ಹಾಡು: ನಾನು ನಿನಗಾಗಿ ನಲ್ಲ../naanu ninagagi nalla
ಚಿತ್ರ: ಪವಿತ್ರ ಪ್ರೇಮ (1984)/ pavithra prema
ಸಾಹಿತ್ಯ: ಚಿ | ಉದಯಶಂಕರ್
ಸಂಗೀತ: ವಿಜಯ ಭಾಸ್ಕರ್
ಹಾಡಿದವರು: ಎಸ್. ಜಾನಕಿ
ಈ ಹಾಡನ್ನು ಇಲ್ಲಿ ಕೇಳಬಹುದು: www.raaga.com/player4/?id=169119&mode=100&rand=0.7050181105810078
ನಾನು ನಿನಗಾಗಿ ನಲ್ಲ.. ಆ..
ನೀನು ನನಗಾಗಿ ನಲ್ಲ.. ಆ..
ನಾನು ನಿನಗಾಗಿ ನಲ್ಲ.. ಆ..
ನೀನು ನನಗಾಗಿ ನಲ್ಲ.. ಆ..
ನೀ ತಂದ ಸಂತೋಷ.. ನಾ ತಂದ ಉಲ್ಲಾಸ...
ಎಲ್ಲಾ ನಮಗಾಗಿ...ಇ..
ನಾನು ನಿನಗಾಗಿ ನಲ್ಲ.. ಆ..
ನೀನು ನನಗಾಗಿ ನಲ್ಲ.. ಆ..
ಈ ಗಾಳಿಯ ತಂಪು.. ಈ ಹೂವಿನ ಕಂಪು..
ಸಂಗೀತದ ಇಂಪು ನಮಗಾಗಿ..
ಈ ಗಾಳಿಯ ತಂಪು.. ಈ ಹೂವಿನ ಕಂಪು..
ಸಂಗೀತದ ಇಂಪು ನಮಗಾಗಿ..
ಆ ಬಾನು.. ಆ ಮೋಡ..
ಆ ಸೂರ್ಯ.. ಆ ಚಂದ್ರ..
ಮಳೆಬಿಲ್ಲು ಕಾಣೋದು ನಮಗಾಗಿ...
ನಾನು ನಿನಗಾಗಿ ನಲ್ಲ.. ಆ..
ನೀನು ನನಗಾಗಿ ನಲ್ಲ.. ಆ..ಆ..
ಗಿಳಿ ಮಾತನಾಡೋದು.. ಮರಿದುಂಬಿ ಹಾಡೋದು..
ಗಿರಿನವಿಲು ಕುಣಿಯೋದು ನಮಗಾಗಿ..
ಗಿಳಿ ಮಾತನಾಡೋದು.. ಮರಿದುಂಬಿ ಹಾಡೋದು..
ಗಿರಿನವಿಲು ಕುಣಿಯೋದು ನಮಗಾಗಿ..
ಅನುರಾಗದಾನಂದ.. ಹೊಸಬಾಳ ಮಕರಂದ..
ಸವಿಯೋಣ ನಾವಿನ್ನು ಮುಂದಾಗಿ..
ನಾನು ನಿನಗಾಗಿ ನಲ್ಲ.. ಆ..
ನೀನು ನನಗಾಗಿ ನಲ್ಲ.. ಆ..ಆ..
ರವಿ ಜಾರಿಹೋದಾಗ.. ದಿನರಾತ್ರಿ ಬಂದಾಗ..
ತಾರೆಗಳು ಮಿನುಗೋದು ನಮಗಾಗಿ..
ರವಿ ಜಾರಿಹೋದಾಗ.. ದಿನರಾತ್ರಿ ಬಂದಾಗ..
ತಾರೆಗಳು ಮಿನುಗೋದು ನಮಗಾಗಿ..
ಆಕಾಶ ಕೆಂಪಾಗಿ.. ಮುಗಿಲೆಲ್ಲಾ ರಂಗಾಗಿ..
ಉಷೆ ಬಂದು ನಲಿಯೋದು ನಮಗಾಗಿ..ಇ..
ನಾನು ನಿನಗಾಗಿ ನಲ್ಲ.. ಆ..
ನೀನು ನನಗಾಗಿ ನಲ್ಲ.. ಆ..
ನೀ ತಂದ ಸಂತೋಷ.. ನಾ ತಂದ ಉಲ್ಲಾಸ...
ಎಲ್ಲಾ..ಅ.. ನಮಗಾಗಿ...ಇ..
ನಾನು ನಿನಗಾಗಿ ನಲ್ಲ.. ಆ..
ನೀನು ನನಗಾಗಿ ನಲ್ಲ.. ಆ..ಅ..ಅ...
Subscribe to:
Post Comments (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಕಮಲದ ಮೊಗದೊಳೆ ಕಮಲದ ಕಣ್ಣೋಳೆ / kamalada mogadole kamalada kannole ಚಿತ್ರ: ಹೊಸ ಇತಿಹಾಸ (1984) / hosa itihaasa ಸಾಹಿತ್ಯ: ಚಿ | ಉದಯಶಂಕರ್ ಸಂಗ...
-
ಹಾಡು: ದೇವರ ಆಟ ಬಲ್ಲವರಾರು / devara aata ballavaraaru ಚಿತ್ರ: ಅವಳ ಹೆಜ್ಜೆ (1981)/ avala hejje ಸಾಹಿತ್ಯ: ಚಿ॥ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡ...
No comments:
Post a Comment