Wednesday, April 28, 2010

ಕಲ್ಲಿನ ವೀಣೆಯ ಮೀಟಿದರೇನು

ಚಿತ್ರ: ಗುರಿ (1986) / guri
ಹಾಡು: ಕಲ್ಲಿನ ವೀಣೆಯ ಮೀಟಿದರೇನು / kallina veeneya mitidarenu
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ಡಾ| ರಾಜ್ ಕುಮಾರ್

ಈ ಹಾಡನ್ನ ಇಲ್ಲಿ ನೋಡಿ:   https://www.youtube.com/watch?v=lRnRDXstZM0

ಕಲ್ಲಿನ ವೀಣೆಯ ಮೀಟಿದರೇನು..
ನಾದವು ಹೊಮ್ಮುವುದೇ...
ಮಲ್ಲಿಗೆ ಹೂಗಳು ಬಾಡಿದ ಮೇಲೆ..
ಪರಿಮಳ ಚೆಲ್ಲುವುದೇ..ನೀ ಹೇಳು.. ಪರಿಮಳ ಚೆಲ್ಲುವುದೇ... ||ಕಲ್ಲಿನ ವೀಣೆಯ ಮೀಟಿದರೇನು..||


ಎಲೆ ಎಲೆಯಲ್ಲಾ ಹೂವುಗಳಾಗಿ..
ಹೂವುಗಳೆಲ್ಲಾ ಬಾಣಗಳಾಗಿ...
ನನ್ನೆದೆಯಾ.. ಸೋಕಲಿ..

ಆ ಮನ್ಮಥನೇ ನನ್ನೆದುರಾಗಿ..
ಮೋಹನರಾಗದೀ ನನ್ನನು ಕೂಗಿ...
ಛಲದಲಿ ಹೋರಾಡಲಿ...
ಎಂದಿಗೂ ಅವನು ಗೆಲ್ಲುವುದಿಲ್ಲಾ..
ಸೋಲದೆ ಗತಿಯಿಲ್ಲಾ... ||ಕಲ್ಲಿನ ವೀಣೆಯ ಮೀಟಿದರೇನು..||

ಕಾಣುವ ಅಂಧಕೇ ನಾ ಕುರುಡಾಗಿ..
ಪ್ರೇಮದ ಹಾಡಿಗೆ ನಾ ಕಿವುಡಾಗಿ..
ನೆಮ್ಮದಿ ದೂರಾಗಿದೆ...

ರೋಷದ ಬೆಂಕಿ ಒಡಲನು ನುಂಗಿ..
ಶಾಂತಿಯು ನನ್ನ ಎದೆಯಲಿ ಇಂಗಿ..
ಆಸೆಯೂ ಮಣ್ಣಾಗಿದೆ...
ಗಾಳಿಯ ಹಿಡಿವ ಹಂಬಲವೇಕೆ..
ಚಪಲವು ನಿನಗೇಕೇ..

ಕಲ್ಲಿನ ವೀಣೆಯ ಮೀಟಿದರೇನು..
ನಾದವು ಹೊಮ್ಮುವುದೇ...
ಮಲ್ಲಿಗೆ ಹೂಗಳು ಬಾಡಿದ ಮೇಲೆ..
ಪರಿಮಳ ಚೆಲ್ಲುವುದೇ..ನೀ ಹೇಳು..ಉ.. ಪರಿಮಳ ಚೆಲ್ಲುವುದೇ..ಎ...

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...