Wednesday, June 2, 2010

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ

ಚಿತ್ರ : ಪ್ರೇಮಾನುಬಂಧ / premaanubhanda
ಹಾಡು: ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ / beladingalondu hennaagi bandante kande
ಸಾಹಿತ್ಯ : ಚಿ.ಉದಯಶಂಕರ್
ಹಾಡಿದವರು : ಎಸ್.ಪಿ.ಬಾಲಸುಬ್ರಮಣ್ಯಂ
ಸಂಗೀತ : ರಾಜನ್ - ನಾಗೇಂದ್ರ


ಈ ಹಾಡನ್ನ ಇಲ್ಲಿ ನೋಡಿ: www.youtube.com/watch?v=0EcfdeoGdzM


ಬೆಳದಿಂಗಳೊಂದು... ಹೆಣ್ಣಾಗಿ ಬಂದಂತೆ ಕಂಡೆ..
..........
ಬೆಳದಿಂಗಳೊಂದು... ಹೆಣ್ಣಾಗಿ ಬಂದಂತೆ ಕಂಡೆ..
ಕಂಡು ನಿಂತೆ... ನಿಂತು ಸೋತೆ...ಏ... ಸೋತು ಕವಿಯಾ...ಗಿ.. ಕವಿತೆ ಹಾಡಿದೆ...


ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ..
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ..
ಕಂಡು ನಿಂತೆ... ನಿಂತು ಸೋತೆ.. ಸೋತು ಕವಿಯಾ...ಗಿ.. ಕವಿತೆ ಹಾಡಿದೆ... ಏ..
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ..ಎ...


ಹೊಸದಾಗಿ ಮೊಗ್ಗೊಂದು ಹೂವಾಗಿ..ಇ.., ಆ ಹೂವೇ ಈ ಹೆಣ್ಣ ಮೊಗವಾಗಿ...ಇ...
ಸುಳಿದಾಡೋ ಮಿಂಚೊಂದು ಕಣ್ಣಾಗಿ.., ಗಿಳಿಮಾತು ಅವಳಾಡೊ ಮಾತಾಗಿ..
ತಂಗಾಳಿಗೆ ಓಲಾಡುವಾ..ಅ..ಹಾ.. ತಂಗಾಳಿಗೆ ಓಲಾಡುವಾ...
ಲತೆಯೊಂದು ನಡುವಾಯಿತೇನೊ..ಓ..
ನವಿಲೊಂದು ಕುಣಿದಂತೆ ನಡೆವಾಗ ಸಂತೋಷಗೊಂಡೆ -||ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ..||-


ಹಗಲಲ್ಲಿ ಕಣ್ಮುಂದೆ ನೀನಿರುವೆ.., ಇರುಳಲ್ಲಿ ಕನಸಲ್ಲಿ ನೀ ಬರುವೆ..ಏ...
ಜೊತೆಯಾಗಿ ಇರುವಾಸೆ ತಂದಿರುವೆ.., ನನಗೆಂದು ಹೊಸ ಬಾಳು ನೀ ತರುವೆ..ಏ...
ಬಂಗಾರಿಯೇ...ಸಿಂಗಾರಿಯೇ..ಅ..
ಬಂಗಾರಿಯೇ..ಸಿಂಗಾರಿಯೇ...
ನನ್ನೊಮ್ಮೆ ನೀ ನೋಡು ಚೆಲುವೆ..ಏ..
ಓಲವಿಂದ ಬಂದೀಗ ನನ್ನನ್ನು ನೀ ಸೇರು ಹೂವೇ... -||ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ..||-

No comments:

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...