Tuesday, April 27, 2010

ಚಿನ್ನದ ಬೊಂಬೆಯಲ್ಲಾ ದಂತದ ಬೊಂಬೆಯಲ್ಲಾ...ಬುದ್ಧಿ ಇರುವ ಬೊಂಬೆಯೂ

ಚಿತ್ರ: ಸಮಯದ ಗೊಂಬೆ (೧೯೮೪)/ samayada gombe
ಹಾಡು: ಚಿನ್ನದ ಗೊಂಬೆಯಲ್ಲ / chinnada gombeyalla dantada gombeyalla
ಹಾಡಿದವರು: ಡಾ. ರಾಜ್ ಕುಮಾರ್
ಸಂಗೀತ: ಎಮ್ ರಂಗರಾವ್

ಈ ಹಾಡನ್ನು ಇಲ್ಲಿ ಕೇಳಿ:  https://www.youtube.com/watch?v=T05vVMWk-ng



ಹೇ..ಲಲಲಲಾ...ಹ..ಲಲಲಲಾ..ಹಾ..ಹ..ಹಾ...ಹೇ..ಲಲಲಲಾ...


ಹೇ...ಚಿನ್ನದ ಬೊಂಬೆಯಲ್ಲಾ, ದಂತದ ಬೊಂಬೆಯಲ್ಲಾ...ಬುದ್ಧಿ ಇರುವ ಬೊಂಬೆಯೂ...
ಕಾಲವು ಕುಣಿಸಿದಂತೆ.., ಅ ವಿಧಿ ಏಣಿಸಿದಂತೆ.., ಅಡುವ ಸಮಯದಗೊಂಬೆ ಮಾನವ..ಅಡುವ ಸಮಯದ ಗೊಂಬೆ ||ಚಿನ್ನದ ಗೊಂಬೆಯಲ್ಲಾ||


ಹೇ..ಸಿಡಿಯುವ ರೋಷದಲ್ಲಿ.. ಬಡಿಯುವ ಸೇಡಿನಲ್ಲಿ.. ದಿನವು ಹೋರಾಟವೇ...
ಹಾ..ನಲಿಯುವ ಪ್ರೀತಿಯಲಿ.., ನಗಿಸುವ ಮಾತಿನಲ್ಲಿ.., ಮನುಜ ಜೊತೆಯಾಗಿ, ಒಂದಾಗಿ ಬಾಳುವ..
ಅವನು ಸಂತೋಷ ಎಲ್ಲೆಂದೆ ಹುಡುಕುವ...
ಬಿಸಿಲಲಿ.., ಮಳೆಯಲಿ.., ಚಳಿಯಲಿ ಬೆದರದೆ...
ವಿನೋದವೊ ವಿಷಾದವೊ ಹೊಂದಿಕೊಳ್ಳುವ...

ಚಿನ್ನದ ಬೊಂಬೆಯಲ್ಲಾ, ದಂತದ ಬೊಂಬೆಯಲ್ಲಾ...ಬುದ್ಧಿ ಇರುವ ಬೊಂಬೆಯೂ...
ಕಾಲವು ಕುಣಿಸಿದಂತೆ.., ಅ ವಿಧಿ ಏಣಿಸಿದಂತೆ.., ಅಡುವ ಸಮಯದಗೊಂಬೆ ಮಾನವ..ಅಡುವ ಸಮಯದ ಗೊಂಬೆ

ಹೇ...ಜನಿಸಿದ ಊರೊಂದು, ಬೆಳೆಯುವ ಊರೊಂದು.. ಬದುಕು ಉಯ್ಯಲೆಯೂ..
ಹಾ... ನೆಡೆಯುವ ನಾಡೊಂದು, ಬೆರೆಯುವ ಮಣ್ಣೊಂದು...ಮನುಜ ಇರುವಲ್ಲೇ ಹಾಯಾಗಿ ಬಾಳುವ..
ಸುಖದ ಕನಸಲ್ಲೇ ದಿನವೆಲ್ಲಾ ತೇಲುವ..
ನೆನಪಿನ ಸುಳಿಯಲಿ, ಮರೆವಿನ ಮರೆಯಲ್ಲಿ...
ವಿನೋದವೊ ವಿಷಾದವೊ ಹೊಂದಿಕೊಳ್ಳುವ...

ಚಿನ್ನದ ಬೊಂಬೆಯಲ್ಲಾ, ದಂತದ ಬೊಂಬೆಯಲ್ಲಾ...ಬುದ್ಧಿ ಇರುವ ಬೊಂಬೆಯೂ...
ಕಾಲವು ಕುಣಿಸಿದಂತೆ.., ಅ ವಿಧಿ ಏಣಿಸಿದಂತೆ.., ಅಡುವ ಸಮಯದಗೊಂಬೆ ಮಾನವ..ಅಡುವ ಸಮಯದ ಗೊಂಬೆ

ಆ... ಹಹಹಾ... ಹೆ..ಹೆಹೆಹೆ.. ಲ..ಲಲಲಾ... ಅ..ಹಾ..ಹಾ... ಹೆ..ಹೆ..ಹೆ...

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...