ಹಾಡುಃ ಮನಸು ಹೇಳ ಬಯಸಿದೆ ನೂರೊಂದು/manasu hela bayaside noorondu
ಚಿತ್ರ: ಬೀಗರ ಪಂದ್ಯ(1985)/bigara pandya
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ರಮೇಶ್ ನಾಯ್ಡು
ಹಾಡಿದವರು: ಪಿ.ಸುಶೀಲ
ಈ ಹಾಡನ್ನು ಇಲ್ಲಿ ನೋಡಿ: www.youtube.com/watch?v=O4p8e6cgYTo
ಆ.... ಅ...ಆಆ....
ಊ...ಉ...ಉಉ....
ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...
ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...
ನೆನಪು ನೂರು ಎದೆಯಲಿ... ಅಗಲಿಕೆಯ ನೋವಲಿ...
ವಿದಾಯ ಗೆಳೆಯನೇ... ವಿದಾಯ ಗೆಳತಿಯೇ...
ವಿದಾಯ ಹೇಳ ಬಂದಿರುವೇ ನಾನಿಂದು...
ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...
ಹಗಲು ರಾತ್ರಿ ಹಕ್ಕಿ ಹಾಗೆ ಹಾರಿ ಮೆರೆದೆವು...
ನಗುವೆನ್ನುವ ಅಲೆಯ ಮೇಲೆ ತೇಲಿ ನಲಿದೆವು...
ಹಗಲು ರಾತ್ರಿ ಹಕ್ಕಿ ಹಾಗೆ ಹಾರಿ ಮೆರೆದೆವೂ...ಊ...
ನಗುವೆನ್ನುವ ಅಲೆಯ ಮೇಲೆ ತೇಲಿ ನಲಿದೆವು...
ಹೃದಯಗಳಾ...ಆ.. ಬೆಸುಗೆಯಾಗಿ..
ಸ್ನೇಹ ಬಂಧ..ಆ.. ಅಮರವಾಗಿ..
ನಾಳೆ ಎನುವ ಚಿಂತೆ ಮರೆತು ಹಾಡಿ ಕುಣಿದೆವು..
ಆ ಕಾಲ ಕಳೆದಿದೆ... ದೂರಾಗೋ ಸಮಯದೇ...
ವಿದಾಯ ಹೇಳ ಬಂದಿರುವೇ ನಾ ನೊಂದು...
ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...
ನೀನು ಬೇರೆ, ನಾನು ಬೇರೆ, ಹೇಗೋ ಬೆರೆತೆವು...
ನಮ್ಮ ನಮ್ಮ ಒಪ್ಪು ತಪ್ಪು ಎಲ್ಲಾ ಅರಿತೆವು...
ನೀನು ಬೇರೆ, ನಾನು ಬೇರೆ, ಹೇಗೋ ಬೆರೆತೆವು...ಊ..
ನಮ್ಮ ನಮ್ಮ ಒಪ್ಪು ತಪ್ಪು ಎಲ್ಲಾ ಅರಿತೆವು..
ಈ ದಿನವಾ...ಆ.. ಮರೆಯಬೇಡ..
ನಮ್ಮ ಸ್ನೇಹ..ಆ.. ತೊರೆಯಬೇಡ..
ದಾರಿ ಬೇರೆ ಆದರೇನು ಪ್ರೀತಿ ಉಳಿಯಲಿ..
ನೀನೆಲ್ಲೇ ಇದ್ದರೂ... ನೀ ಹೇಗೆ ಇದ್ದರೂ..
ನೀ ನಾಳೆ ಕೇಳಬೇಡ ನನ್ನ ಯಾರೆಂದು...
ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...
ನೆನಪು ನೂರು ಎದೆಯಲಿ, ಅಗಲಿಕೆಯ ನೋವಲಿ...
ವಿದಾಯ ಗೆಳೆಯನೇ, ವಿದಾಯ ಗೆಳತಿಯೇ...
ವಿದಾಯ ಹೇಳ ಬಂದಿರುವೇ ನಾನಿಂದು...
ಮನಸು ಹೇಳ ಬಯಸಿದೆ ನೂರೊಂದು...ಊ..
ಹು..ಹು.. ತುಟಿಯ ಮೇಲೆ ಬಾರದಿದೆ.. ಮಾತೊಂದು...
Subscribe to:
Post Comments (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಕಮಲದ ಮೊಗದೊಳೆ ಕಮಲದ ಕಣ್ಣೋಳೆ / kamalada mogadole kamalada kannole ಚಿತ್ರ: ಹೊಸ ಇತಿಹಾಸ (1984) / hosa itihaasa ಸಾಹಿತ್ಯ: ಚಿ | ಉದಯಶಂಕರ್ ಸಂಗ...
-
ಹಾಡು: ದೇವರ ಆಟ ಬಲ್ಲವರಾರು / devara aata ballavaraaru ಚಿತ್ರ: ಅವಳ ಹೆಜ್ಜೆ (1981)/ avala hejje ಸಾಹಿತ್ಯ: ಚಿ॥ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡ...
No comments:
Post a Comment