Monday, April 26, 2010

ಆ ಮೋಡ ಬಾನಲ್ಲಿ ತೇಲಾಡುತಾ

ಚಿತ್ರ: ಧ್ರುವ ತಾರೆ/dhruva taare
ಹಾಡುಃ ಆ ಮೋಡ ಬಾನಲ್ಲಿ ತೇಲಾಡುತಾ/aa moda banalli telaaduta
ಹಾಡಿರುವರು: ಡಾ ರಾಜ್ ಕುಮಾರ್, ವಾಣಿ ಜಯರಾಮ್, ಬೆಂಗಳೂರು ಲತಾ
ಸಾಹಿತ್ಯ: ಚಿ ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್

ಈ ಹಾಡನ್ನ ಇಲ್ಲಿ ನೋಡಿ:www.youtube.com/watch?v=8IItmrx2SKU

ಓಹ್...ಹೋ...ಒ...ಹೋ...ಹೋ....
ಅಹ...ಹ...ಹ....ಲ..ಲ..ಲಾ.....

ಆ ಮೋಡ ಬಾನಲ್ಲಿ ತೇಲಾಡುತಾ...
ನಿನಗಾಗಿ ನಾ ಬಂದೆ ನೋಡೆನ್ನುತಾ...
ನಲ್ಲ ನಿನ್ನ ಸಂದೇಶವಾ...
ನನಗೆ ಹೇಳಿದೆ....

ಆ ಮೋಡ ಬಾನಲ್ಲಿ...

ನನ್ನ ನೋಡುವ ಚಿಂತೆ...
ನಿನ್ನ ಕಾಡಿದೆಯಂತೆ...
ನನ್ನ ಪ್ರೀತಿಗೆ ಸೋತೆ...
ಎಂದೂ ಹೇಳಿದೆಯಂತೆ...
ನೀನೇ ನನ್ನ ಪ್ರಾಣವೆಂದೂ, ನೀನು ಅಂದ ಮಾತನಿಂದು ...
ನಲ್ಲ ಹೇಳಿದೆ....

ಆ ಮೋಡ ಬಾನಲ್ಲಿ...

ನೂರು ಜನ್ಮವೂ ಕಂಡ...
ನಮ್ಮ ಈ ಅನುಬಂಧ...
ಸ್ನೇಹ ಪ್ರೀತಿಯೂ ತಂದಾ...
ಇಂತಹ ಮಹದಾನಂದ...
ಎಂತ ಚಂದ, ಎಂತಹ ಚಂದ...
ಎಂದ ನಿನ್ನ ಮಾತಾ ಚಿನ್ನಾ... ಇಂದು ಹೇಳಿದೆ....

ಆ ಮೋಡ ಬಾನಲ್ಲಿ...

ನಿನ್ನ ಸ್ನೇಹವೇ ಚೆನ್ನ, ನಿನ್ನ ಪ್ರೇಮವೇ ಚೆನ್ನ...
ನಿನ್ನ ನೆನಪಲ್ಲಿ ಚಿನ್ನ, ನೊಂದು ಬೆಂದರೂ ಚೆನ್ನ...
ಕಲಹ ಚೆನ್ನ, ವಿರಸ ಚೆನ್ನ,
ಸನಿಹ ನನ್ನ ಎಂದೂ ನಿನ್ನಾ.... ಮಾತನ್ನು ಹೇಳಿದೆ...

ಆ ಮೋಡ ಬಾನಲ್ಲಿ...

No comments:

ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ

ಹಾಡು: ನಗಲಾರದೆ ಅಳಲಾರದೆ ತೊಳಲಾಡಿದೆ ಜೀವಾ/nagalarade alalarade tolaladide jeeva ಚಿತ್ರ: ಶ್ರುತಿ ಸೇರಿದಾಗ [1987]/shruthi seridaaga ಸಾಹಿತ್ಯ: ಚಿ || ...