Wednesday, May 12, 2010

ಚೆಲುವಿನ ತಾರೆ ಒಲವಿನ ಧಾರೆ

ಚಿತ್ರ : ಶ್ರೀನಿವಾಸ ಕಲ್ಯಾಣ (೧೯೭೪)/ srinivasa kalyana
ಹಾಡು : ಚೆಲುವಿನ ತಾರೆ ಒಲವಿನ ಧಾರೆ / chaluvina tare olavina dhare
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್ - ನಾಗೇಂದ್ರ
ಹಾಡಿದವರು : ಡಾ.ರಾಜಕುಮಾರ್ ಮತ್ತು ಎಸ್.ಜಾನಕಿ

ಈ ಹಾಡನ್ನು ಇಲ್ಲಿ ನೋಡಿ: www.youtube.com/watch?v=txF6CBXYonE&feature=related

[ರಾಜ್:] ಚೆಲುವಿನ ತಾರೆ... ತಾ..ರೆ... ತಾ...ರೆ..
ಒಲವಿನ ಧಾರೆ...ಎ...
ಭಾಮಿನಿ ಬಾರೆ... ಆಗಲಿರಲಾರೆ...

[ರಾಜ್:] ಚೆಲುವಿನ ತಾರೆ.. ಒಲವಿನ ಧಾರೆ..
ಭಾಮಿನಿ ಬಾರೆ... ಆಗಲಿರಲಾರೆ...
ಕನಸಲೂ ನೀನೇ.. ಮನಸಲೂ ನೀನೇ..
ಕನಸಲೂ ನೀ..ನೇ.. ಮನಸಲೂ ನೀನೇ..
ಒ..ನನ್ನೀ ಪ್ರಾಣದ ಪ್ರಾಣವೂ ನೀನೇ..
ಕಾಣದೆ ನಿನ್ನ ನಾನಿರಲಾರೆ...

[ಜಾನಕಿ:] ಸ್ವಾಮಿಯು ನೀನು.. ಸೇವಕಿ ನಾನು...
ಪ್ರೇಮದ ಪೂಜೆಗೆ ನಾ ಕಾದಿಹೆನು..ಉ...
ಪ್ರೇಮದ ಪೂಜೆಗೆ ನಾ ಕಾದಿಹೆನು...

[ರಾಜ್:] ನೆನೆಯುತ ನಿನ್ನ ಕರೆಯುವ ಮುನ್ನ..
ದರುಶನಕ್ಕೆಂದೇ ಧಾವಿಸಿ ಬಂದೆ...
[ಜಾನಕಿ:] ನನ್ನೇ ನಿನಗೆ ಕಾಣಿಕೆ ತಂದೆ..
ಸ್ವೀಕರಿಸೆನ್ನ ಕರುಣಿಸಿ ಎಂದೆ..


[ರಾಜ್:] ಓ..ನಿನ್ನಲ್ಲೇ ನಾನು ಒಂದಾಗಿರಲು..
ಪ್ರೇಮದ ಕಾಣಿಕೆ ನನಗಿನ್ನೇಕೆ...ಎ...
ಭಾಮಿನೀ ಬಾರೆ.. ಆಗಲಿರಲಾರೆ...
[ಜಾನಕಿ:] ಸ್ವಾಮಿಯು ನೀನು.. ಸೇವಕಿ ನಾನು..
ಪ್ರೇಮದ ಪೂಜೆಗೆ ನಾ ಕಾದಿಹೆನು..ಉ..
ಪ್ರೇಮದ ಪೂಜೆಗೆ ನಾ ಕಾದಿಹೆನು...

[ಜಾನಕಿ:] ಆಸೆಯ ಲತೆಗೆ ಆಸರೆಯಾದೆ...
ಬಾಳಿಗೆ ಬಾನಿಗೆ ಭಾಸ್ಕರನಾದೆ...
[ರಾಜ್:] ಪ್ರೇಮದ ಸುಮದ ಸೌರಭವಾದೆ..
ಪ್ರಣಯದ ಪಯಣಕೆ ನೀ ಜೊತೆಯಾದೆ...
[ಜಾನಕಿ:] ಓ..ನಿನ್ನನುರಾಗದ ಉಯ್ಯಾಲೆಯಲಿ..
ತೂಗುತ..ಆಡುವ..ಭಾಗ್ಯವ ತಂದೆ..ಎ...
ಬಾ ಹೃದಯಯೇಶಾ...ಪ್ರಭು ಶ್ರೀನಿವಾಸ...


[ರಾಜ್:] ಕನಸಲೂ ನೀ..ನೇ.. ಮನಸಲೂ ನೀನೇ..
[ಜಾನಕಿ:] ನನ್ನೀ ಪ್ರಾಣದ.. ಪ್ರಾಣವೂ ನೀನೇ...
[chorus] : ಕಾಣದೆ ನಿನ್ನ ನಾನಿರಲಾರೆ...
[ರಾಜ್:] ಚೆಲುವಿನ ತಾರೆ.. ಒಲವಿನ ಧಾರೆ..
ಭಾಮಿನೀ ಬಾರೆ.. ಆಗಲಿರಲಾರೆ...
ಆಗಲಿರಲಾರೆ...

No comments:

ದೇವಾ ಮಹಾದೇವ

ಹಾಡು: ದೇವಾ ಮಹಾದೇವ/deva mahadeva ಚಿತ್ರ: ಶಿವ ಮೆಚ್ಚಿದ ಕಣ್ಣಪ್ಪ  (1988)/shiva mechchida kannappa ಸಾಹಿತ್ಯ: ಚಿ|ಉದಯಶಂಕರ್ ಸಂಗೀತ: ಟಿ. ಜಿ. ಲಿಂಗಪ್ಪ ...