನಿನ್ನ ಕಂಡು ಬೆರಗಾದೆನೇ.. / ninna kandu beragadene
ಚಿತ್ರ: ಪ್ರೇಮ ಪಲ್ಲವಿ (೧೯೮೧) / prema pallavi
ಹಾಡಿದವರು: ಎಸ್. ಪಿ. ಬಾಲಸುಬ್ರಮಣ್ಯಮ್
ಸಂಗೀತ: ರಾಜನ್ ನಾಗೇಂದ್ರ
ಸಾಹಿತ್ಯ: ಚಿ: ಉದಯಶಂಕರ್

ಈ ಹಾಡನ್ನು ಇಲ್ಲಿ ಕೇಳಿ: www.raaga.com/player4/?id=169194&mode=100&rand=0.654899816594268

ಅ...ಆಅ...ಆ..
ಆಆ...ಆಅ...ಆಅ...

ನಿನ್ನ ಕಂಡು ಬೆರಗಾದೆನೇ, ಏಕೋ ಕಾಣೆ ಮರುಳಾದೆನೇ...
ನಿನ್ನ ಕಂಡು ಬೆರಗಾದೆನೇ, ಏಕೋ ಕಾಣೆ ಮರುಳಾದೆನೇ...ಎ..
ಸ್ನೇಹದ ಕರೆಗೆ, ಪ್ರೀತಿಯ ನುಡಿಗೆ.. ಹೆಣ್ಣೇ ನನ್ನಾಣೆ ನಾ ಸೋತೆ..
ನಿನ್ನ ಕಂಡು ಬೆರಗಾದೆನೇ, ಏಕೋ ಕಾಣೆ ಮರುಳಾದೆ..ನೆ...


ಬಳುಕುತ ನೆಡೆದಾಗ ಸುಮಲತೆಯಂತೆ, ಕುಣಿಯಲು ನೀ ನವಿಲಂತೆ..ಎ..
ನುಡಿಯುವ ಮಾತೆಲ್ಲ ಅರಗಿಣಿಯಂತೆ, ಹಾಡಲು ಕೋಗಿಲೆಯಂತೆ...ಎ...
ಕಣ್ಣಲಿ ಮಿಂಚೇನು, ತುಟಿಯಲಿ ಸವಿಜೇನು...
ಕಣ್ಣಲಿ ಮಿಂಚೇನು,..ಉ.., ತುಟಿಯಲಿ ಸವಿಜೇನು...
ಈ ನಿನ್ನ ನೋಟ... ಶೃಂಗಾರದಾಟ...
ಈ ನಿನ್ನ ನೋಟ... ಶೃಂಗಾರದಾಟ... ಪ್ರಣಯದ ಹೊಸ ಕವಿತೆಯೇ, ನನಗೊಲಿಯುತಾ..
ಹೆಣ್ಣಾಗಿ ಓಡೋಡಿ ಬಂತೇನು ನಾ ಕಾಣೆನೇ..


ನಿನ್ನ ಕಂಡು ಬೆರಗಾದೆನೇ..ಎ..ಎ.., ಏಕೋ ಕಾಣೆ ಮರುಳಾದೆನೇ...
ಸ್ನೇಹದ ಕರೆಗೆ, ಪ್ರೀತಿಯ ನುಡಿಗೆ.. ಹೆಣ್ಣೇ ನನ್ನಾಣೆ ನಾ ಸೋತೆ..
ನಿನ್ನ ಕಂಡು ಬೆರಗಾದೆನೇ..ಎ..ಎ.., ಏಕೋ ಕಾಣೆ ಮರುಳಾದೆನೇ...ಎ..

ಬಾಳಲಿ ಜೊತೆಯಾಗಿ ಬರುವೆನು ನಾನು, ಚಿಂತೆಯ ನೀನು ಬಿಡು..ಉ...
ಕೇಳದೆ ನಿನಗೆಲ್ಲಾ ತರುವೆನು ಇನ್ನೂ, ಮನಸನೆಲ್ಲಾ ಇಲ್ಲಿ ಕೊಡು...ಉ..
ಓಡುವ ನದಿಯೆರೆಡು ಒಂದಾಗಿ ಬೆರೆವಂತೆ...
ಓಡುವ ನದಿಯೆರೆಡು..ಉ.. ಒಂದಾಗಿ ಬೆರೆವಂತೆ...
ನಾ ನಿನ್ನ ಸೇರಿ.. ಎಂದೆಂದು ಇರುವೆ...
ನಾ ನಿನ್ನ ಸೇರಿ.. ಎಂದೆಂದು ಇರುವೆ... ಹರುಷವ ಮನ ತುಂಬುವೆ, ಸುಖ ನೀಡುವೆ.., ಈ ಮಾತು ಸುಳ್ಳಲ್ಲ ನಂಬೆನ್ನ ಬಾ ಚಿನ್ನ ಬಾ..

ನಿನ್ನ ಕಂಡು ಬೆರಗಾದೆನೇ, ಏಕೋ ಕಾಣೆ ಮರುಳಾದೆನೇ...ಎ..
ಸ್ನೇಹದ ಕರೆಗೆ, ಪ್ರೀತಿಯ ನುಡಿಗೆ.. ಹೆಣ್ಣೇ ನನ್ನಾಣೆ ನಾ ಸೋತೆ..
ನಿನ್ನ ಕಂಡು ಬೆರಗಾದೆನೇ...ಎ..ಎ..., ಏಕೋ ಕಾಣೆ ಮರುಳಾದೆನೇ..ಎ...ಎ..ಎ.ಎ

3 comments:

Guruprasad . Sringeri said...

ಸೂಪರ್ ಹಾಡು ಸಾರ್..... ಎರಡು ದಿನಗಳಿಂದ ಗುನುಗುತ್ತಿದ್ದೆ.. ಇವತ್ತು ಗೂಗಲಿಸಿದಾಗ ನಿಮ್ಮ ಬ್ಲಾಗ್ ಸಿಕ್ಕಿತು.. ತುಂಬಾ ಖುಷಿ ಆಯ್ತು... ಹೀಗೇ ಮುಂದುವರೆಸಿ... ನಾನು ನಿಮ್ಮ ಬ್ಲಾಗ್ ಗೆ ಬರುತ್ತಿರುತ್ತೇನೆ... :)

ವಿನಯ್ ... said...

ಧನ್ಯವಾದಗಳು ಗುರುಪ್ರಸಾದ್ ರವರೆ, ಎಸ.ಪಿ.ಬಿ ಯವರು ಹಾಡಿದ ಅತ್ಯುತ್ತಮ ಹಾಡುಗಳಲ್ಲಿ ಒಂದು ಈ ಹಾಡು... ರಾಗ ಸಂಯೋಜನೆಯ ಬಗ್ಗೆ ಹೇಳುವುದಾದಾರೆ ದಿಗ್ಗಜರಾದ "ರಾಜನ್ - ನಾಗೇಂದ್ರ" ರ ಉತ್ತಮೋತ್ತಮ ಗಳಲ್ಲಿ ಒಂದು... :)

viswanath kolar said...

Exceptionally good

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...