Wednesday, December 28, 2011

ಮುತ್ತಿನಂತ ಹುಡುಗನಿಗೆ ಚಿನ್ನದಂತ ಹುಡುಗಿ ಬೇಕು

ಹಾಡು: ಮುತ್ತಿನಂತ ಹುಡುಗನಿಗೆ ಚಿನ್ನದಂತ ಹುಡುಗಿ ಬೇಕು / muttinanta huduganige chinnadanta hudugi beku
ಚಿತ್ರ: ತವರು ಮನೆ (1986) / tavaru mane
ಸಾಹಿತ್ಯ: ***
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಎಸ್.ಪಿ.ಬಾಲಸುಬ್ರಮಣ್ಯಂ, ಎಸ್. ಜಾನಕಿ, ರಾಜ್ ಕುಮಾರ್ ಭಾರತಿ


ಈ ಹಾಡನ್ನು ಇಲ್ಲಿ ನೋಡಬಹುದು: www.youtube.com/watch?v=4oHiXe05FB4 (ಆಡಿಯೋ ಗುಣಮಟ್ಟ ಸಲ್ಪ ಸರಿಯಿಲ್ಲ..)


ಜಾನಕಿ: ಮುತ್ತಿನಂತ ಹುಡುಗನಿಗೆ ಚಿನ್ನದಂತ ಹುಡುಗಿ ಬೇಕು..
ನಮ್ಮ ಬೀಗರಾಗಲು.. ಒಪ್ಪಿಗೆಯೇ.. ಒಪ್ಪಿಗೆಯೇ..

ರಾಜ್ ಭಾ: ಸಕ್ಕರೆ ಸವಿಯು, ಬೆಲ್ಲದ ಸವಿಯು.. ಸೇರಿದ ಹಾಗೆ ಈ ಸಂಬಂಧ..
ಎಸ್.ಪಿ.ಬಿ: ಎಂದೂ ಯಾರು ಬಿಡಿಸಲಾಗದ ಬ್ರಹ್ಮಗಂಟು ಈ ಅನುಬಂಧ.. ಅ..

ಚಿನ್ನದಂತ ಹುಡುಗಿಗೆ ಮುತ್ತಿನಂತ ಹುಡುಗ ಬೇಕು..
ನಮ್ಮ ಬೀಗರಾಗಲು.. ಒಪ್ಪಿಗೆಯೇ.. ಒಪ್ಪಿಗೆಯೇ..

ರಾಜ್ ಭಾ: ಹುಡುಗಿಯೇನೋ ಒಪ್ಪಿಗೆ.. ಬಣ್ಣ ಬೆಳ್ಳಿಯ ವಲ್ಲಿಗೆ..
ಹುಡುಗಿಯೇನೋ ಒಪ್ಪಿಗೆ.. ಬಣ್ಣ ಬೆಳ್ಳಿಯ ವಲ್ಲಿಗೆ..
ಬಂಗಾರ ಎಷ್ಟು ಕೊಡುವಳು ಹೇಳಿ ಅತ್ತೆ ಮನೆಗೆ..

ಎಸ್.ಪಿ.ಬಿ: ಬೀಗದ ಕೈಯೇ ಕೊಟ್ಟಿದೆ.. ಎಲ್ಲ ನಿನ್ನ ಕೈಲಿದೆ..
ಆ.. ಬೀಗದ ಕೈಯೇ ಕೊಟ್ಟಿದೆ.. ಎಲ್ಲ ನಿನ್ನ ಕೈಲಿದೆ..
ಇನ್ನೇನೋ ಈ ಆಸೆಯು ಕಾಣೆ ನನ್ನ ತಂಗಿಗೆ..

ಚಿನ್ನದಂತ ಹುಡುಗಿಗೆ ಮುತ್ತಿನಂತ ಹುಡುಗ ಬೇಕು..
ನಮ್ಮ ಬೀಗರಾಗಲು.. ಒಪ್ಪಿಗೆಯೇ.. ಒಪ್ಪಿಗೆಯೇ..

ಎಸ್.ಪಿ.ಬಿ: ಅತ್ತೆ ಮಾವನ ಸೇವೆಯೇ, ತನ್ನ ಪತಿ ಅರೈಕೆಯೇ..
ಅತ್ತೆ ಮಾವನ ಸೇವೆಯೇ, ತನ್ನ ಪತಿ ಅರೈಕೆಯೇ..
ಎಂದೆಂದೂ ಪ್ರಾಣದಂತೆ ಗೊತ್ತಾ ನಮ್ಮ ಹೆಣ್ಣಿಗೆ..

ಜಾನಕಿ: ಕೃಷ್ಣನ ಮಾತೇ ಗೀತ.. ಅಣ್ಣನ ನುಡಿಯೇ ವೇದ..ಅ..
ಕೃಷ್ಣನ ಮಾತೇ ಗೀತ.. ಅಣ್ಣನ ನುಡಿಯೇ ವೇದ..ಅ..
ನನ್ನಾಣೆ ಲಕ್ಷ್ಮಿಯಂತೆ ಇವಳೇ ನನ್ನ ಮನೆಗೆ..

ರಾಜ್ ಭಾ: ಸತಿಯ ಆಣತಿ ಮೀರುವಂತ ಧೈರ್ಯ ನನ್ನಲಿ ಇಲ್ಲ ಭಾವ..
ನಂಬು ನನ್ನ.. ನಾಳೆಯಿಂದ.. ನಾನು ನಿನ್ನ ಮಗಳ ಮಾವ..

ಜಾನಕಿ: ಮುತ್ತಿನಂತ ಹುಡುಗನಿಗೆ ಚಿನ್ನದಂತ ಹುಡುಗಿ ಬೇಕು..
ನಮ್ಮ ಬೀಗ..ರಾಗಲು.. ಒಪ್ಪಿಗೆಯೇ.. ಒಪ್ಪಿಗೆಯೇ..
ಒಪ್ಪಿಗೆಯೇ.. ಒಪ್ಪಿಗೆಯೇ..
ಒಪ್ಪಿಗೆಯೇ.. ಒಪ್ಪಿಗೆಯೇ..

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...