Wednesday, April 28, 2010

ನೂರೂ ಜನ್ಮಕೂ ನೂರಾರೂ ಜನ್ಮಕೂ

ಚಿತ್ರ : ಅಮೇರಿಕ ಅಮೇರಿಕ... / america america
ಹಾಡು : ನೂರೂ ಜನ್ಮಕೂ ನೂರಾರೂ ಜನ್ಮಕೂ / nooru janmaku nooraaru janmaku
ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ : ಮನೋಮೂರ್ತಿ
ಹಾಡಿದವರು : ರಾಜೇಶ್ ಕೃಷ್ಣನ್, ಸಂಗೀತ ಕಟ್ಟಿ

ಈ ಹಾಡನ್ನ ಇಲ್ಲಿ ನೋಡಿ: http://www.youtube.com/watch?v=OH9LH5oRZ-w

ನೂರೂ ಜನ್ಮಕೂ.. ನೂರಾರೂ ಜನ್ಮಕೂ..
ನೂರೂ ಜನ್ಮಕೂ.. ನೂರಾರೂ ಜನ್ಮಕೂ...
ಒಲವಾ ಧಾರೆಯೇ.. ಒಲಿದೊಲಿದೂ ಬಾರೆಲೇ...
ನನ್ನಾ ಆತ್ಮ.. ನನ್ನಾ ಪ್ರಾಣ.. ನೀನೆಂದೂ...ಊ..
ನೂರು ಜನ್ಮಕೂ...

ಬಾಳೆಂದರೇ ಪ್ರಣಯಾನುಭಾವ ಕವಿತೆ..
ಆತ್ಮಾನೂಸಂಧಾನ...
ನೆನಪೆಂದರೆ..ಮಳೆಬಿಲ್ಲ ಛಾಯೆ..ಎ..
ನನ್ನೆದೆಯ ಬಾಂದಳದೀ..ಒ..ಒಹ್..
ನನ್ನೆದೆಯ ಬಾಂದಳದೀ..ಚಿತ್ತಾರ ಬರೆದವಳೇ...
ಸುತ್ತೇಳು ಲೋಕದಲೀ ಮತ್ತೆಲ್ಲೂ ಸಿಗದವಳೆ..
ನನ್ನೊಳಗೆ ಹಾಡಾಗಿ ಹರಿದವಳೇ... (ಅ..ಆಹ...) - ||ನೂರೂ ಜನ್ಮಕೂ...||

ಬಾ ಸಂಪಿಗೆ.. ಸವಿಭಾವಲಹರೀ ಹರಿಯೇ..
ಪನ್ನೀರ ಜೀವನದೀ..ಇ..
ಬಾ ಮಲ್ಲಿಗೆ.. ಮಮಕಾರ ಮಾಯೇ..
ಲೋಕದಾ ಸುಖವೆಲ್ಲಾ..ಒ..ಒಹ್..ಹೋ..
ಲೋಕದಾ ಸುಖವೆಲ್ಲಾ ನಿನಗಾಗಿ ಮುಡಿಪಿರಲೀ..
ಇರುವಂಥ ನೂರು ಕಹಿ.. ಇರಲಿರಲಿ ನನಗಾಗಿ..
ಕಾಯುವೆನು ಕೊನೆವರೆಗೂ ಕಣ್ಣಾಗಿ...(ಅ..ಆಹ...)

ನೂರೂ ಜನ್ಮಕೂ.. ನೂರಾರೂ ಜನ್ಮಕೂ..
ನೂರೂ ಜನ್ಮಕೂ.. ನೂರಾರೂ ಜನ್ಮಕೂ...
ಒಲವಾ ಧಾರೆಯೇ.. ಒಲಿದೊಲಿದೂ ಬಾರೆಲೇ...
ನನ್ನಾ ಆತ್ಮ.. ನನ್ನಾ ಪ್ರಾಣ.. ನೀನೆಂದೂ...ಊ..
ಉ..ಹು..ಉ..ಹು....ಹೂ.....

5 comments:

Venkatesh said...

Good Job

Venkatesh l said...

Good Job

Venkatesh l said...

Good job
I have some lyrics too. Could you post it.

ವಿನಯ್ ... said...

Sure Venkatesh, please send to my email id mentioned on top Right hand side of screen.

ವಿನಯ್ ... said...

right now I am concentrating on old songs...

ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ

ಹಾಡು: ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ/nagalarade alalarade tolaladide jeeva ಚಿತ್ರ: ಶ್ರುತಿ ಸೇರಿದಾಗ [1987]/shruthi seridaaga ಸಾಹಿತ್ಯ: ಚಿ || ...