Monday, October 25, 2010

ಹರಿಹರಿಯನ್ನುತ ನೀ ಹಾಡು

ಹಾಡುಃ ಹರಿಹರಿಯನ್ನುತ ನೀ ಹಾಡು/hari hariyannuta ni haadu
ಚಿತ್ರ: ಭಕ್ತ ಪ್ರಹ್ಲಾದ(1983)/bhakta prahlada
ಸಾಹಿತ್ಯ: ಚಿ॥ಉದಯಶಂಕರ್
ಸಂಗೀತ: ಟಿ.ಜಿ.ಲಿಂಗಪ್ಪ
ಹಾಡಿದವರು: ಎಸ್.ಪಿ.ಬಾಲಸುಬ್ರಮಣ್ಯಮ್

ಈ ಹಾಡನ್ನು ಇಲ್ಲಿ ನೋಡಿ: www.youtube.com/watch?v=1ygYIVzQ9Ts


ಶ್ರೀಹರಿ...ಈ...ಈ...ಶ್ರೀಹರಿ....ಈಈಈ...ಈ..

ಹರಿಯುವ ನದಿಯು ಹರುಷದಲಿ ತನ್ನ ಶೃತಿಯನು ಸೇರಿಸಿ ಹಾಡುತಿರೆ...
ಬೀಸುವ ಗಾಳಿಯು ಜೊತೆಯಾಗಿ ದನಿಯನು ಕೂಡಿಸಿ ಹಾಡುತಿರೆ...
ಪ್ರಕೃತಿಯೆ ನಿನ್ನೊಡನೊ೦ದಾಗಿ ಆ ಶ್ರೀಪತಿ ಧ್ಯಾನವ ಮಾಡುತಿರೆ..
ಪ್ರಕೃತಿಯೆ ನಿನ್ನೊಡನೊ೦ದಾಗಿ ಆ ಶ್ರೀಪತಿ ಧ್ಯಾನವ ಮಾಡುತಿರೆ..

ಹರಿ ಹರಿ ಎನ್ನುತ ನೀ ಹಾಡು.. ಹರಿನಾಮದ ಮಹಿಮೆಯ ನೀನೋಡು..
ಹರಿ ಹರಿ ಎನ್ನುತ ನೀ ಹಾಡು.. ಹರಿನಾಮದ ಮಹಿಮೆಯ ನೀನೋಡು
ಬಣ್ಣಿಸಲಾಗದ ಆನ೦ದ.. ನೀ ಕಾಣುವೆ ಆಗ ಓ ಕ೦ದ
ಬಣ್ಣಿಸಲಾಗದ ಆನ೦ದ.. ನೀ ಕಾಣುವೆ ಆಗ ಓ ಕ೦ದ
ಹರಿ ಹರಿ ಎನ್ನುತ ನೀ ಹಾಡು.. ಹರಿನಾಮದ ಮಹಿಮೆಯ ನೀನೋಡು..

ಪ್ರೇಮದಿ ಕರೆದರೆ ಬಾ ಎ೦ದು ಎಲ್ಲಿದ್ದರೂ ಅವನು ಆಲಿಸುವ..
ಅಮ್ಮನ ಕೂಗಿಗೆ ಓಗೊಡುವ ಹಸುಕ೦ದನ ಹಾಗೆ ಬಳಿಬರುವ...
ನಿಜ ಭಕ್ತಿಗೆ ಅವನು ಸೋಲುವನು.. ತನ್ನ ಭಕ್ತರನೇ ಕಾಪಾಡುವನು..
ಭಕ್ತಿಗೆ ಅವನು ಸೋಲುವನು.. ತನ್ನ ಭಕ್ತರನೇ ಕಾಪಾಡುವನು..

ಹರಿ ಹರಿ ಎನ್ನುತ ನೀ ಹಾಡು ಹರಿನಾಮದ ಮಹಿಮೆಯ ನೀನೋಡು..
ಬಣ್ಣಿಸಲಾಗದ ಆನ೦ದ.. ನೀ ಕಾಣುವೆ ಆಗ ಓ ಕ೦ದ..
ಬಣ್ಣಿಸಲಾಗದ ಆನ೦ದ.. ನೀ ಕಾಣುವೆ ಆಗ ಓ ಕ೦ದ..
ಹರಿ ಹರಿ ಎನ್ನುತ ನೀ ಹಾಡು ಹರಿನಾಮದ ಮಹಿಮೆಯ ನೀನೋಡು


ಹರಿನಾಮದ ಮಹಿಮೆಯಾ.. ಹ.ಹ.. ನೀನೋಡು..ಊ...

2 comments:

Unknown said...

Krishnaarpanamasthu

Anonymous said...

My fever song upload plz

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...