Wednesday, April 28, 2010

ಆ ಕರ್ಣನಂತೆ ನೀ ದಾನಿಯಾದೆ

ಚಿತ್ರ : ಕರ್ಣ (1986) / karna
ಹಾಡು : ಆ ಕರ್ಣನಂತೆ ನೀ ದಾನಿಯಾದೆ.. / a karnanante ni daaniyaade
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಎಂ. ರಂಗರಾವ್
ಹಾಡಿದವರು : ಕೆ.ಜೆ.ಯೇಸುದಾಸ್

ಈ ಹಾಡನ್ನ ಇಲ್ಲಿ ನೋಡಿ: https://www.youtube.com/watch?v=coAtQEWIcQM


ಆ ಕರ್ಣನಂತೆ.. ನೀ ದಾನಿಯಾದೆ...
ಇನ್ನೊಂದು ಜೀವಕೆ ಆಧಾರವಾದೆ... -|2|-

ಆ ಕರ್ಣನಂತೆ...

ಕಸದಂತೆ ಕಂಡರು.. ಮನೆಯಲ್ಲಿ ಎಲ್ಲರೂ..
ದಿನವೆಲ್ಲ ಬಾಳಲಿ ಕಣ್ಣೇರು ತಂದರು... -|2|-
ನಿನ್ನಂತರಂಗವ.. ಅವರೇನು ಬಲ್ಲರು..
ನಿನ್ನನ್ನು ಹೆತ್ತವರು.. ಮಹಾಪುಣ್ಯವಂತರು... - ||ಆ ಕರ್ಣನಂತೆ ನೀ ದಾನಿಯಾದೆ..||

ಆ ಕರ್ಣನಂತೆ...

ಬಾಳೆಂಬ ಆಟದಿ.. ಚೆಂಡಂತೆ ಎಲ್ಲರೂ..
ತನ್ನಾಸೆಯಂತೆಯೇ ಆಡೋದು ದೇವರು.. -|2|-
ಇಂದೆಲ್ಲಾ ನಾಳೆ.. ಸಾಯೋದೇ ಎಲ್ಲರು..
ಎನಾದರೆನೀಗ ನಿನ್ನನ್ನು ಮರೆಯರು... - ||ಆ ಕರ್ಣನಂತೆ ನೀ ದಾನಿಯಾದೆ..||

ಪ್ರೀತಿಯಲಿ ಸುಖವುಂಟು.. ಸ್ನೇಹದಲಿ ಹಿತವುಂಟು...
ತ್ಯಾಗಕ್ಕೆ ಫಲವುಂಟು.. ನಿನಗೊಂದು ಬೆಲೆಯುಂಟು...

ಆ...ಆ....ಆ..ಆ..ಆ...

ಪ್ರೀತಿಯಲಿ ಸುಖವುಂಟು.. ಸ್ನೇಹದಲಿ ಹಿತವುಂಟು...
ತ್ಯಾಗಕ್ಕೆ ಫಲವುಂಟು.. ನಿನಗೊಂದು ಬೆಲೆಯುಂಟು...
ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ..
ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು...

ಆ ಕರ್ಣನಂತೆ.. ನೀ ದಾನಿಯಾದೆ...
ಇನ್ನೊಂದು ಜೀವಕೆ ಆಧಾರವಾದೆ...

ಆ ಕರ್ಣನಂತೆ...

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...