ಚಿತ್ರ: ಗಾಳಿ ಮಾತು / gaali maatu
ಹಾಡು: ಒಮ್ಮೆ ನಿನ್ನನ್ನು ಕಣ್ ತುಂಬಾ.. / omme ninnannu kan tumba
ಸಾಹಿತ್ಯ: ಚಿ ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ಎಸ್.ಜಾನಕಿ
ಈ ಹಾಡನ್ನ ಇಲ್ಲಿ ನೋಡಿ: www.youtube.com/watch?v=yE5gyDLpOjw
ಒಮ್ಮೆ ನಿನ್ನನ್ನು ಕಣ್ ತುಂಬಾ ಕಾಣುವಾಸೆ ಎಲ್ಲಿರುವೆ..
ಒಮ್ಮೆ ನಿನ್ನನ್ನು ಕಣ್ ತುಂಬಾ ಕಾಣುವಾಸೆ ಎಲ್ಲಿರುವೆ...
ಭುವಿಯಲ್ಲೋ..ಬಾನಲ್ಲೋ...ಇನ್ನೆಲ್ಲೋ..ಒ..ನಾ ಕಾಣೇ.. -||ಒಮ್ಮೆ ನಿನ್ನನ್ನು ಕಣ್ ತುಂಬಾ..||-
ಅರಳಿರುವ ಹೂವಿನಲ್ಲಿ ನಿನ್ನ ನೋಟವಾ...ಆ..ಆ...ಆ...
ಹರಿಯುತಿಹ ನೀರಿನಲ್ಲಿ ನಿನ್ನ ಓಟವಾ....ಆ..ಆ...
ಇಂಪಾದ ಗಾನದಲ್ಲಿ.. ನಿನ್ನ ಮೊಗದ ಭಾವವಾ..ಅ...
ಮಳೆ ಬಿಲ್ಲ ಬಣ್ಣದಲ್ಲಿ ನಿನ್ನ ಅಂದವಾ...ಆ..ಆ...ಆ...
ನವಿಲಾಡೋ ನಾಟ್ಯದಲ್ಲಿ ನಿನ್ನ ಚಂದವಾ...ಅ...
ತಂಪಾದ ಗಾಳಿಯಲ್ಲಿ ನೀನಾಡೋ ಆಟವಾ..
ದಿನವೆಲ್ಲಾ ನಾ ಕಂಡೆ... ನಾ ಕಂಡು ಬೆರೆಗಾದೆ... -||ಒಮ್ಮೆ ನಿನ್ನನ್ನು ಕಣ್ ತುಂಬಾ..||-
ಮಿನುಗುತಿಹ ತಾರೆಯೆಲ್ಲಾ.. ನಿನ್ನ ಕಂಗಳೋ..ಒ..ಓ..
ನಗುತಿರಲು ಭೂಮಿಗೆಲ್ಲಾ ಬೆಳದಿಂಗಳೋ....ಒ...ಓ..
ಆ ಬೆಳ್ಳೀ ಮೋಡವೆಲ್ಲಾ ನೀ ಬರೆದ ಬೊಂಬೆಗಳೋ...
ಮೂಡಣದ ಅಂಚಿನಿಂದ ನಿನ್ನ ಪಯಣವೋ..ಒ..ಓ..
ಮುಂಜಾನೆ ಕಾಣೋ ಕೆಂಪು ಚಂದುಟಿಯ ಬಣ್ಣವೋ..ಒ..ಓ..
ಆಗಸದ ನೀಲಿಯೆಲ್ಲಾ ನೀ ನಡೆವ ಹಾದಿಯೋ..
ನಿನ್ನಂತೆ ಯಾರಿಲ್ಲಾ...ಅ... ನಿನ್ನಲ್ಲೇ ಮನಸೆಲ್ಲಾ... -||ಒಮ್ಮೆ ನಿನ್ನನ್ನು ಕಣ್ ತುಂಬಾ..||-
Subscribe to:
Post Comments (Atom)
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್ ಸಾಹಿತ್ಯ:...
-
ಹಾಡು:ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ / bagila terediruve taaye ಚಿತ್ರ : ಪ್ರೇಮಾನುಬಂಧ / premanubhanda ಸಾಹಿತ್ಯ : ಚಿ।ಉದಯ್ ಶಂಕರ್ ಸಂಗೀತ :...
-
ಹಾಡು: ಕಮಲದ ಮೊಗದೊಳೆ ಕಮಲದ ಕಣ್ಣೋಳೆ / kamalada mogadole kamalada kannole ಚಿತ್ರ: ಹೊಸ ಇತಿಹಾಸ (1984) / hosa itihaasa ಸಾಹಿತ್ಯ: ಚಿ | ಉದಯಶಂಕರ್ ಸಂಗ...
-
ಹಾಡು: ದೇವರ ಆಟ ಬಲ್ಲವರಾರು / devara aata ballavaraaru ಚಿತ್ರ: ಅವಳ ಹೆಜ್ಜೆ (1981)/ avala hejje ಸಾಹಿತ್ಯ: ಚಿ॥ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡ...
6 comments:
tumbaa thanks.. nanage I rithiya blaagina avashyakathe thumbaa ittu shEhithare,, DhanyvaadagaLu.
- Santoshkumar Mehandale
09448281770
dhnayavaadagalu Santosh ravare..
nimma protsaaha sadaa irali endu bayasuve... -- vinay
Aahha intaha haadu innu mundina piligeyalli baralu saadyaane illa olle sumaduravaada haadu. manassige mudha nidide Dhanyavadagalu......!!!!!
ಈ ಹಾಡನ್ನು ಮೆಚ್ಚಿ ನಿಮ್ಮ ಅಭಿಪ್ರಾಯ ಸೂಚಿಸಿದಕ್ಕೆ ಬಹಳ ಧನ್ಯವಾದಗಳು.. :)
priyatamanannu kuritante kaanuva ee haadu suryanannu kuritu barediruvudu!haadina koneya charanakke bandaaga maatra ee haadu sooryana bagge ide embudu gottaaguttade.
vinay,nimma blog chennaagide.abhinandane.
Manikanth
ಹೌದು ಮಣಿಕಾಂತ್ ರವರೆ, ಈ ಹಾಡು ಮೂಲತಃ ಸೂರ್ಯನ ಮೇಲೆ ಬರೆದದ್ದು...! ಆ ಕಾಲಕ್ಕೆ ಈ ಹಾಡನ್ನು ಭಕ್ತಿಗೀತೆ ಎಂದು ಬಣ್ಣಿಸಲಾಗಿತ್ತು!! (ಹೀಗಂತ ಒಂದು ಬ್ಲಾಗಿನಲ್ಲಿ ಓದಿದ ನೆನಪು..). ಇದೆ ರೀತಿಯ ಇನ್ನೊಂದು ಹಾಡು "ರವಿ ನೀನು ಆಗಸದಿಂದ.." -- "ಹೊಸಬೆಳಕು" ಚಿತ್ರದಲ್ಲಿದೆ..
ಮತ್ತೊಮ್ಮೆ, ನನ್ನ ಬ್ಲಾಗಿಗೆ ಭೇಟಿಯಿತ್ತು ಕನ್ನಡ ಹಾಡುಗಳ ಸಾಹಿತ್ಯವನ್ನು ಪ್ರೋತ್ಸಾಹಿಸಿದಕ್ಕೆ ನಿಮಗೆ ಅನಂತ ಧನ್ಯವಾದಗಳು... :)
Post a Comment