Tuesday, May 11, 2010

ಅಮ್ಮ ಎಂದರೆ ಮೈಮನವೆಲ್ಲಾ ಹೂವಾಗುವುದಮ್ಮಾ

ಚಿತ್ರ : ತಾಯಿಗಿಂತ ದೇವರಿಲ್ಲ (1977) / taayiginta devarilla
ಹಾಡುಃ ಅಮ್ಮ ಎಂದರೆ ಮೈಮನವೆಲ್ಲಾ ಹೂವಾಗುವುದಮ್ಮಾ / amma endare maimanavella huvaaguvudamma
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್ - ನಾಗೇಂದ್ರ
ಹಾಡಿದವರು : ಎಸ್.ಜಾನಕಿ

ಈ ಹಾಡನ್ನ ಇಲ್ಲಿ ಕೇಳಿ:  https://www.youtube.com/watch?v=CoP9sWt-xKg

ಅಮ್ಮ ಎಂದರೆ ಮೈಮನವೆಲ್ಲಾ ಹೂವಾಗುವುದಮ್ಮಾ....ಅ...ಅ...
ಎರಡಕ್ಷರದಲಿ ಏನಿದೆ ಶಕ್ತಿ... ಹೇಳುವರಾರಮ್ಮಾ..ಅ..ಹೇಳುವರಾರಮ್ಮಾ...
ಅಮ್ಮ...ಅಮ್ಮಾ ....

ತಾಯಿಗೆ ಮಿಂಚಿದ ದೇವರೇ ಇಲ್ಲಾ..... ಆ....ಆ....ಆ
ಆ....ಆ....ಆ....
ತಾಯಿಗೆ ಮಿಂಚಿದ ದೇವರೇ ಇಲ್ಲ, ಎನ್ನುವರು ಎಲ್ಲಾ....ಆ..ಅ...
ತಾಯಿಯ ಹಾಲಿನ ಅಮೃತವನ್ನು..ಸವಿದವರೇ ಎಲ್ಲಾ...ಅ...ಅ...
ಹೊನ್ನಿನ ಬೆಲೆಯ ಬಡವರಿಗಿಂತ ಬಲ್ಲವರು ಇಲ್ಲಾ..ಅ...ಅ...
ತಾಯಿಯ ಆಸರೆ ತಬ್ಬಲಿಗಿಂತ ಬಯಸುವರಾರಿಲ್ಲಾ..ಅ...ಅ..ಬಯಸುವರಾರಿಲ್ಲಾ...


ಕoದನು ನುಡಿವ ಮೊದಲನೇ ಮಾತೇ ಅಮ್ಮಾ...ಅಮ್ಮ.....ಅ...ಅ..
ನೋವೋ...ನಲಿವೋ...ಹೊರಡುವ ದನಿಯೇ ಅಮ್ಮಾ...ಅಮ್ಮ.....ಅ...ಅ..
ಅಮ್ಮ..ಅಮ್ಮಾ...

ಎಂದೋ ಒಮ್ಮೆ ಕನಸಲಿ ಬಂದು..
ಕಂದಾ ಎನ್ನುವಳು...ಊ...ಉ...
ಕಣ್ಣಲಿ ಕಣ್ಣನು ಬೆರೆಸುವ ಮೊದಲೇ..
ಕರಗೇ ಹೋಗುವಳು...ಊ..ಉ..
ಹoಬಲಿಸಿದರೂ ಬಾರಳು ಅವಳು...
ಬಯಕೆಯ ಸಲ್ಲಿಸಲು...ಊ..ಉ..
ಕಂಬನಿ ಮಿಡಿದರೂ ಅಮ್ಮನ ಕಾಣೆನು..
ಎಂದೂ ಸನಿಹದೊಳು...ಊ..ಎಂದೂ ಸನಿಹದೊಳು...

ಅಮ್ಮಾ ಎಂದರೆ ಮೈಮನವೆಲ್ಲಾ ಹೂವಾಗುವುದಮ್ಮಾ....ಆ...ಅ...
ಎರಡಕ್ಷರದಲಿ ಏನಿದೆ ಶಕ್ತಿ... ಹೇಳುವರಾರಮ್ಮಾ..ಆ...ಹೇಳುವರಾರಮ್ಮಾ...
ಅಮ್ಮ... ಅಮ್ಮಾ...ಆ...

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...