Monday, April 26, 2010

ತನು ನಿನ್ನದು ಈ ಮನ ನಿನ್ನದು

ಚಿತ್ರ: ಇಬ್ಬನಿ ಕರಗಿತು (೧೯೮೩)/ibbani karagitu
ಹಾಡುಃ ತನು ನಿನ್ನದು ಈ ಮನ ನಿನ್ನದು/tanu ninnadu i mana ninnadu
ಹಾಡಿದವರು: ಎಸ್. ಜಾನಕಿ.
ಸಾಹಿತ್ಯ: ಚಿ ಉದಯಶಂಕರ್
ಸಂಗೀತ: ರಾಜನ್ - ನಾಗೇಂದ್ರ

ಈ ಹಾಡನ್ನು ಇಲ್ಲಿ ಕೇಳಿ:  https://www.youtube.com/watch?v=OntyZP1qaAs


ತನು ನಿನ್ನದು ಈ ಮನ ನಿನ್ನದು...
ತನು ನಿನ್ನದು ಈ ಮನ ನಿನ್ನದು...
ನನಗಾಗಿ ಇನ್ನೇನಿದೆ... ಏ...
ಈ ಜೀವ ಎಂದೆಂದೂ ನಿನದಾಗಿದೆ...

ತನು ನಿನ್ನದು ಈ ಮನ ನಿನ್ನದು...
ಹೃದಯವೀಣೆಯ ವೈಣಿಕ ತಾನೇ ತಂತಿಯ ಮೀಟುವುದು... ಸ್ವರಗಳ ನುಡಿಸುವುದು...
ಹೃದಯವೀಣೆಯ ವೈಣಿಕ ತಾನೇ ತಂತಿಯ ಮೀಟುವುದು... ಸ್ವರಗಳ ನುಡಿಸುವುದು...
ಬಯಸಿದ ರಾಗ..., ನುಡಿಸುವ ವೇಗ...
ಬಯಸಿದ ರಾಗ..., ನುಡಿಸುವ ವೇಗ... ನಿನ್ನಲೇ ಸೇರಿದೆ...
ನಿನಗಾಗಿ ಬಾಳೆಲ್ಲ ನಾ ಹಾಡುವೆ...

ತನು ನಿನ್ನದು ಈ ಮನ ನಿನ್ನದು...

ಒಲಿದರೂ ನೀನೆ, ಮುನಿದರೂ ನೀನೇ... ಕಾಣೆನು ಬೇರೇನೂ... ಚಿಂತೆಯೂ ಇನ್ನೇನೂ...
ಒಲಿದರೂ ನೀನೆ, ಮುನಿದರೂ ನೀನೇ... ಕಾಣೆನು ಬೇರೇನೂ... ಚಿಂತೆಯೂ ಇನ್ನೇನೂ...
ಅಮೃತವ ನೀಡು..., ವಿಷವನೇ ನೀಡು...
ಅಮೃತವ ನೀಡು..., ವಿಷವನೇ ನೀಡು... ಎನೂ ಮಾತಾಡೇನೂ....ಊ...
ನಿನ್ನಿಂದ ದೂರಾಗಿ ನಾ ಬಾಳೆನು...

ತನು ನಿನ್ನದು ಈ ಮನ ನಿನ್ನದು...

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...